ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‍ಐಟಿ (SIT) ಪೊಲೀಸರು ಬಸವನಗುಡಿ ನಿವಾಸಕ್ಕೆ ಅವರನ್ನು ಕರೆತಂದು ಮಹಜರು ನಡೆಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳ ಮಹಜರಿಗೆ ಕರೆತಂದ ವೇಳೆ ಅವರ ತಾಯಿ ಭವಾನಿ ರೇವಣ್ಣ ಮನೆಯ ಮೊದಲ ಮಹಡಿಯಲ್ಲಿರುವ ತುಳಸಿಕಟ್ಟೆಗೆ ಪೂಜೆ ಸಲ್ಲಿಸುತ್ತಿದ್ದರು. ಈ ವೇಳೆ ಅಧಿಕಾರಿಗಳು ಮಹಜರು ಮುಕ್ತಾಯವಾಗುವವರೆಗೂ ಮನೆಯ ಪ್ರತ್ಯೇಕ ಜಾಗದಲ್ಲಿ ಇರುವಂತೆ ಮನೆಯ ಸದಸ್ಯರಿಗೆ ಸೂಚಿಸಿದರು. ಅಲ್ಲದೇ ಪ್ರಜ್ವಲ್‍ರನ್ನು ಭೇಟಿಯಾಗಲು ಮನೆಯ ಸದಸ್ಯರಿಗೆ ಅವಕಾಶ ನೀಡಲಿಲ್ಲ.

ಹೇಳಿಕೆ ದಾಖಲಿಸಿಕೊಳ್ಳಲು ಅಧಿಕಾರಿಗಳು ಪ್ರಿಂಟರ್ ಹಾಗೂ ಕಂಪ್ಯೂಟರ್ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಮಹಜರು ಕಾರ್ಯ ನಡೆಯುತ್ತಿದ್ದು, ಪ್ರಕರಣ ಸಂಬಂಧ ಮಹತ್ವದ ಸಾಕ್ಷ್ಯಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ:25 ವರ್ಷಗಳ ಬಳಿಕ ಕೇಂದ್ರದಲ್ಲಿ ಜೆಡಿಎಸ್‌ಗೆ ಸ್ಥಾನ- ಹೆಚ್‌ಡಿಕೆ ಸವಾಲುಗಳೇನು?
ಪ್ರಜ್ವಲ್ ರೇವಣ್ಣ ಎಸ್‍ಐಟಿ ಕಸ್ಟಡಿ ಇಂದು ಅಂತ್ಯವಾಗಲಿದೆ. ಇಂದು ಪ್ರಜ್ವಲ್ ರೇವಣ್ಣನನ್ನ ಅಧಿಕಾರಿಗಳು ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ. ಪ್ರಜ್ವಲ್ ವಿರುದ್ಧದ ಇನ್ನೂ ಎರಡು ಪ್ರಕರಣಗಳ ತನಿಖೆ ಬಾಕಿ ಹಿನ್ನೆಲೆ ಪುನಃ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಪ್ರತಿ ಪ್ರಕರಣದ ತನಿಖೆಯನ್ನ ಪ್ರತ್ಯೇಕವಾಗಿ ನಡೆಸುತ್ತಿರುವ ಎಐಟಿ, ಸದ್ಯ ಈಗ ಹೊಳೆನರಸೀಪುರ ಟೌನ್ ಠಾಣೆ ಪ್ರಕರಣ ಸಂಬಂಧ ತನಿಖೆ ನಡೆಸ್ತಿದೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಸಂಬಂಧ ಕಳೆದ ಹತ್ತು ದಿನಗಳಿಂದ ಪ್ರಜ್ವಲ್ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ:ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ರೈತರಿಗೆ ಹಣ – ಕಿಸಾನ್ ಸಮ್ಮಾನ್ ನಿಧಿ ಕಡತಕ್ಕೆ ಮೋದಿ ಸಹಿ
ಬಂಧನಕ್ಕೊಳಗಾಗಿರುವ ಆರೋಪಿ ಪ್ರಜ್ವಲ್ ಹಲವು ಮಹಿಳೆಯ ಜೊತೆ ಇದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿತ್ತು. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಅವರು ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಜರ್ಮನಿಯಲ್ಲಿದ್ದರು. ಬಳಿಕ ಭಾರತಕ್ಕೆ ಮರಳುತ್ತಿದ್ದಂತೆ ಎಸ್‍ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಇದನ್ನೂ ಓದಿ: ಇದು ಬಿಜೆಪಿ ಜೆಡಿಎಸ್ ಗೆಲುವಲ್ಲ, ನನ್ನ ಮೇಲಿನ ಆಕ್ರೋಶದ ಗೆಲುವು: ಡಿಕೆ ಸುರೇಶ್ ಭಾವುಕ
