ಬೆಂಗಳೂರು: ಸಿಲಿಕಾನ್ ಸಿಟಿ ಸೇರಿ ರಾಜ್ಯದೆಲ್ಲೆಡೆ ಮುಂದಿನ ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯೆತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿ, ಶಿವಮೊಗ್ಗ, ಕೊಡಗು ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಸೂಚನೆ ಇದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದು ಕೂಡ ರಾಜ್ಯದಲ್ಲಿ ಮಳೆ ಮುಂದುವರೆಯಲ್ಲಿದ್ದು, ಕರ್ನಾಟಕದ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ,ಕೊಡಗು, ಶಿವಮೊಗ್ಗ, ಉತ್ತರ ಒಳನಾಡಿನ ಯಾದಗಿರಿ, ಕಲಬುರಗಿಯಲ್ಲಿ ಇಂದಿನಿಂದ ಮೇ 17ರವರೆಗೆ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಹೆಚ್.ಡಿ ರೇವಣ್ಣಗೆ ಜಾಮೀನು- ಅಭಿಮಾನಿಗಳ ಸಂಭ್ರಮಾಚಾರಣೆ

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಭಾಗಗಳಲ್ಲಿ ಮಳೆಯಾಗುತ್ತಿದೆ. ಪುತ್ತೂರು, ರಾಯಚೂರು, ಉಪ್ಪಿನಂಗಡಿ, ಕೊಟ್ಟಿಗೆಹಾರ, ಗಬ್ಬೂರಿನಲ್ಲಿ ಹೆಚ್ಚು ಮಳೆಯಾಗಿದೆ. ಕಡೂರು, ಕೊಪ್ಪ, ಹುಣಸೂರು, ಕುರ್ಡಿ,ಔರಾದ್, ಚಿಕ್ಕಮಗಳೂರು, ಕಳಸ, ಗುತ್ತಲ್, ತುಮಕೂರು, ಯುಗಟಿ, ತಿಪಟೂರು, ಕೆಆರ್?ನಗರ, ಚನ್ನರಾಯಪಟ್ಟಣ, ಗೋಕರ್ಣ, ಮಾಣಿ, ಗುಬ್ಬಿ, ತರೀಕೆರೆ, ಮಧುಗಿರಿ, ಪರಶುರಾಂಪುರ, ಕುಡತಿನಿ, ಬರಗೂರು, ಕಮ್ಮರಡಿ,ಹಿರಿಯೂರು, ಆಗುಂಬೆಯಲ್ಲಿ ಮಳೆಯಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಧರೆಗುರುಳಿದ ಬೃಹತ್ ಬಿಲ್ ಬೋರ್ಡ್ – ಸಾವಿನ ಸಂಖ್ಯೆ 14 ಕ್ಕೆ ಏರಿಕೆ
ಸೇಡಬಾಳ, ಹಾವೇರಿ, ಬೆಳಗಾವಿ, ಜೋಯಿಡಾ, ಪಣಂಬೂರು, ಮೈಸೂರು, ಚಿತ್ರದುರ್ಗ, ರಾಮನಗರ, ಚಿಂತಾಮಣಿ, ಮಾನ್ವಿ, ಸವಣೂರು, ಧರ್ಮಸ್ಥಳ, ಸಂಕೇಶ್ವರ, ಗೇರುಸೊಪ್ಪ, ಧರ್ಮಸ್ಥಳ, ಜಯಪುರ, ಭಾಗಮಂಡಲ, ದಾವಣಗೆರೆ, ಸೋಮವಾರಪೇಟೆ, ಬೇಲೂರು, ನಾಯಕನಹಟ್ಟಿಯಲ್ಲಿ ಮಳೆಯಾಗಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ತರಕಾರಿ, ಹಣ್ಣುಗಳ ಬೆಲೆ ಏರಿಕೆ

