ನವದೆಹಲಿ: ಹೊಸ ವರ್ಷಕ್ಕೆ ಕಾಲಿಟ್ಟ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರಗಳಲ್ಲಿ ಭಾರೀ ಏರಿಕೆಯ ಶಾಕ್ ಎದುರಾಗಿದೆ. 2025ರಲ್ಲಿ 200 ರೂ.ಕ್ಕೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಗ್ಯಾಸ್ ದರಗಳು ಇದೀಗ ಮತ್ತೆ ಏರಿಕೆಯಾಗಿದೆ. ಆದರೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
19 ಕಿಲೋ ಮತ್ತು 47.50 ಕಿಲೋ ತೂಕದ ವಾಣಿಜ್ಯ ಸಿಲಿಂಡರ್‌ಗಳ ದರ ಹೆಚ್ಚಿಸಲಾಗಿದೆ. 19 ಕಿಲೋ ಎಲ್‌ಪಿಜಿ ಸಿಲಿಂಡರ್ ದರವು 110–112 ರೂ.ವರೆಗೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 110.50 ರೂ. ಹೆಚ್ಚಳವಾಗಿದೆ. ಇನ್ನು 47.50 ಕಿಲೋ ವಾಣಿಜ್ಯ ಸಿಲಿಂಡರ್ ದರವು 274.50 ರೂ. ಏರಿಕೆಯಾಗಿ 4,407 ರೂ. ಗಡಿಯನ್ನು ತಲುಪಿದೆ.
ಬೆಂಗಳೂರು: ಜನವರಿ 2026ರ ಎಲ್‌ಪಿಜಿ ದರಗಳು
14.2 ಕಿಲೋ ಗೃಹಬಳಕೆ ಸಿಲಿಂಡರ್: 855.50 ರೂ.
5 ಕಿಲೋ ಸಿಲಿಂಡರ್: 318.50 ರೂ.
19 ಕಿಲೋ ವಾಣಿಜ್ಯ ಸಿಲಿಂಡರ್: 1,764.50 ರೂ. (110.50 ರೂ. ಏರಿಕೆ)
47.5 ಕಿಲೋ ವಾಣಿಜ್ಯ ಸಿಲಿಂಡರ್: 4,407 ರೂ. (274.50 ರೂ. ಏರಿಕೆ)
ಬಹು ತಿಂಗಳುಗಳಿಂದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಸ್ಥಿರವಾಗಿದ್ದು, ಕಳೆದ 1–2 ವರ್ಷಗಳಲ್ಲಿ ಕೇವಲ 50 ರೂ.ರಷ್ಟು ಮಾತ್ರ ಏರಿಕೆಯಾಗಿದೆ.

