ಬೆಂಗಳೂರು: ಕಳೆದ 2023 ಜೂನ್ 11 ರಂದು ಶಕ್ತಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ಇದೀಗ ಯಶ್ವಸಿ ಶಕ್ತಿ ಯೋಜನೆಯ 365 ದಿನ ಪೂರೈಕೆಯ ಸಂತಸದಲ್ಲಿ ಕಾಂಗ್ರೆಸ್ ಸಂಭ್ರಮಿಸುತಿದೆ.
ಕಳೆದ ವರ್ಷ ಮಹಿಳೆಯರಿಗಾಗಿ ಉಚಿತ ಬಸ್ ಸೌಲಭ್ಯ ನೀಡುವ ನೀಟ್‌ನಲ್ಲಿ ಶಕ್ತಿ ಯೋಜನೆಯನ್ನು ಮಹಿಳೆಯರಿಗಾಗಿ ಲಾಂಚ್ ಮಾಡಲಾಗಿತ್ತು.ಇದೀಗ ಯಶ್ವಸಿಯಾಗಿ ಶಕ್ತಿ ಯೋಜನೆ ಮುಂದುವರೆದಿದ್ದು, ಕೋಟ್ಯಾಂತರ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಜೂನ್ 11, 2023ರಿಂದ ಇಲ್ಲಿವರೆಗೂ ಕೋಟಿ ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ.
KSRTCಗೆ ಇಲ್ಲಿವರೆಗೂ ₹2070 ಕೋಟಿ ಶಕ್ತಿಯಿಂದ ವ್ಯಯ. BMTCಗೆ ಮಹಿಳಾ ಶಕ್ತಿಯಿಂದ 937 ಕೋಟಿ ರೂಪಾಯಿ ವ್ಯಯ. ವಾಯುವ್ಯ ಸಾರಿಗೆ 1352ಕೋಟಿ ರೂ, ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ 1120 ಕೋಟಿ ರೂ ವ್ಯಯ. ಒಟ್ಟು 5481 ಸಾವಿರ ಕೋಟಿ ರೂಪಾಯಿ ವ್ಯಯದ ಲೆಕ್ಕ ಹೇಳ್ತಿರೋ ಸಾರಿಗೆ ನಿಗಮಗಳು ಸಾವಿರಾರು ಕೋಟಿ ವ್ಯಯ ಆದ್ರೂ ಸರಿಯಾದ ರೀತಿಯಲ್ಲಿ ಶಕ್ತಿ ಯೋಜನೆಯ ಅನುದಾನ ಪೂರೈಕೆಯಲ್ಲಿ ಹಿನ್ನಡೆ ಸಾಧಿಸಿದೆ.
ಜೂನ್ 11, 2023ರಿಂದ ಇಲ್ಲಿವರೆಗೂ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ
- ಕೆಎಸ್ ಆರ್ ಟಿಸಿ – 68,22,87,119
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 2070,63, 17,578
- ಬಿಎಂಟಿಸಿ – 71,49,48,383
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 932,24,59,029
- ವಾಯುವ್ಯ- 51,87,56,491
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 1345,66,12,565
- ಕಲ್ಯಾಣ ಕರ್ನಾಟಕ – 33,11,62,645
ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 1114,65,84,695
ಜೂನ್ 11 ರಿಂದ ಇಲ್ಲಿವರೆಗೂ 225,15,97,273ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಒಟ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಮೌಲ್ಯ- 5481,40,62,803