ಉತ್ತರಪ್ರದೇಶ : ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಪ್ರದೇಶದ (Uttar ವಾರಣಾಸಿಯಲ್ಲಿ 2200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು. ಇದರ ಜತೆಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20 ನೇ ಕಂತಿನ 20000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ.
ಮೋದಿ ಅವರು ಬಹುದೊಡ್ಡ ಮಟ್ಟದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಮೋಹನ್ ಸರಾಯ್ ಛಿತೌನಿ-ಶೂಲ್ ಟಂಕೇಶ್ವರ ರಸ್ತೆಯ ಅಗಲೀಕರಣ, ಹರ್ದತ್ ಪುರದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ಅನ್ನು ಉದ್ಘಾಟನೆದರು.
ದಲ್ಮಂಡಿ, ಲಹರ್ತಾರಾ-ಕೋಟ್ವಾ. ಗಂಗಾಪುರ , ಬಬತ್ಪುರ ಸೇರಿದಂತೆ ಹಲವು ಗ್ರಾಮೀಣ ಮತ್ತು ನಗರ ಕಾರಿಡಾರ್ಗಳಲ್ಲಿ ಸಮಗ್ರ ರಸ್ತೆ ವಿಸ್ತರಣೆ, ಲೆವೆಲ್ ಕ್ರಾಸಿಂಗ್ 22 ಸಿ ಮತ್ತು ಖಾಲಿಸ್ಪುರ್ ಯಾರ್ಡ್ನಲ್ಲಿ ರೈಲ್ವೆ ಓವರ್ ಬ್ರಿಡ್ಜ್ಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಸ್ಮಾರ್ಟ್ ವಿತರಣಾ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮತ್ತು 880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿದ್ಯುತ್ ಮೂಲಸೌಕರ್ಯಗಳ ಭೂಗತೀಕರಣಕ್ಕೆ ಶುಂಕಸ್ಥಾಪನೆ ಕೂಡ ಮಾಡಿದ್ದಾರೆ.
ಪ್ರವಾಸೋಧ್ಯಮಕ್ಕೆ ಹೆಚ್ಚಿನ ಉತ್ತೇಜನೆಯನ್ನು ಕೂಡ ಈ ಯೋಜನೆಯಲ್ಲಿ ನೀಡಲಾಗಿದೆ. ಎಂಟು ನದಿ ದಂಡೆಯ ಕಚ್ಚಾ ಘಾಟ್ಗಳ ಪುನರಾಭಿವೃದ್ಧಿ, ಕಾಳಿಕಾ ಧಾಮದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಶಿವಪುರದ ರಂಗಿಲ್ ದಾಸ್ ಕುಟಿಯಾದಲ್ಲಿ ಕೊಳ ಮತ್ತು ಘಾಟ್ನ ಸುಂದರೀಕರಣ ಮತ್ತು ದುರ್ಗಾಕುಂಡ್ನ ಪುನಃಸ್ಥಾಪನೆ ಮತ್ತು ಜಲಶುದ್ಧೀಕರಣವನ್ನು ಉದ್ಘಾಟಿಸಿದ್ದಾರೆ. ಕರ್ದಮೇಶ್ವರ ಮಹಾದೇವ ದೇವಾಲಯದ ಪುನಃಸ್ಥಾಪನೆ ಕಾರ್ಯ, ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಜನ್ಮಸ್ಥಳವಾದ ಕಾರ್ಖಿಯಾನ್ ಅಭಿವೃದ್ಧಿ , ಸಾರನಾಥ, ಋಷಿ ಮಾಂಡ್ವಿ ಮತ್ತು ರಾಮನಗರ ವಲಯಗಳಲ್ಲಿನ ನಗರ ಸೌಲಭ್ಯ ಕೇಂದ್ರಗಳು, ಲಮಾಹಿಯಲ್ಲಿರುವ ಮುನ್ಷಿ ಪ್ರೇಮ್ಚಂದ್ ಅವರ ಪೂರ್ವಜನ ಮನೆ ಪುನರಾಭಿವೃದ್ಧಿ ಮತ್ತು ವಸ್ತುಸಂಗ್ರಹಾಲಯದ ಮೇಲ್ದಾರ್ಜೆಕರಣ ಸೇರಿದಂತೆ ಇತರ ಕಾರ್ಯಗಳಿಗೆ ಶಂಕುಸ್ಥಾಪನೆಯನ್ನು ಮಾಡಿದ್ದಾರೆ. ಇದು ಅವರ ಲೋಕಸಭೆ ಕ್ಷೇತ್ರವಾದ ವಾರಣಾಸಿಗೆ 51ನೇ ಭೇಟಿಯಾಗಿದೆ.

