ರಾಹುಲ್ ಗಾಂಧಿ (Rahul Gandhi) ಅಮೇಥಿ ಬಿಟ್ಟು ರಾಯ್ ಬರೇಲಿಗೆ ಓಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಸ್ಯಾತ್ಮಕವಾಗಿ ಮಾತನಾಡಿದ್ದಾರೆ.
ಬರ್ಧಮಾನ್-ದುರ್ಗಾಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ವಯನಾಡಿನಲ್ಲಿ ಕಾಂಗ್ರೆಸ್‌ನ ರಾಜಕುಮಾರ ಸೋಲುತ್ತಾರೆ ಎಂದು ನಾನು ಮೊದಲೇ ಹೇಳಿದ್ದೇನೆ, ವಯನಾಡಿನಲ್ಲಿ ಮತದಾನ ಮುಗಿದ ತಕ್ಷಣ ಬೇರೆ ಕ್ಷೇತ್ರವನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ನಾನು ಹೇಳಿದ್ದೆ, ಅದೇ ರೀತಿ ಅಮೇಥಿಯಲ್ಲಿ ಹೆದರಿ ರಾಯ್‌ಬರೇಲಿಗೆ ಓಡಿ ಹೋಗಿದ್ದಾರೆ ಭಯ ಪಡಬೇಡಿ, ಓಡಬೇಡಿ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಕೆರೆ ಮೀನು ತಿಂದು ಇಬ್ಬರ ಸಾವು, 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ
39 ನಿಮಿಷಗಳ ಭಾಷಣದಲ್ಲಿ ಮೋದಿ ಅವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ, ಸಂದೇಶಖಾಲಿ, ರಾಮಮಂದಿರ, ರಾಮನವಮಿ, ವೋಟ್ ಜಿಹಾದ್, ರಾಹುಲ್ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಹೆಚ್‌ಡಿ ರೇವಣ್ಣ
ಸಂದೇಶಖಾಲಿಯಲ್ಲಿ ದಲಿತ ಸಹೋದರಿಯರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಮತ್ತು ಇಲ್ಲಿನ ಸರ್ಕಾರ ಆರೋಪಿಗಳನ್ನು ರಕ್ಷಿಸುವಲ್ಲಿ ನಿರತವಾಗಿದೆ ಎಂದರು. ಎರಡು ಹಂತದ ಮತದಾನದ ನಂತರ ಪ್ರತಿಪಕ್ಷಗಳು ಮೋದಿ ವಿರುದ್ಧ ಮತ ಜಿಹಾದ್ ಮಾಡುತ್ತಿದ್ದಾರೆ. ದೇಶದ ಜನತೆಗೆ ಜಿಹಾದ್ ಅರ್ಥ ಚೆನ್ನಾಗಿ ಅರ್ಥವಾಗಿದೆ ಎಂದರು. ಇದನ್ನೂ ಓದಿ: ಯಾವುದೇ ದೇಶದಲ್ಲಿದ್ದರೂ ಪ್ರಜ್ವಲ್ ರೇವಣ್ಣನ್ನು ಹಿಡಿದು ತರುತ್ತೆವೆ: ಸಿದ್ದರಾಮಯ್ಯ