ಬೆಂಗಳೂರು : ನಾನು ಮುಖ್ಯಮಂತ್ರಿ ಆದ್ರೆ ಸಾವಿರ ಜೆಸಿಬಿ ಆರ್ಡರ್ ಮಾಡ್ತಿನಿ, ಎಲ್ಲಾ ತಾಲೂಕುಗಳಲ್ಲಿ ತಲಾ 35 ಜೆಸಿಬಿ ಇಡ್ತೀನಿ.ಯಾರೇ ಕ್ವಾಂಯಕ್ ಅಂದ್ರೂ ಅವ್ರ ಮನೆ ಕಲಾಸ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಳೇದಗುಡ್ಡ ಪಟ್ಟಣದಲ್ಲಿ ಗುಡುಗಿದ್ದರು. ಅವರ ಈ ಹೇಳಿಕೆಗೆ ಕರ್ನಾಟಕ ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಮಂಜುನಾಥ್ ರೆಡ್ಡಿ ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯೆ ನೀಡಿರುವ ಪೋಸ್ಟ್ ವೈರಲ್ ಆಗಿದೆ.
ಗುಳೇದಗುಡ್ಡ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಾನು ಮುಖ್ಯಮಂತ್ರಿ ಆದ್ರೆ ಸಾವಿರ ಜೆಸಿಬಿ ಆರ್ಡರ್ ಮಾಡ್ತಿನಿ, ಎಲ್ಲಾ ತಾಲೂಕುಗಳಲ್ಲಿ ತಲಾ 35 ಜೆಸಿಬಿ ಇಡ್ತೀನಿ.ಯಾರೇ ಕ್ವಾಂಯಕ್ ಅಂದ್ರೂ ಅವ್ರ ಮನೆ ಕಲಾಸ್ , ಬರೀ ಮುಖ್ಯಮಂತ್ರಿ ಆಗೋದು ಲೂಟಿ ಮಾಡೋಕೆ ಅಲ್ಲ. ಯೋಗಿ ಆದಿತ್ಯನಾಥ್ ಅವರು ಭ್ರಷ್ಟಾಚಾರ ಮಾಡಿದವರ ಕುಟುಂಬದವರಿಗೆ ಮುಂದೆ ಎಂದೂ ಸರ್ಕಾರಿ ನೌಕರಿ ಸಿಗದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ರೀತಿ ಮಾಡದೇ ಇದ್ದರೆ ನಮ್ಮ ದೇಶ ದೇಶವಾಗಿ ಉಳಿಯುವುದಿಲ್ಲ ಎಂದು ಗುಡುಗಿದ್ದರು .

ಈಗ ಕರ್ನಾಟಕ ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಮಂಜುನಾಥ್ , ಅವರು ಯತ್ನಾಳ್ ಅವರ ನಾನೇದಾರೂ CM ಆದ್ರೆ 1000 ಜೆಸಿಬಿ ಆರ್ಡರ್ ಮಾಡ್ತೀನಿ ಎನ್ನುವ ಹೇಳಿಕೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಗಂಡು ಮುಕ್ಳ್ಯಾಗ್ ಇಟ್ಕೋ ಅವುನ್ನ ! ಎಂದು ಬರೆದ ಪೋಸ್ಟ್ ಇದೀಗ ವೈರಲ್ ಆಗಿದೆ.

