ಮಳೆ.. ಮಳೆ.. ಮಳೆ.. ಎಲ್ಲೆಲ್ಲೂ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಅದ್ರಲ್ಲೂ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆ ಕೂಡ ಹೀಗೆ ಮುಂಗಾರು ಮಳೆಯಲ್ಲಿ ಮಿಂದು ಧನ್ಯವಾಗಿದೆ. ಧರೆಗುರುಳಿದ ಮರಗಳು, ಮನೆಗೆ ನುಗ್ಗಿದ ಮಳೆ ನೀರು, ಅಂಡರ್ ಪಾಸ್ ಗಳು ಜಲಾವೃತ.. ರಸ್ತೆಗಳಲ್ಲಿ ಮಳೆ ನೀರು ನಿಂತು ಕರೆಯಂತಾಗಿರೋದು, ರೈತರ ಜನಮೀನುಗಳಿಗೆ ನೀರು ನುಗ್ಗಿ ಅವಾಂತರ.. ಸರಿಯಾಗಿ ಚರಂಡಿಗಳಲ್ಲಿ ಹೂಳು ಎತ್ತದೆ, ಕ್ಲೀನ್ ಮಾಡದೆ ಚರಂಡಿ ನೀರು ಮನೆ, ಅಂಗಡಿಗೆಳಿಗೆ ನುಗ್ಗಿ ರ್ಸತೆಯಲ್ಲೇ ನಿಂತಿರೋದು, ಇದರಿಂದ ವಾಹನಸವಾರರು, ಸಾರ್ವಜನಿಕರು ಓಡಾಡಲು ತೊಂದರೆ..
ಕೆರೆ ಕಟ್ಟೆಗಳು ಒಡೆದು ಬೆಳೆ ಹಾನಿ.. ನದಿಗಳ ಒಳಹರಿವಿನ ಪ್ರಮಾಣ ಹೇರಿಕೆ ಆಗಿರೋದು ಹೀಗೆ ರಾಜ್ಯದ ಹಲವಾರು ಕಡೆ ಕಂಡುಬರುತ್ತಿರುವಂತಹ ವಾಸ್ತವದ ಮಾಹಿತಿ.. ಮಳೆ ಬಂದರೆ ಒಂದು ಅತಿವೃಷ್ಠಿಯಾಅಗುತ್ತೆ. ಅದೇ ಮಳೆ ಬರಲಿಲ್ಲ ಅಂದರೆ ಅನಾವೃಷ್ಠಿ ಆಗುತ್ತೆ. ಹೇಗೆ ಈ ಭೂಮಿ ಮೇಲೆ ಜೀವನ ಮಾಡೋದು ಅನ್ನೋದೆ ಜನರ ಚಿಂತೆ ಆಗಿದೆ.
ಮುಂಗಾರು ಮಳೆ 2024ರಲ್ಲಿ ಬಹು ಬೇಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ ಈ ಹಿನ್ನೆಲೆ ಕನ್ನಡಿಗರ ನಾಡಲ್ಲಿ ಈಗ ಮುಂಗಾರು ಮಳೆ ಮೆರವಣಿಗೆ ಭರ್ಜರಿಯಾಗಿ ಸಾಗಿದೆ. ಹೀಗಿದ್ದಾಗ ಮುಂದಿನ 10 ದಿನ ಕಾಲ ಮತ್ತಷ್ಟು ಜೋರು ಮಳೆ ಬೀಳುವ ಬಗ್ಗೆ, ಮುನ್ನೆಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ ಹಾಗೂ ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಮುನ್ನೆಚ್ಚರಿಕೆಯನ್ನ ನೀಡಲಾಗಿದೆ.
ಕೇವಲ 1 ತಿಂಗಳ ಹಿಂದೆ ಅಂದ್ರೆ ಏಪ್ರಿಲ್ 2024ರಲ್ಲಿ ಒಂದೊಂದು ಹನಿ ನೀರಿಗೂ ಕಷ್ಟ ಆಗಿತ್ತು. ಕರ್ನಾಟಕದ ಯಾವುದೇ ಹಳ್ಳಿಗೆ ಹೋಗಿ, ಯಾವುದೇ ನಗರಕ್ಕೆ ಹೋಗಿ ಅಲ್ಲೆಲ್ಲಾ ನೀರಿಗೆ ದೊಡ್ಡ ಹೋರಾಟ ಶುರುವಾಗಿತ್ತು. ಜನಗಳು ಪ್ರತಿದಿನ ತಮ್ಮ ಕೆಲಸವನ್ನು ಬಿಟ್ಟು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು ಹೀಗಿದ್ದಾಗ ಮಳೆರಾಯ ಕರ್ನಾಟಕ ರಾಜ್ಯದಲ್ಲಿ ಒಂದಷ್ಟು ಕರುಣೆ ತೋರಿಸಿ ಮಳೆ ಸುರಿಸಲು ಆರಂಭಿಸಿದ್ದ. ಇದೀಗ ಮುಂದಿನ 1 ವಾರ ಇನ್ನೂ ಭರ್ಜರಿ ಮಳೆಯ ಆಗಮನ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ.