ರಾಯಚೂರು : ಅತ್ಯಾಚಾರಕ್ಕೆ ಯತ್ನಿಸಿದಾಗ ಒಪ್ಪದ ಸೊಸೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಜುಲಮಗೇರ ನಡೆದಿದೆ. ಸೊಸೆ ದುಳ್ಳಮ್ಮನನ್ನು (27) ಮಾವ ರಾಮಲಿಂಗಯ್ಯ ಹತ್ಯೆಗೈದಿದ್ದಾನೆ. ಸೊಸೆ ಮೇಲೆ ಅತ್ಯಾಚಾರಕ್ಕೆ ರಾಮಲಿಂಗಯ್ಯ ಮುಂದಾಗಿದ್ದನೆ. ಈ ವೇಳೆ ವಿರೋಧ ಮಾಡಿದ್ದಕ್ಕೆ ಸೊಸೆಯನ್ನೇ ಮಾವ ಹತ್ಯೆಗೈದಿದ್ದಾನೆ.
ಈ ಹಿಂದೆಯೂ ಕೂಡ ಎರಡು ಮೂರು ಬಾರಿ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಗ್ರಾಮದ ಹಿರಿಯರು ಸೇರಿ ರಾಮಾಯಲಿಂಗಯ್ಯಗೆ ಬುದ್ಧಿ ಕೂಡ ಹೇಳಿದ್ದರು. ಕೊಲೆ ಮಾಡಿ ಸದ್ಯ ಪರಾರಿಯಾಗಿರುವ ರಾಮಲಿಂಗಯ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಘಟನೆ ಕುರಿತಂತೆ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

