ಬೆಂಗಳೂರು : ಖಾಸಗಿ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳು ಗ್ರಾಹಕರಿಗೆ ಸೇವಾ ಶುಲ್ಕ ಹಾಕುವಂತಿಲ್ಲಾ, ಗ್ರಾಹಕರು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕ ನೀಡಿದರೆ ಮಾತ್ರ ತಗೆದುಕೊಳ್ಳಬೇಕು ಎಂದು ಮಾರ್ಗಸೂಚಿ ಇದ್ದರೂ, ಆದೇಶ ಉಲ್ಲಂಘಿಸಿ, ಸೇವಾ ಶುಲ್ಕ ಪಡೆದುಕೊಂಡು, ಮಾರ್ಗಸೂಚಿಯ ವಿರುದ್ದವೇ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಫೆಡರೇಶನ್ ಆಫ್ ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಕೋರ್ಟ್ ಮೊರೆ ಹೋಗಿತ್ತು.
ಗ್ರಾಹಕರಿಂದ ಬಂದ ದೂರಿನ ಮೇರೆಗೆ ಸೇವಾ ಶುಲ್ಕ ನಿಷೇಧಿಸಿ ಸಿಸಿಪಿಎ- ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಮಾರ್ಗಸೂಚಿ ಹೊರಡಿಸಿತ್ತು.ಸಿಸಿಪಿಎ ಮಾರ್ಗಸೂಚಿಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದು, ಸಿಸಿಪಿಎ ಮಾರ್ಗಸೂಚಿ ಪಾಲಿಸುವಂತೆ ಆದೇಶದ ಜೊತೆ ಹೋಟೆಲ್ ಅಸೋಸಿಯೇಷನ್ ಗೆ ದಂಡ ವಿಧಿಸಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

