ಬೆಂಗಳೂರು: ದೇಶವೇ ಸಂಚಲನ ಮೂಡಿಸಿರುವ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಪಿಪಿ (SPP) ಬದಲಾಹಿಸಿವಂತೆ ಸರ್ಕಾರಕ್ಕೆ ಒತ್ತಡ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇವರೆಗು ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನಕುಮಾರ್ ಅವರು ಖಡಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ ಅವರನ್ನು ಬದಲಾಯಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯಂತೆ. ಅವರೇ ಮುಂದುವರೆದರೆ ದರ್ಶನ್ ಗೆ ಕಂಟಕ ಖಂಡಿತ ಎಂದು ಎಸ್‌ಪಿಪಿ ಅವರನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಒತ್ತಡ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮತ್ತೆ ಅದೇ ಮೆಡಿಕಲ್ ಟೆಸ್ಟ್ ಮಾಡಿಸಲು ಹೇಳುತ್ತಾರೆ- ಜಡ್ಜ್ ಮುಂದೆ ಪ್ರಜ್ವಲ್ ಅಳಲು

ಎಸ್ಪಿಪಿ ಪ್ರಸನ್ನ ಕುಮಾರ್ ಬದಲಾವಣೆಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ. ಪ್ರಸನ್ನಕುಮಾರ್ ಅವರನ್ನು ಬದಲಿಸಿದರೆ ಅನುಮಾನ ಬರುವ ಸಾಧ್ಯತೆ ಇರುವುದರಿಂದ, ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗುತ್ತಿದೆ.ಇದನ್ನೂ ಓದಿ: ಮುಂದುವರಿದ ಬಾಂಬ್ ಬೆದರಿಕೆ- ಮುಂಬೈನ 50 ಕ್ಕೂ ಅಧಿಕ ಆಸ್ಪತ್ರೆಗಳಿಗೆ ಬೆದರಿಕೆ ಕರೆ
ದರ್ಶನ್ ಅಪ್ತ ರಾಜಕಾರಣಿಗಳ ಮೂಲಕ ಪ್ರಸನ್ನ ಕುಮಾರ್ ಬದಲಾವಣೆಗೆ ಒತ್ತಡ ಎರಲಾಗುತ್ತಿದೆ. ಪ್ರಸನ್ನ ಕುಮಾರ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಗಳ ಪರವಾಗಿ ವಾದ ಮಾಡುತ್ತಾ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿ ಅವರನ್ನ ಬದಲಾಯಿಸಿದರೆ ದರ್ಶನ್ ಸೇಫ್ ಮಾಡಿಸಬಹುದು ಎಂದು ಚಿಂತನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಆನ್‍ಲೈನ್ ಆಪ್‍ನಲ್ಲಿ ಹಣ ಹೂಡಿ ನಷ್ಟ – ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು