ರಾಂಚಿ: ಇಂದು (ಶುಕ್ರವಾರ) ಮಧ್ಯಾಹ್ನ ಮೋದಿಯವರ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಗೆ ಮರಳುವುದು ವಿಳಂಬವಾಯಿತು.
ಜಾರ್ಖಂಡ್‌ನ ದಿಯೋಘರ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ತಾಂತ್ರಿಕ ದೋಷವನ್ನು ಎದುರಿಸುತ್ತಿದೆ. ಇದರಿಂದ ಮೋದಿ ದೆಹಲಿಗೆ ಹಿಂದಿರುಗುವುದು ವಿಳಂಬವಾಗಿದೆ.
ವಿಮಾನವು ದಿಯೋಘರ್ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲಬೇಕಾಯಿತು. ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಇಂದು ಜಾರ್ಖಂಡ್‌ನಲ್ಲಿ ಎರಡು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು.
ರಾಹುಲ್ ಗೂ ಸಿಗದ ಕ್ಲಿಯರನ್ಸ್ :
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇಂದು ಜಾರ್ಖಂಡ್‌ನಿಂದ ಹೊರಡಲು ಸಾಧ್ಯವಾಗಲಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ ಕ್ಲಿಯರನ್ಸ್ ಸಿಗದ ಹಿನ್ನೆಲೆಯಲ್ಲಿ ಅವರ ಹೆಲಿಕಾಪ್ಟರ್ ಅನ್ನು ಅಧಿಕಾರಿಗಳು ತಡೆಹಿಡಿದಿದ್ದರು. ಜಾರ್ಖಂಡ್‌ನ ಮಹಾಗಾಮದಲ್ಲಿ ನಡೆದ ಘಟನೆ ನಡೆದಿದೆ. ಎಟಿಸಿಯಿಂದ ಕ್ಲಿಯರೆನ್ಸ್ ಸಿಕ್ಕ ನಂತರ ರಾಹುಲ್ ಗಾಂಧಿ ಹೆಲಿಕಾಪ್ಟರ್‌ಗೆ ಟೇಕ್ ಆಫ್ ಆಗಲು ಅನುಮತಿ ಸಿಕ್ಕಿತು. 45 ನಿಮಿಷಗಳ ವಿಳಂಬದ ನಂತರ ಹೆಲಿಕಾಪ್ಟರ್ ಅನ್ನು ಪ್ರಯಾಣಕ್ಕೆ ರೆಡಿ ಮಾಡಲಾಯಿತು.