ಬೆಂಗಳೂರು: ಈ ವರ್ಷದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಒಟ್ಟು 131 ಗಣ್ಯರಿಗೆ ವಿವಿಧ ಪದ್ಮ ಪ್ರಶಸ್ತಿಗಳ ಮೂಲಕ ಗೌರವ ಸಲ್ಲಿಸಲಾಗಿದೆ. ಇದರಲ್ಲಿ ಕರ್ನಾಟಕದ 8 ಸಾಧಕರು ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದಿಂದ 7 ಮಂದಿ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದು, ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಮಂಡ್ಯ ಮೂಲದ ಪುಸ್ತಕ ಪ್ರೇಮಿ ಅಂಕೇಗೌಡ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ವೈದ್ಯ ಡಾ. ಸುರೇಶ್ ಹನಗವಾಡಿ, ಹಾಗೂ ಬೆಂಗಳೂರಿನಲ್ಲಿ ಸುಮಂಗಲಿ ಸೇವಾ ಆಶ್ರಮ ಸ್ಥಾಪಿಸಿ ಮಹಿಳಾ ಸಬಲೀಕರಣ, ಶಿಶು ಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕಿ ಎಸ್.ಜಿ. ಸುಶೀಲಮ್ಮ ಸೇರಿದ್ದಾರೆ.
ಇದಲ್ಲದೆ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಬೆಳಗಾವಿಯ ಡಾ. ಪ್ರಭಾಕರ್ ಕೋರೆ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಶಿಶೇಖರ ವೆಂಪತಿ, ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದ ಸಾಧನೆಗೆ ಶುಭಾ ವೆಂಕಟೇಶ್ ಅಯ್ಯಂಗಾರ್, ಹಾಗೂ ಉದ್ಯಮ ಮತ್ತು ವ್ಯಾಪಾರ ಕ್ಷೇತ್ರದ ಸಾಧನೆಗಾಗಿ (ಮರಣೋತ್ತರವಾಗಿ) ಟಿ.ಟಿ. ಜಗನ್ನಾಥ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಕಲಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಶತಾವಧಾನಿ ಆರ್. ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
ಈ ವರ್ಷದ ಪದ್ಮ ಪ್ರಶಸ್ತಿಗಳ ಮೂಲಕ ಕೇಂದ್ರ ಸರ್ಕಾರವು ದೇಶದ ವಿವಿಧ ಭಾಗಗಳಲ್ಲಿ ಪ್ರಚಾರವಿಲ್ಲದೇ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿದೆ. ಹಿಂದುಳಿದ ಹಾಗೂ ದಲಿತ ಸಮುದಾಯಗಳು, ಪ್ರಾಚೀನ ಬುಡಕಟ್ಟು ಜನಾಂಗದವರು, ಹಾಗೂ ದೂರದ ಮತ್ತು ಕಷ್ಟಕರ ಪ್ರದೇಶಗಳಿಂದ ಬಂದ ಅನೇಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಆರೋಗ್ಯ ರಕ್ಷಣೆ, ಶಿಕ್ಷಣ, ಜೀವನೋಪಾಯ, ನೈರ್ಮಲ್ಯ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ದಿವ್ಯಾಂಗರು, ಮಹಿಳೆಯರು, ಮಕ್ಕಳು, ದಲಿತರು ಹಾಗೂ ಬುಡಕಟ್ಟು ಸಮುದಾಯಗಳ ಹಿತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟಿರುವವರು ಈ ಬಾರಿ ಗೌರವಕ್ಕೆ ಪಾತ್ರರಾಗಿದ್ದಾರೆ.
