ಚಾಮುಂಡಿ ಬೆಟ್ಟದ ಬಳಿ ಹೇಳೋರಿಲ್ಲ.. ಕೇಳೋರಿಲ್ಲ..
ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮಹಾ ಯಡವಟ್ಟು
ಖಾಸಗಿ ವಾಹನಗಳಿ ನೋ ಎಂಟ್ರಿ ಇದ್ರು ರೂಲ್ಸ್ ಬ್ರೇಕ್
ತಮಗೆ ಇಷ್ಟವಾದ ವಾಹನಗಳನ್ನ ಬಿಡ್ತಾರಂತೆ ಸೆಕ್ಯೂರಿಟಿಗಳು
ಪ್ರಶ್ನೆ ಮಾಡಿದ್ದ ಪತ್ರಕರ್ತರಿಗೆ ಆವಾಜ್, ಧಮ್ಕಿ
ಸಂಪೂರ್ಣ ನ್ಯೂಸ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಸೆಕ್ಯೂರಿಟಿಗಳ ದಬ್ಬಾಳಿಕೆ ಸಂಪೂರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆ
ಸಾಂಸ್ಕೃತಿಕ ನಗರಿ ಮೈಸೂರು ಅಂದ ತಕ್ಷಣ ನಮಗೆ ನೆನಪಾಗೋದು ರಾಜವಂಶಸ್ಥರ ಅರಮನೆ.. ನಾಡದೇವತೆ ಚಾಮುಂಡಿ ತಾಯಿ.. ಮೈಸೂರಿಗೆ ಯಾರೇ ಹೋದ್ರೂ ಆ ಮಹಾತಾಯಿ ಚಾಮುಂಡೇಶ್ವರಿ ದರ್ಶನ ಪಡೆಯದೇ ವಾಪಸ್ ಬರೋದೆ ಇಲ್ಲ.. ನಿತ್ಯ ಕೋಟ್ಯಾಂತರ ಜನ ಮೂಲೆ ಮೂಲೆಗಳಿಂದ ಆ ಜಗನ್ಮಾತೆ ದರ್ಶನಕ್ಕೆ ಚಾಮುಂಡಿ ಬೆಟ್ಟಕ್ಕೆ ಹೋಗ್ತಾರೆ.. ಯಾಕಂದ್ರೆ ಆ ಅಧಿದೇವತೆ ಚಾಮುಂಡಿ ತಾಯತಿ ಮಹಿಮೆ ಅಂತ..
ಆದ್ರೆ ಅಂತ ಸ್ಥಳದಲ್ಲಿ ಭ್ರಷ್ಟಾಚಾರ ಅನ್ನೋದು ತಾಂಡವಾಡ್ತಿದೆ.. ಅದೇನೋ ಹೇಳ್ತಾರಲ್ಲ ದೇವ್ರು ವರ ಕೊಟ್ರೂ ಪೂಜಾರಿ ವರ ಕೊಡಲ್ಲ.. ಅನ್ನೋ ಹಾಗೆ ಚಾಮುಂಡಿ ತಾಯಿ ದರ್ಶನಕ್ಕೆ ಬೆಟ್ಟದ ಬಳಿ ಹೋಗ್ಬೇಂದ್ರೆ ಅಲ್ಲಿರೋ ಸೆಕ್ಯೂರಿಟಿಗಳ ಪರ್ಮೀಶನ್ ಬೇಕು.. ಪರ್ಮೀಷನ್ ಓಕೆ.. ಆದ್ರೆ ಆ ತಾಯಿನೇ ಭಕ್ತರನ್ನ ತನ್ನ ಬಳಿ ಕರಿಸಿಕೊಳ್ಳುವಾಗ ಸೆಕ್ಯುರಿಟಿಗಳಿಗೆ ಯಾಕೆ ದುಡ್ಡುಕೊಟ್ಟು ಹೋಗ್ಬೇಕು..
ಹೌದು.. ಚಾಮುಂಡಿ ಬೆಟ್ಟದ ಬಳಿ ಖಾಸಗಿ ವಾಹನಗಳಿಗೆ ನಿಷೇಧ ಹೇರಲಾಗಿದೆ ಅಂತ ಬೋರ್ಡ್ ಹಾಕಿದ್ದಾರೆ.. ಆದ್ರೆ ಅಲ್ಲಿ ಖಾಸಗಿ, ಸರ್ಕಾರಿ ಅಲ್ಲ…ತಮಗೆ ಬೇಕಾದ ವಾಹನಗಳನ್ನ ಮಾತ್ರ ಒಳಗೆ ಬಿಡ್ತಾರಂತೆ.. ಇದನ್ನ ಕೆಲವ್ರುಪತ್ರಕರ್ತರು ಪ್ರಶ್ನೆ ಮಾಡಿದ್ರೆ.. ನಮ್ಮಿಷ್ಟ.. ಅದನ್ನ ಕೇಳೋಕೆ ನಿವ್ಯಾರು.. ಅಂತ ಧಮ್ಕಿ ಹಾಕಿದ್ದಾರೆ.. ಅಲ್ದೆ ಪತ್ರಕರ್ತರು ಅಂತ ಒಂದು ಮರಿಯಾದೆ, ಸೌಜನ್ಯವೂ ಇಲ್ಲದೆ ನೀವು ಯಾವ ಪತ್ರಕರ್ತರು..
ಇಲ್ಲಿ ನಾವೆಳಿದ್ದೆ ರೂಲ್ಸ್ ಅನ್ನೋ ಹಾಗೆ ದುರ್ವರ್ತನೆ ಮೆರೆತಿದ್ದಾರೆ.. ಯಾಕೆ ಪ್ರತ್ರಕರ್ತರಿಗೆ ಬೆಲೆ ಇಲ್ವಾ? ದುಡ್ಡು ಕೊಟ್ರೆ ಮಾತ್ರ ಇವ್ರಿಗೆ ಒಳ್ಳೆಯವರ. ಇಂಥವರು ಇರೋದ್ರಿಂದಲೇ ಅಂತ ಮಹಾ ಪ್ರಸಿದ್ಧ ಸ್ಥಳಗಳಿಗೆ ಕೆಟ್ಟ ಹೆಸರು ಬರ್ತಿರೋದು.. ಟೆಂಪ್ರವರಿಗೆ ಕೆಲಸ ಮಾಡ್ತಿರುವ ಸೆಕ್ಯೂರಿಟಿಗಳ ದರ್ಮ ಸಂಪೂರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆದಷ್ಟು ಬೇಗ ಇಂತವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ..

