ತಿರುವನಂತಪುರಂ: ವಿಳಿಂಜಂ ಅಂತಾರಾಷ್ಟ್ರೀಯ ಬಂದರನ್ನು ಉದ್ಘಾಟಿಸಿದ ನರೇಂದ್ರ ಮೋದಿ ನನ್ನ ಜೊತೆ ವೇದಿಕೆ ಮೇಲೆ ಸಿಎಂ ಪಿಣರಾಯಿ ವಿಜಯನ್ , ಶಶಿ ತರೂರ್ ಕುಳಿತಿರುವುದು ಹಲವರಿಗೆ ನಿದ್ದೆಗೆಡಿಸಲಿದೆ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನಾನು ಹೇಳಲು ಬಯಸುತ್ತೇನೆ. ನೀವು ಇಂಡಿ ಒಕ್ಕೂಟದ ಬಲವಾದ ಆಧಾರಸ್ತಂಭ. ಶಶಿ ತರೂರ್ ಕೂಡ ಇಲ್ಲಿ ಕುಳಿತಿದ್ದಾರೆ. ಇಂದಿನ ಕಾರ್ಯಕ್ರಮವು ಅನೇಕರ ನಿದ್ರೆಯನ್ನು ಕೆಡಿಸಲಿದೆ ಎಂದರು.
ಈ ಬಂದರನ್ನುಇಂಡಿ ಒಕ್ಕೂಟ ಟೀಕೆ ಮಾಡುತ್ತಿರುವ ಅದಾನಿ ಕಂಪನಿ ಕೇರಳದಲ್ಲಿ ನಿರ್ಮಾಣ ಮಾಡಿದೆ. ತಿರುವನಂತಪುರಂನ ಕಾಂಗ್ರೆಸ್ ಸಂಸದರಾಗಿರುವ ಶಶಿತರೂರ್ ಪಕ್ಷದಿಂದ ಹಂತ ಹಂತವಾಗಿ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮೋದಿ ಅವರು ತಿರುವನಂತಪುರಂಗೆ ಭೇಟಿ ನೀಡಿದಾಗ ಶಶಿ ತರೂರ್ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿದ್ದರು. ವೇದಿಕೆಯಲ್ಲಿ ಶಶಿ ತರೂರ್ ಅವರೊಂದಿಗಿನ ಪ್ರಧಾನಿ ಮೋದಿ ಅವರ ಸಂವಾದವೂ ಗಮನ ಸೆಳೆದಿದೆ. ತರ ಗಣ್ಯರೊಂದಿಗೆ ಸಂಕ್ಷಿಪ್ತ ಶುಭಾಶಯ ಹೇಳಿದರೆ ಮೋದಿ ತರೂರ್ ಅವರ ಕೈ ಕುಲುಕಿ ಕೆಲ ಸೆಕೆಂಡ್ ಮಾತನಾಡಿದ್ದು ವಿಶೇಷವಾಗಿತ್ತು.