| ಪದ್ಮವಿಭೂಷಣ ಪ್ರಶಸ್ತಿ ಪಡೆದವರ ಪಟ್ಟಿ | ||
| ಹೆಸರು | ಕ್ಷೇತ್ರ | ರಾಜ್ಯ / ದೇಶ |
| ಧರ್ಮೇಂದ್ರ ಸಿಂಗ್ ಡಿಯೋಲ್ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಕೆ. ಟಿ. ಥಾಮಸ್ | ಸಾರ್ವಜನಿಕ ವ್ಯವಹಾರಗಳು | ಕೇರಳ |
| ಎನ್. ರಾಜಮ್ | ಕಲೆ | ಉತ್ತರ ಪ್ರದೇಶ |
| ಪಿ. ನಾರಾಯಣನ್ | ಸಾಹಿತ್ಯ ಮತ್ತು ಶಿಕ್ಷಣ | ಕೇರಳ |
| ವಿ. ಎಸ್. ಅಚ್ಯುತಾನಂದನ್ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಕೇರಳ |
| ಪದ್ಮಭೂಷಣ ಪಡೆದವರ ಪಟ್ಟಿ | ||
| ಹೆಸರು | ಕ್ಷೇತ್ರ | ರಾಜ್ಯ / ದೇಶ |
| ಅಲ್ಕಾ ಯಾಗ್ನಿಕ್ | ಕಲೆ | ಮಹಾರಾಷ್ಟ್ರ |
| ಭಗತ್ ಸಿಂಗ್ ಕೋಶಿಯಾರಿ | ಸಾರ್ವಜನಿಕ ವ್ಯವಹಾರಗಳು | ಉತ್ತರಾಖಂಡ |
| ಕಳ್ಳಿಪಟ್ಟಿ ರಾಮಸಾಮಿ ಪಳನಿಸ್ವಾಮಿ | ವೈದ್ಯಕೀಯ | ತಮಿಳುನಾಡು |
| ಮಮ್ಮುಟ್ಟಿ | ಕಲೆ | ಕೇರಳ |
| ಡಾ. ನೋರಿ ದತ್ತಾತ್ರೇಯಡು | ವೈದ್ಯಕೀಯ | ಅಮೇರಿಕಾ (USA) |
| ಪಿಯೂಷ್ ಪಾಂಡೆ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಎಸ್. ಕೆ. ಎಂ. ಮೈಲಾನಂದನ್ | ಸಮಾಜ ಸೇವೆ | ತಮಿಳುನಾಡು |
| ಶತಾವಧಾನಿ ಆರ್. ಗಣೇಶ್ | ಕಲೆ | ಕರ್ನಾಟಕ |
| ಶಿಬು ಸೊರೆನ್ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಜಾರ್ಖಂಡ್ |
| ಉದಯ್ ಕೋಟಕ್ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
| ವಿ. ಕೆ. ಮಲ್ಹೋತ್ರಾ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ದೆಹಲಿ |
| ವೆಲ್ಲಪ್ಪಳ್ಳಿ ನಟೇಸನ್ | ಸಾರ್ವಜನಿಕ ವ್ಯವಹಾರಗಳು | ಕೇರಳ |
| ವಿಜಯ ಅಮೃತ್ರಾಜ್ | ಕ್ರೀಡೆ | ಅಮೇರಿಕಾ (USA) |
| ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕರು | ||
