ನವದೆಹಲಿ: ಕೇಂದ್ರ ಸರ್ಕಾರವು ಪಾಕಿಸ್ತಾನದ 16 ನ್ಯೂಸ್ ಚಾನಲ್ ಸೇರಿ ಯುಟ್ಯೂಬ್ ಬ್ಲಾಕ್ ಮಾಡಿದ ಬೆನ್ನಲ್ಲೇ ಇಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಎಕ್ಸ್ ಖಾತೆಯನ್ನು ನಿರ್ಬಂಧಿಸಿದೆ.
ಖವಾಜಾ ಆಸಿಫ್ ಖಾಸಗಿ ಮಾಧ್ಯಮವೊಂದರಲ್ಲಿ ಸಂದರ್ಶನದ ವೇಳೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಗೆ ಬೆಂಬಲ ನೀಡುತ್ತದೆ ಎಂದು ಬಹಿರಂಗ ಹೇಳಿಕೆ ನೀಡಿದ ನಂತರ ಭಾರತದಲ್ಲಿ ಅವರ ಎಕ್ಸ್ ಖಾತೆಗೆ ನಿರ್ಬಂಧ ಹೇರಲಾಗಿದೆ.
ಪಹಲ್ಗಾಮ್‌ನ ಉಗ್ರರ ದಾಳಿಯ ಬಳಿಕ ಭಾರತದ ವಿರುದ್ಧ ಪ್ರಚೋದನಕಾರಿ ಹಾಗೂ ನಕಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನದ ನ್ಯೂಸ್ ಚಾನೆಲ್ ಸೇರಿ 16 ಯೂಟ್ಯೂಬ್, 29 ಎಕ್ಸ್ ಖಾತೆಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಸೋಮವಾರ ಬ್ಯಾನ್ ಮಾಡಿದೆ.

