ತುರುವೇಕೆರೆ, ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಇಂದು ವಿಶ್ವಗುರು ಬಸವಣ್ಣ ಅವರ ಬಸವ ಜಯಂತಿಯನ್ನು ಬಹಳ ಸರಳವಾಗಿ ಶಾಸಕ ಎಂ ಟಿ ಕೃಷ್ಣಪ್ಪ ಅವರ ಉಪಸ್ಥಿತಿಯಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು,
ಜಯಂತಿಯನ್ನು ಉದ್ದೇಶಿಸಿ ತಾಲೂಕು ದಂಡಾಧಿಕಾರಿಯಾದ ಕುಂ ಈ, ಅಹಮದ್ ಮಾತನಾಡಿ, ಶ್ರೀ ಬಸವೇಶ್ವರರು ದಾರ್ಶನಿಕರು ಅನುಭವ ಮಂಟಪ ಮಾಡುವ ಮೂಲಕ ಸರ್ವರಿಗೂ ಸಮಪಾಲು ಸಮಬಾಳನ್ನು ಹಂಚಿದಂತಹ ಮಹನೀಯರ ವಿಚಾರ ಎಲ್ಲರು ಅಳವಡಿಸಿಕೊಳ್ಳಬೇಕು ಅಣ್ಣ ಬಸವಣ್ಣ ನನಗೂ ಗುರು, ಇಡೀ ವಿಶ್ವಕ್ಕೆ ಗುರು, ಇಡೀ ವಿಶ್ವಕ್ಕೆ ತೋರಿಸಿಕೊಟ್ಟವರು ಹೀಗಾಗಿ ಬಸವಣ್ಣನ ವಿಚಾರ ಪ್ರತಿಯೊಬ್ಬ ವ್ಯಕ್ತಿಯೂ ಅವರ ವಿಚಾರ ಅಳವಡಿಸಿಕೊಳ್ಳಬೇಕು.
ನಾನು ಸಹ ಬಸವಣ್ಣನವರ ವಿಚಾರ ತಿಳಿದುಕೊಳ್ಳುವುದು ಬಹಳಷ್ಟು ಇದೆ ದೇಶದ ಜನರು ದೇಶ ಸೇವೆಗಾಗಿ ಸದಾ ಸನ್ನದ್ಧರಾಗಿ ಸಾರ್ವಭೌಮ ಭಾವೈಕ್ಯತೆಯ ಸಂಗಮ ಕ್ಷೇತ್ರ ಈ ಭೂಮಿ ಅಮಾಯಕ ಜನರ ರಕ್ಷಣೆ ಹಾಗೂ ಸೇವೆಗಾಗಿ ಸದಾ ಮುಂಚೂಣಿಯಲ್ಲಿರಿ ದೇಶ ಎಂದು ಬಂದಾಗ ಎಲ್ಲರೂ ಒಗ್ಗೂಡಬೇಕು ಎಂದರು,
ಇದೇ ಸಂದರ್ಭದಲ್ಲಿ, ವೀರಶೈವ ಸಮಾಜದ ಕುಮಾರಸ್ವಾಮಿ, ಗೀತಾ ಸುರೇಶ್, ವೆಂಕಟಾಪುರ ಯೋಗೀಶ್, ಗ್ರೇಡ್ ಟು ತಹಸಿಲ್ದಾರ್ ಸುನಿಲ್, ಆರ್ ಐ ಶಿವಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ರೀನಾಥ್ ಬಾಬು, ಸಮಾಜ ಕಲ್ಯಾಣ ಇಲಾಖೆ ಮುರಳಿ, ದಲಿತ ಸಂಘರ್ಷ ಸಮಿತಿ ಮುಖಂಡರುಗಳಾದ ತಿಮ್ಮೇಶ್, ಬಿ ಆರ್ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕರಾದ ಬೋರಪ್ಪ, ಶಿವನಂಜಪ್ಪ, ದಂಡಿನ ಶಿವರ ಕುಮಾರ್, ಸಿಐಟಿಯು ಸತೀಶ್, ಇನ್ನು ಅನೇಕ ವಿವಿಧಪರ ಸಂಘಟನೆಗಳ ಮುಖಂಡರು ತಾಲೂಕು ಆಡಳಿತದ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗ, ಇದ್ದರು.