| ಹೆಸರು | ಕ್ಷೇತ್ರ | ರಾಜ್ಯ / ದೇಶ |
| ಎ. ಇ. ಮುತ್ತುನಾಯಗಮ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಕೇರಳ |
| ಅನಿಲ್ ಕುಮಾರ್ ರಸ್ತೋಗಿ | ಕಲೆ | ಉತ್ತರ ಪ್ರದೇಶ |
| ಅಂಕೇಗೌಡ ಎಂ. | ಸಮಾಜ ಸೇವೆ | ಕರ್ನಾಟಕ |
| ಆರ್ಮಿಡಾ ಫರ್ನಾಂಡಿಸ್ | ವೈದ್ಯಕೀಯ | ಮಹಾರಾಷ್ಟ್ರ |
| ಅರವಿಂದ್ ವೈದ್ಯ | ಕಲೆ | ಗುಜರಾತ್ |
| ಅಶೋಕ್ ಖಾಡೆ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
| ಅಶೋಕ್ ಕುಮಾರ್ ಸಿಂಗ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಉತ್ತರ ಪ್ರದೇಶ |
| ಅಶೋಕ್ ಕುಮಾರ್ ಹಲ್ದಾರ್ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ಬಲದೇವ್ ಸಿಂಗ್ | ಕ್ರೀಡೆ | ಪಂಜಾಬ್ |
| ಭಗವಾನ್‌ದಾಸ್ ರೈಕ್ವಾರ್ | ಕ್ರೀಡೆ | ಮಧ್ಯಪ್ರದೇಶ |
| ಭರತ್ ಸಿಂಗ್ ಭಾರತಿ | ಕಲೆ | ಬಿಹಾರ |
| ಭಿಕ್ಯಾ ಲಡಕ್ಯಾ ದಿಂಡಾ | ಕಲೆ | ಮಹಾರಾಷ್ಟ್ರ |
| ವಿಶ್ವ ಬಂಧು (ಮರಣೋತ್ತರ) | ಕಲೆ | ಬಿಹಾರ |
| ಬ್ರಿಜ್ ಲಾಲ್ ಭಟ್ | ಸಮಾಜ ಸೇವೆ | ಜಮ್ಮು ಮತ್ತು ಕಾಶ್ಮೀರ |
| ಬುದ್ಧ ರಶ್ಮಿ ಮಣಿ | ಇತರೆ – ಪುರಾತತ್ವ | ಉತ್ತರ ಪ್ರದೇಶ |
| ಡಾ. ಬುಧ್ರಿ ಟಾಟಿ | ಸಮಾಜ ಸೇವೆ | ಛತ್ತೀಸ್ಗಢ |
| ಚಂದ್ರಮೌಳಿ ಗಡ್ಡಮನುಗು | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತೆಲಂಗಾಣ |
| ಚರಣ್ ಹೆಂಬ್ರಮ್ | ಸಾಹಿತ್ಯ ಮತ್ತು ಶಿಕ್ಷಣ | ಒಡಿಶಾ |
| ಚಿರಂಜಿ ಲಾಲ್ ಯಾದವ್ | ಕಲೆ | ಉತ್ತರ ಪ್ರದೇಶ |
| ದೀಪಿಕಾ ರೆಡ್ಡಿ | ಕಲೆ | ತೆಲಂಗಾಣ |
| ಧಾರ್ಮಿಕ್‌ಲಾಲ್ ಚುನಿಲಾಲ್ ಪಾಂಡ್ಯ | ಕಲೆ | ಗುಜರಾತ್ |
| ಗಡ್ಡೆ ಬಾಬು ರಾಜೇಂದ್ರ ಪ್ರಸಾದ್ | ಕಲೆ | ಆಂಧ್ರಪ್ರದೇಶ |
| ಗಫ್ರುದ್ದೀನ್ ಮೇವಾಟಿ ಜೋಗಿ | ಕಲೆ | ರಾಜಸ್ಥಾನ |
| ಗಂಭೀರ್ ಸಿಂಗ್ ಯೋನ್ಜೋನ್ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ಗರಿಮೆಲ್ಲ ಬಾಲಕೃಷ್ಣ ಪ್ರಸಾದ್ (ಮರಣೋತ್ತರ) | ಕಲೆ | ಆಂಧ್ರಪ್ರದೇಶ |
| ಗಾಯತ್ರಿ ಬಾಲಸುಬ್ರಮಣಿಯನ್ ಮತ್ತು ರಂಜನಿ ಬಾಲಸುಬ್ರಮಣಿಯನ್ (ಜೋಡಿ) | ಕಲೆ | ತಮಿಳುನಾಡು |
| ಗೋಪಾಲ್ ಜಿ ತ್ರಿವೇದಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಬಿಹಾರ |
| ಗುಡೂರು ವೆಂಕಟ್ ರಾವ್ | ವೈದ್ಯಕೀಯ | ತೆಲಂಗಾಣ |
| ಹೆಚ್. ವಿ. ಹಂಡೆ | ವೈದ್ಯಕೀಯ | ತಮಿಳುನಾಡು |
| ಹ್ಯಾಲಿ ವಾರ್ | ಸಮಾಜ ಸೇವೆ | ಮೇಘಾಲಯ |
| ಹರಿ ಮಾಧಬ್ ಮುಖೋಪಾಧ್ಯಾಯ (ಮರಣೋತ್ತರ) | ಕಲೆ | ಪಶ್ಚಿಮ ಬಂಗಾಳ |
| ಹರಿಚರಣ್ ಸೈಕಿಯಾ | ಕಲೆ | ಅಸ್ಸಾಂ |
| ಹರ್ಮನ್‌ಪ್ರೀತ್ ಕೌರ್ ಭುಲ್ಲರ್ | ಕ್ರೀಡೆ | ಪಂಜಾಬ್ |
| ಇಂದರ್‌ಜಿತ್ ಸಿಂಗ್ ಸಿಧು | ಸಮಾಜ ಸೇವೆ | ಚಂಡೀಗಢ |
| ಜನಾರ್ದನ್ ಬಾಪುರಾವ್ ಬೋಥೆ | ಸಮಾಜ ಸೇವೆ | ಮಹಾರಾಷ್ಟ್ರ |
| ಜೋಗೇಶ್ ದೌರಿ | ಇತರೆ – ಕೃಷಿ | ಅಸ್ಸಾಂ |
| ಜುಜರ್ ವಾಸಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಮಹಾರಾಷ್ಟ್ರ |
| ಜ್ಯೋತಿಷ್ ದೇಬ್ನಾಥ್ | ಕಲೆ | ಪಶ್ಚಿಮ ಬಂಗಾಳ |
| ಕೆ. ಪಜನಿವೇಲ್ | ಕ್ರೀಡೆ | ಪುದುಚೇರಿ |
| ಕೆ. ರಾಮಸಾಮಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತಮಿಳುನಾಡು |
| ಕೆ. ವಿಜಯ್ ಕುಮಾರ್ | ನಾಗರಿಕ ಸೇವೆ | ತಮಿಳುನಾಡು |
| ಕಬೀಂದ್ರ ಪುರಕಾಯಸ್ಥ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಅಸ್ಸಾಂ |
| ಕೈಲಾಶ್ ಚಂದ್ರ ಪಂತ್ | ಸಾಹಿತ್ಯ ಮತ್ತು ಶಿಕ್ಷಣ | ಮಧ್ಯಪ್ರದೇಶ |
| ಕಲಾಮಂಡಲಂ ವಿಮಲಾ ಮೆನನ್ | ಕಲೆ | ಕೇರಳ |
| ಕೇವಲ್ ಕಿಶನ್ ಥಕ್ರಾಲ್ | ವೈದ್ಯಕೀಯ | ಉತ್ತರ ಪ್ರದೇಶ |
