ಬೆಳಗಾವಿ : ಕಳೆದೊಂದು ಹದಿನೈದು ಇಪ್ಪತ್ತು ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಓರ್ವ ಗರ್ಭಿಣಿಗೆ ಸೊಂಕು ತಗುಲಿದೆ. ಮಕ್ಕಳು, ಗರ್ಭಿಣಿಯರು ಜಾಗರೂಕತೆಯಿಂದ ಇರಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಗಡಾದ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಿಂಗಾಪೂರದಲ್ಲಿ ಕೋವಿಡ್ ಕೇಸ್’ಗಳು ಬೆಳಕಿಗೆ ಬಂದಿದ್ದವು.ಕರ್ನಾಟಕದಲ್ಲಿಯೂ ಸುಮಾರು 30 ಕೇಸ್’ಗಳು ದಾಖಲಾಗಿವೆ. ಬೆಳಗಾವಿಯಲ್ಲಿಯೂ ಒಂದು ಕೇಸ್’ಗಳು ಪತ್ತೆಯಾಗಿದೆ.
ಬೆಳಗಾವಿಯ ಖಾಸತಿ ಆಸ್ಪತ್ರೆಯಲ್ಲಿ ದಾಖಲಾದ ಗರ್ಭಿಣಿ ಮಹಿಳೆಯಲ್ಲಿ ಕೋರೋನಾ ಪತ್ತೆಯಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಇದಕ್ಕೆ ಆತಂಕ ಪಡುವ ಪ್ರಶ್ನೆಯಿಲ್ಲ.
ಜನರಲ್ಲಿ ಈಗ ರೋಗಪ್ರತಿರೋಧಕ ಶಕ್ತಿ ಹೆಚ್ಚಾಗಿದೆ. ಡಯಾಬಿಟಿಸ್ ರೋಗಿಗಳು, ಚಿಕ್ಕಮಕ್ಕಳು ಮತ್ತು ರೋಗಪ್ರತಿರೋಧಕ ಶಕ್ತಿ ಕಡಿಮೆ ಇರುವವರು ಸುರಕ್ಷತೆಯಿಂದ ಇರಬೇಕು. ಸಾಧಾರಣ ಮೈ ಕೈ ನೋವು, ಜ್ವರ ಬಂದಲ್ಲಿ ನಿರ್ಲಕ್ಷ ವಹಿಸದಿರಿ, ಕೂಡಲೇ ಆಸ್ಪತ್ರೆಗೆ ದಾಖಲಾಗಿ ತಪಾಸಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಬೆಳಗಾವಿ ಜಿಲ್ಲಾಆರೋಗ್ಯ ಅಧಿಕಾರಿಗಳು ಕರೆ ನೀಡಿದರು.
ವರದಿ. ದಯಾನಂದ. ಎಂ

