ಕೋಲಾರ : ಮುಳಬಾಗಿಲು ತಾಲ್ಲೂಕು ನಗರದ ಸೋಮೇಶ್ವರ ಪಾಳ್ಯ ಕೆರೆ ಕೋಡಿ ಕಾಲುವೆ ಹಾಗೂ ಮೇಲ್ ಸೇತುವೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.
ಕರ್ನಾಟಕ ರಕ್ಷಣಾ ವೇದಿಕೆ ಮುಳಬಾಗಿಲು ತಾಲ್ಲೂಕು ಅಧ್ಯಕ್ಷರಾದ ಹುಸೇನ್ ರವರು ಮಾತನಾಡಿ . ಸೋಮೇಶ್ವರ ಕೆರೆ ಕೋಡಿ ಕಾಲುವೆ ಹಾಗೂ ಗೋಕುಲ್ ನಗರದ ರಸ್ತೆ ಹಾಗೂ ಚಿರಂಡಿ ಸುಮಾರು ವರ್ಷಗಳಿಂದ ಮುಳಬಾಗಿಲು ಪಟ್ಟಣದಿಂದ ವಿರೂಪಾಕ್ಷಿ ಅವಣಿ ಪುರಾತನ ದೇವಾಲಯಗಳನ್ನು ಹೊಂದಿದ್ದು.
ಇದೇ ಮಾರ್ಗವಾಗಿ ಪ್ರವಾಸಿಗರು ಸೋಮೇಶ್ವರ ದೇವಾಲಯದಿಂದ ವಿರೂಪಾಕ್ಷಿ ಅವಣಿ ದೇವಾಲಯಗಳಿಗೆ ಪ್ರವೇಶ ಮಾಡುತ್ತಿದ್ದು. ಈ ಮಾರ್ಗವಾಗಿ ನಗರದ ಅನೇಕ ಕೂಲಿ ಕಾರ್ಮಿಕರು,ರೈತರು, ಹೊಲ ಗದ್ದೆಗಳಿಗೆ ಹೋಗಲು ಪ್ರತಿದಿನ ದನ ಕರುಗಳನ್ನು ಮೇಯಿಸಲು ಹಾದು ಹೋಗುವ ಮುಖ್ಯ ರಸ್ತೆಯಾಗಿದೆ.
ಪ್ರತಿನಿತ್ಯ ಕೋಡಿ ನೀರು ಹಾದು ಹೋಗುತ್ತಿರುತ್ತದೆ. ಈ ರಸ್ತೆಯಲ್ಲಿ ಹಾಕಿರುವ ಕಲ್ಲುಗಳು ಮೇಲೆ ದ್ವಿಚಕ್ರ ವಾಹನ ಸವಾರರು ಪಾದಾಚಾರಿಗಳು ಶಾಲಾ ಮಕ್ಕಳು ಪ್ರತಿದಿನ ಜಾರಿ ಬೇಲಿತ್ತಿದ್ದು ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ದಯವಿಟ್ಟು ಸಾರ್ವಜನಿಕರಿಗೆ ಹಾಗು ವಾಹನ ಸವಾರರಿಗೆ ಯಾವುದೇ ತೊಂದರೆ ಆಗದಂತೆ ಕಾಮಗಾರಿ ಆದಷ್ಟು ಬೇಗ ಕಾರ್ಯರೂಪಕ್ಕೆ ತನ್ನಿ ಮನವಿ ಪತ್ರ ನೀಡಿದರು.
ಮುಳುಬಾಗಿಲು ತಾಲೂಕು ಕಚೇರಿ ಅಧಿಕಾರಿಗಳು ಮಾತನಾಡಿ ಅತಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿ ಮನವಿ ಪತ್ರವನ್ನು ಪಡೆದರು .
ವರದಿ : ಅರುಣ್ ಕುಮಾರ್ ಬಿ ಎಸ್