| ಖೇಮ್ ರಾಜ್ ಸುಂದ್ರಿಯಾಲ್ | ಕಲೆ | ಹರಿಯಾಣ |
| ಕೊಲ್ಲಕಲ್ ದೇವಕಿ ಅಮ್ಮ ಜಿ. | ಸಮಾಜ ಸೇವೆ | ಕೇರಳ |
| ಕೃಷ್ಣಮೂರ್ತಿ ಬಾಲಸುಬ್ರಮಣಿಯನ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತೆಲಂಗಾಣ |
| ಕುಮಾರ್ ಬೋಸ್ | ಕಲೆ | ಪಶ್ಚಿಮ ಬಂಗಾಳ |
| ಕುಮಾರಸಾಮಿ ತಂಗರಾಜ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತೆಲಂಗಾಣ |
| ಪ್ರೊ. (ಡಾ.) ಲಾರ್ಸ್-ಕ್ರಿಶ್ಚಿಯನ್ ಕೋಚ್ | ಕಲೆ | ಜರ್ಮನಿ |
| ಲಿಯುಡ್ಮಿಲಾ ವಿಕ್ಟೋರೊವ್ನಾ ಖೋಖ್ಲೋವಾ | ಸಾಹಿತ್ಯ ಮತ್ತು ಶಿಕ್ಷಣ | ರಷ್ಯಾ |
| ಮಾಧವನ್ ರಂಗನಾಥನ್ | ಕಲೆ | ಮಹಾರಾಷ್ಟ್ರ |
| ಮಾಗಂಟಿ ಮುರಳಿ ಮೋಹನ್ | ಕಲೆ | ಆಂಧ್ರಪ್ರದೇಶ |
| ಮಹೇಂದ್ರ ಕುಮಾರ್ ಮಿಶ್ರಾ | ಸಾಹಿತ್ಯ ಮತ್ತು ಶಿಕ್ಷಣ | ಒಡಿಶಾ |
| ಮಹೇಂದ್ರ ನಾಥ್ ರಾಯ್ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ಮಾಮಿಡಾಲ ಜಗದೀಶ್ ಕುಮಾರ್ | ಸಾಹಿತ್ಯ ಮತ್ತು ಶಿಕ್ಷಣ | ದೆಹಲಿ |
| ಮಂಗಳಾ ಕಪೂರ್ | ಸಾಹಿತ್ಯ ಮತ್ತು ಶಿಕ್ಷಣ | ಉತ್ತರ ಪ್ರದೇಶ |
| ಮೀರ್ ಹಾಜಿಭಾಯ್ ಕಸಂಭಾಯ್ | ಕಲೆ | ಗುಜರಾತ್ |
| ಮೋಹನ್ ನಾಗರ್ | ಸಮಾಜ ಸೇವೆ | ಮಧ್ಯಪ್ರದೇಶ |
| ನಾರಾಯಣ ವ್ಯಾಸ್ | ಇತರೆ – ಪುರಾತತ್ವ | ಮಧ್ಯಪ್ರದೇಶ |
| ನರೇಶ್ ಚಂದ್ರ ದೇವ್ ವರ್ಮಾ | ಸಾಹಿತ್ಯ ಮತ್ತು ಶಿಕ್ಷಣ | ತ್ರಿಪುರಾ |
| ನೀಲೇಶ್ ವಿನೋದ್‌ಚಂದ್ರ ಮಾಂಡ್ಲೆವಾಲಾ | ಸಮಾಜ ಸೇವೆ | ಗುಜರಾತ್ |
| ನೂರುದ್ದೀನ್ ಅಹ್ಮದ್ | ಕಲೆ | ಅಸ್ಸಾಂ |
| ಒಥವಾಲ್ ತಿರುತಣಿ ಸ್ವಾಮಿನಾಥನ್ | ಕಲೆ | ತಮಿಳುನಾಡು |
| ಡಾ. ಪದ್ಮ ಗುರ್ಮೆಟ್ | ವೈದ್ಯಕೀಯ | ಲಡಾಖ್ |
| ಪಾಲ್ಕೊಂಡ ವಿಜಯ್ ಆನಂದ್ ರೆಡ್ಡಿ | ವೈದ್ಯಕೀಯ | ತೆಲಂಗಾಣ |
| ಪೋಖಿಲಾ ಲೆಕ್ತೆಪಿ | ಕಲೆ | ಅಸ್ಸಾಂ |
