ಶಿವಮೊಗ್ಗ : ಕಾಂಗ್ರೆಸ್‌ಗೆ 136 ಸ್ಥಾನವನ್ನು ಜನ ನೀಡಿ ಆರ್ಶೀವದಿಸಿದ್ದಾರೆ. ಈಗ ಅದೇ ಮತದಾರ ಕಾಂಗ್ರೆಸ್‌ನ 14 ತಿಂಗಳ ಆಡಳಿತ ನೋಡಿ ಶಾಪ ಹಾಕುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣ ಹೀಗೆ ಅನೇಕ ಹಗರಣಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿದೆ.
ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೆ ಬೇಸತ್ತು ಸಬ್‌ಇನ್ಸ್ಫೆಕ್ಟರ್ ಒಬ್ಬರು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡರು. ಇದರ ನಡುವೆ ರಾಜ್ಯ ಕಾಂಗ್ರೆಸ್ ವಕ್ತಾರರಾದ ಮಾಜಿ ಸಂಸದ ಆಯನೂರು ಮಂಜುನಾಥ್, ನಮ್ಮ ಕುಟುಂಬದ ಬಗ್ಗೆ ಸುಳ್ಳು ಆರೋಪ ಮಾಡುತ್ತ ನೂರು ಸುಳ್ಳು ಹೇಳಿ, ಸುಳ್ಳನ್ನು ಸತ್ಯವನ್ನಾಗಿಸಲು ಹೊರಟಿರುವುದು ವಿಷಾಧನೀಯ ಎಂದರು.
ನಮ್ಮಕುಟುಂಬ ಆಸ್ಪತ್ರೆಗೆ ಸೇರಿದ ಜಾಗವನ್ನು ಕೆಐಡಿಬಿಯ ಎಲ್ಲಾ ನಿಯಮವಳಿಗಳ ಪ್ರಕಾರವೇ ಪಡೆದುಕೊಂಡಿದೆ. ಮತ್ತು ನಮ್ಮ ಸಂಬಂಧಿಕರು ರೈತರಿಗೆ ಆ ಜಾಗವನ್ನು ಖರೀದಿಸಿದ್ದು ಕೂಡ ನಿಯಮವಳಿಗಳ ಪ್ರಕಾರವೇ ಆಗಿದೆ. ಅದಕ್ಕೆ ಸೂಕ್ತ ದಾಖಲೆಯನ್ನು ತೋರಿಸಿದ ಅವರು, ಮಾಜಿ ಸಂಸದರು, ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್‌ನ ಜಿಲ್ಲಾ ಮಂತ್ರಿ ಮಧುಬಂಗಾರಪ್ಪ, ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬಗ್ಗೆ ಮಾಡಿದ ಟೀಕೆಗಳನ್ನು ಜಿಲ್ಲೆಯ ಜನತೆ ನೋಡಿದ್ದಾರೆ.
ಆಗ ಅವರು ಬಳಸಿದ ಶಬ್ದಗಳು ಕೂಡ ಹೇಳಲು ನಾಚಿಕೆಯಾಗುತ್ತದೆ. ಈಗ ಅದೇ ನಾಯಕರು ನಮ್ಮ ಕುಟುಂಬದ ಬಗ್ಗೆ ಸುಳ್ಳು ಟೀಕೆಗಳನ್ನು ಮಾಡುವುದು ಖಂಡನೀಯ ನಾವು ಸರ್ಕಾರದ ಕಾನೂನುಗಳಿಗೆ ಬದ್ಧವಾಗಿ ವ್ಯವಹಾರವನ್ನು ಮಾಡಿದ್ದೇವೆ. ಮೂಡ ಹಗರಣಕ್ಕೂ ನಮ್ಮ ಆಸ್ತಿಗು ಹೋಲಿಕೆ ಮಾಡುವುದೇ ತಪ್ಪು ಎಂದರು.

