ನೆಲಮಂಗಲ : ಮೀಸಲಾತಿ ಎಂಬುದು ಜನಾಂಗದ ಶಕ್ತಿ ಮೇಲೆ ಆಗಲಿ ಒಗ್ಗಟ್ಟಿನ ಮೇಲಾಗಲಿ ಮೀಸಲಾತಿ ಕೊಡುವುದಲ್ಲ, ಯಾವುದೇ ಸಮುದಾಯಕ್ಕೆ ಅರ್ಹತೆ ಮೇಲೆ ಮೀಸಲಾತಿ ಕೊಡಬೇಕು ಮಾನದಂಡಗಳ ಆಧರಿಸಿ ಅಂಕಿಅಂಶಗಳ ಮೇಲೆ ಮೀಸಲಾತಿ ಕೊಡಬೇಕು, ಸಮಾಜದಲ್ಲಿ ಸಮಾನತೆಗಾಗಿ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು, ಎಂದು ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನದ ಪೂರ್ಣಾನಂದಪುರಿ ಮಹಾಸ್ವಾಮಿ ಹೇಳಿದ್ದಾರೆ.
ಪಂಚಮಸಾಲಿ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಅವರು. ಲಿಂಗಾಯತರಲ್ಲಿ 43 ಒಳಪಂಗಡಗಳಿವೆ, ಇವು 2ಎ ಮೀಸಲಾತಿಗೆ ಅರ್ಹರಲ್ಲ ಎಂದು ಎಲ್ಲಾ ಆಯೋಗಗಳು ಈಗಾಗಲೇ ವರದಿ ನೀಡಿವೆ. ಈಗಾಗಲೇ ನಡೆದಿರುವ ಜಾತಿಗಣತಿ ವರದಿಯಲ್ಲಿ ಪಂಚಮಸಾಲಿ ಸಮುದಾಯದವರು ಮೀಸಲಾತಿಗೆ ಅರ್ಹರೆಂದು ಸಾಬೀತಾದರೆ ಮೀಸಲಾತಿ ಕೇಳಲಿ, ಆದರೆತೋಳ್ಬಲದಿಂದ ಜನ ಬೆಂಬಲದಿಂದ ಸರ್ಕಾರದ ಮೂಗು ಹಿಡಿದು ಮೀಸಲಾತಿ ಕೇಳುವುದು ತಪ್ಪು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದುದು, ಬಡವರ ತಲೆ ಮೇಲೆ ಕೂತುಕೊಳ್ಳುವುದಾಗಿದೆ ಎಂದಿದ್ದಾರೆ. ಮೀಸಲಾತಿಗಾಗಿ ಶಕ್ತಿ ಪ್ರದರ್ಶಿಸಿ ಬಡವರಿಗೆ ಅನ್ಯಾಯ ಮಾಡಬೇಡಿ ಅವರು ಹೇಳಿದ್ದಾರೆ.