| ಡಾ. ಪ್ರಭಾಕರ್ ಬಸವಪ್ರಭು ಕೋರೆ | ಸಾಹಿತ್ಯ ಮತ್ತು ಶಿಕ್ಷಣ | ಕರ್ನಾಟಕ |
| ಪ್ರತೀಕ್ ಶರ್ಮಾ | ವೈದ್ಯಕೀಯ | ಅಮೇರಿಕಾ (USA) |
| ಪ್ರವೀಣ್ ಕುಮಾರ್ | ಕ್ರೀಡೆ | ಉತ್ತರ ಪ್ರದೇಶ |
| ಪ್ರೇಮ್ ಲಾಲ್ ಗೌತಮ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಹಿಮಾಚಲ ಪ್ರದೇಶ |
| ಪ್ರಸೇನ್‌ಜಿತ್ ಚಟರ್ಜಿ | ಕಲೆ | ಪಶ್ಚಿಮ ಬಂಗಾಳ |
| ಡಾ. ಪುಣ್ಯಮೂರ್ತಿ ನಟೇಸನ್ | ವೈದ್ಯಕೀಯ | ತಮಿಳುನಾಡು |
| ಆರ್. ಕೃಷ್ಣನ್ (ಮರಣೋತ್ತರ) | ಕಲೆ | ತಮಿಳುನಾಡು |
| ಆರ್. ವಿ. ಎಸ್. ಮಣಿ | ನಾಗರಿಕ ಸೇವೆ | ದೆಹಲಿ |
| ರಬಿಲಾಲ್ ಟುಡು | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ರಘುಪತ್ ಸಿಂಗ್ (ಮರಣೋತ್ತರ) | ಇತರೆ – ಕೃಷಿ | ಉತ್ತರ ಪ್ರದೇಶ |
| ರಘುವೀರ್ ತುಕಾರಾಮ್ ಖೇಡ್ಕರ್ | ಕಲೆ | ಮಹಾರಾಷ್ಟ್ರ |
| ರಾಜಸ್ತಪತಿ ಕಾಳಿಯಪ್ಪ ಗೌಂಡರ್ | ಕಲೆ | ತಮಿಳುನಾಡು |
| ರಾಜೇಂದ್ರ ಪ್ರಸಾದ್ | ವೈದ್ಯಕೀಯ | ಉತ್ತರ ಪ್ರದೇಶ |
| ರಾಮ ರೆಡ್ಡಿ ಮಾಮಿಡಿ (ಮರಣೋತ್ತರ) | ಇತರೆ – ಪಶುಸಂಗೋಪನೆ | ತೆಲಂಗಾಣ |
| ರಾಮಮೂರ್ತಿ ಶ್ರೀಧರ್ | ಇತರೆ – ರೇಡಿಯೋ ಪ್ರಸಾರ | ದೆಹಲಿ |
| ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ (ಜೋಡಿ) | ವೈದ್ಯಕೀಯ | ಛತ್ತೀಸ್ಗಢ |
| ರತಿಲಾಲ್ ಬೋರಿಸಾಗರ್ | ಸಾಹಿತ್ಯ ಮತ್ತು ಶಿಕ್ಷಣ | ಗುಜರಾತ್ |
| ರೋಹಿತ್ ಶರ್ಮಾ | ಕ್ರೀಡೆ | ಮಹಾರಾಷ್ಟ್ರ |
| ಎಸ್. ಜಿ. ಸುಶೀಲಮ್ಮ | ಸಮಾಜ ಸೇವೆ | ಕರ್ನಾಟಕ |
| ಸಂಗ್ಯುಸಾಂಗ್ ಎಸ್. ಪೋಂಜೆನರ್ | ಕಲೆ | ನಾಗಾಲ್ಯಾಂಡ್ |
| ಸಂತ ನಿರಂಜನ್ ದಾಸ್ | ಇತರೆ – ಆಧ್ಯಾತ್ಮಿಕತೆ | ಪಂಜಾಬ್ |
| ಶರತ್ ಕುಮಾರ್ ಪಾತ್ರ | ಕಲೆ | ಒಡಿಶಾ |
