ಮುಳಬಾಗಿಲು : ಕಂದಾಯ ಇಲಾಖೆ ರಾಜ್ಯ ಪ್ರದಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರು ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕು ಕಚೇರಿಯಲ್ಲಿ ರೆಕಾರ್ಡ್ ರೂಮ್, ಸರ್ವೇ ಕಚೇರಿ, ಸಬ್ ರಿಜಿಸ್ಟರ್, ಪರಿಶೀಲನೆ ನಡೆಸಿದರು. ಸುಮಾರು 30ನಿಮಿಷಗಳ ಕಾಲ ತಹಸೀಲ್ದಾರ್, ಆರ್ ಐ, ಸೆಕ್ರೆಟರಿ, ತಾಲ್ಲೂಕು ಕಛೇರಿ ಸಂಬಂದಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ಮುಳಬಾಗಿಲು ತಾಲ್ಲೂಕು ಕಚೇರಿಗೆ ದಿಡೀರ್ ನೇ ಬೇಟಿ ಕೊಟ್ಟ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಶ್ರೀ ರಾಜೇಂದ್ರ ಕಾಟರಿ ರವರು ಕಚೇರಿಗೆ ಬೇಟಿ ಕೊಟ್ಟು ಎಲ್ಲಾ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸಿದರು.
ನಂತರ ತಹಸೀಲ್ದಾರ್ ಕಚೇರಿ ದಂಡಾಧಿಕಾರಿಗಳಾದ ಶ್ರೀಮತಿ ಗೀತಾ ವಿ ರವರ ಜೊತೆ ಚರ್ಚಿಸಿ ಕಂದಾಯ ಇಲಾಖೆಗೆ ಬೇಟಿ ಕೊಟ್ಟು ಪರಶೀಲನೆ ಮಾಡಿದರು. ನಂತರ ಎಲ್ಲಾ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸುಮಾರು 30ನಿಮಿಷಗಳ ಕಾಲ ಸಭೆ ಸೇರಿ ಅಧಿಕಾರಿಗಳ ಜೊತೆ ಚರ್ಚಿಸಿದರು.
ನಂತರ ರಾಜ್ಯ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ರಾದ ರಾಜೇಂದ್ರ ಕಟಾರಿಯಾ ರವರು ಸಂಪೂರ್ಣ ನ್ಯೂಸ್ ಜೊತೆ ಮಾತಾಡಿ ಮುಂದಿನ ದಿನಗಳಲ್ಲಿ ಜನರಿಗೆ ಉತ್ತಮವಾದ ಸೇವೆಗಳನ್ನು ಮಾಡಲು ಸೂಚಿಸಿದರು. ಮುಳಬಾಗಿಲು ತಾಲ್ಲೂಕು ದಂಡಾಧಿಕಾರಿಗಳು ಶ್ರೀಮತಿ ಗೀತಾ ರವರು ಮಾತನಾಡಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿರಾದ ರಾಜೇಂದ್ರ ಕಟಾರಿಯಾ ರವರು ನಮ್ಮ ತಾಲ್ಲೂಕು ಕಚೇರಿಗೆ ಬೇಟಿ ಕೊಟ್ಟು ಸಲಹೆಗಳನ್ನ ನೀಡಿದರು
ವರದಿ : ಅರುಣ್ ಕುಮಾರ್ ಬಿ ಎಸ್