ಬಿಡುಗಡೆಯಾಗಿದೆ. ಚಿತ್ರವನ್ನು ಧನಂಜಯ್ ನಿರ್ದೇಶಿಸಿದ್ದಾರೆ. ಹೊಸ ವರ್ಷದಲ್ಲಿ ಹೊಸ ಅವತಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಪಿನಾಕ’ ಎಂಬ ಶೀರ್ಷಿಕೆ ಇಡಲಾಗಿದೆ. ಗಣೇಶ್ ಅವರು ‘ಪಿನಾಕ’ ಎಂಬ ಹೊಸ ಚಿತ್ರದ ಮೂಲಕ ಅತೀಂದ್ರಿಯ ಶಕ್ತಿಯ ಕಥೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಕೃಷ್ಣಂ ಪ್ರಣಯಸಖಿ’ ಚಿತ್ರ ಮಾಡಿ ಗಣೇಶ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿದ ಏಕೈಕ ರೊಮ್ಯಾಂಟಿಕ್ ಸಿನಿಮಾ ಅದು. ಇದೀಗ ಹೊಸ ವರ್ಷದಲ್ಲಿ ಹೊಸ ಚಿತ್ರವನ್ನು ಗೋಲ್ಡನ್ ಸ್ಟಾರ್ ಘೋಷಣೆ ಮಾಡಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಆ ಸಿನಿಮಾ ಬರಲಿದೆ.
ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾ ನಿರ್ಮಾಣ ಮಾಡುತ್ತಿದೆ. ಇದೀಗ ಈ #PMF49ನೇ ಪ್ರಾಜೆಕ್ಟ್‌ನ “ರೇಜ್ ಆಫ್ ರುದ್ರ” ಪೋಸ್ಟರ್ ಅನಾವರಣಗೊಂಡಿದೆ. ತೆಲುಗಿನಲ್ಲಿ ಈಗಾಗಲೇ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿರುವ ಈ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ, ಈಗ ಈ ಬಹು ನಿರೀಕ್ಷಿತ ಸಿನಿಮಾ ಮೂಲಕ ಕನ್ನಡ ಚಿತ್ರರಂಗವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯಲು ಸಜ್ಜಾಗಿದೆ.
ಈಗಾಗಲೇ ಟಾಲಿವುಡ್‌ನಲ್ಲಿ ಪ್ರಭಾಸ್, ರವಿತೇಜ, ಪವನ್ ಕಲ್ಯಾಣ್ ಸೇರಿದಂತೆ ಅನೇಕ ಕಲಾವಿದರ ಜೊತೆಗೆ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಕನ್ನಡಕ್ಕೆ ಕಾಲಿಟ್ಟಿದೆ. ಈ ಹಿಂದೆ ಅಧ್ಯಕ್ಷ ಇನ್ ಅಮೆರಿಕ ಮತ್ತು ಆದ್ಯಾ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಈ ಸಂಸ್ಥೆ ಈಗ ತಮ್ಮ ಬ್ಯಾನರ್‌ನ 49ನೇ ಸಿನಿಮಾಕ್ಕೆ ಗಣೇಶ್ ಜೊತೆ ಕೈಜೋಡಿಸಿದೆ.
ಪಿನಾಕ’ ಪುರಾಣ ಮತ್ತು ಇತಿಹಾಸದ ಮಿಶ್ರಣದ ಕಥೆ ಹೊಂದಿದೆ. ಗಣೇಶ್ ಅವರಿಗೆ ರೊಮ್ಯಾಂಟಿಕ್ ಹೀರೋ ಪಾತ್ರಗಳನ್ನು ಮಾಡಿ ಅವರಿಗೆ ಏಕತಾನತೆ ಕಾಡಿತ್ತು. ಆಗ ಅವರಿಗೆ ಸಿಕ್ಕಿದ್ದು ಈ ಕಥೆ. ಈ ಚಿತ್ರದಲ್ಲಿ ಗಣೇಶ್ ಅವರಿಂದ ಬೇರೆಯದನ್ನೇ ನಿರೀಕ್ಷಿಸಬಹುದಾಗಿದೆ.