| ಸರೋಜ ಮಂಡಲ್ | ವೈದ್ಯಕೀಯ | ಪಶ್ಚಿಮ ಬಂಗಾಳ |
| ಸತೀಶ್ ಶಾ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಸತ್ಯನಾರಾಯಣ ನುವಾಲ್ | ವಾಣಿಜ್ಯ ಮತ್ತು ಕೈಗಾರಿಕೆ | ಮಹಾರಾಷ್ಟ್ರ |
| ಸವಿತಾ ಪುನಿಯಾ | ಕ್ರೀಡೆ | ಹರಿಯಾಣ |
| ಪ್ರೊ. ಶಫಿ ಶೌಕ್ | ಸಾಹಿತ್ಯ ಮತ್ತು ಶಿಕ್ಷಣ | ಜಮ್ಮು ಮತ್ತು ಕಾಶ್ಮೀರ |
| ಶಶಿ ಶೇಖರ್ ವೆಂಪತಿ | ಸಾಹಿತ್ಯ ಮತ್ತು ಶಿಕ್ಷಣ | ಕರ್ನಾಟಕ |
| ಶ್ರೀರಂಗ ದೇವಾಬಾ ಲಾಡ್ | ಇತರೆ – ಕೃಷಿ | ಮಹಾರಾಷ್ಟ್ರ |
| ಶುಭಾ ವೆಂಕಟೇಶ ಅಯ್ಯಂಗಾರ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಕರ್ನಾಟಕ |
| ಶ್ಯಾಮ್ ಸುಂದರ್ | ವೈದ್ಯಕೀಯ | ಉತ್ತರ ಪ್ರದೇಶ |
| ಸಿಮಾಂಚಲ್ ಪಾತ್ರೋ | ಕಲೆ | ಒಡಿಶಾ |
| ಶಿವಶಂಕರಿ | ಸಾಹಿತ್ಯ ಮತ್ತು ಶಿಕ್ಷಣ | ತಮಿಳುನಾಡು |
| ಡಾ. ಸುರೇಶ್ ಹನಗವಾಡಿ | ವೈದ್ಯಕೀಯ | ಕರ್ನಾಟಕ |
| ಸ್ವಾಮಿ ಬ್ರಹ್ಮದೇವ್ ಜಿ ಮಹಾರಾಜ್ | ಸಮಾಜ ಸೇವೆ | ರಾಜಸ್ಥಾನ |
| ಟಿ. ಟಿ. ಜಗನ್ನಾಥನ್ (ಮರಣೋತ್ತರ) | ವಾಣಿಜ್ಯ ಮತ್ತು ಕೈಗಾರಿಕೆ | ಕರ್ನಾಟಕ |
| ತಗಾ ರಾಮ್ ಭೀಲ್ | ಕಲೆ | ರಾಜಸ್ಥಾನ |
| ತರುಣ್ ಭಟ್ಟಾಚಾರ್ಯ | ಕಲೆ | ಪಶ್ಚಿಮ ಬಂಗಾಳ |
| ಟೆಚಿ ಗುಬಿನ್ | ಸಮಾಜ ಸೇವೆ | ಅರುಣಾಚಲ ಪ್ರದೇಶ |
| ತಿರುವಾರೂರ್ ಭಕ್ತವತ್ಸಲಂ | ಕಲೆ | ತಮಿಳುನಾಡು |
| ತೃಪ್ತಿ ಮುಖರ್ಜಿ | ಕಲೆ | ಪಶ್ಚಿಮ ಬಂಗಾಳ |
| ವೀಳಿನಾಥನ್ ಕಾಮಕೋಟಿ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತಮಿಳುನಾಡು |
| ವೆಂಪತಿ ಕುಟುಂಬ ಶಾಸ್ತ್ರಿ | ಸಾಹಿತ್ಯ ಮತ್ತು ಶಿಕ್ಷಣ | ಆಂಧ್ರಪ್ರದೇಶ |
| ವ್ಲಾಡಿಮಿರ್ ಮೆಸ್ಟ್‌ವಿರಿಶ್ವಿಲಿ (ಮರಣೋತ್ತರ) | ಕ್ರೀಡೆ | ಜಾರ್ಜಿಯಾ |
| ಯುವ್ನಾಮ್ ಜಾತ್ರಾ ಸಿಂಗ್ (ಮರಣೋತ್ತರ) | ಕಲೆ | ಮಣಿಪುರ |

