ಮಂಡ್ಯ : ಕೃಷಿ ಜಮೀನು ಸರ್ವೇ ನಂಬರ್ 18/2 ಮತ್ತು 5/2 ಜಮೀನಿನ ಮೇಲೆ ರಸ್ತೆ ನಿರ್ಮಾಣ ಮಾಡದಂತೆ ಸ್ಥಗಿತಗೊಳ್ಳಿಸಬೇಕು ಎಂದು ಅಂಕನಹಳ್ಳಿ ಗ್ರಾಮದ ಹರೀಶ್ ಮಾದ್ಯಮದ ಮೂಲಕ ಮನವಿ ಮಾಡಿದ್ರು.
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಐಕನಹಳ್ಳಿ ಗ್ರಾಮ ಪಂಚಾಯತ್ ರಾಷ್ಟ್ರೀಯ ಉದ್ಯೂಗ ಖಾತ್ರಿ ಯೋಜನೆಯಡಿ ಅಂಕನಹಳ್ಳಿ ಗ್ರಾಮದ ಬಲರಾಮ ರವರ ಮನೆ ಇಂದ ನಾಗಣ್ಣ ನವರ ಜಮೀನಿನ ವರರೆಗೆ ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿ 8 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿದ್ದು.
ಇದು ನಮ್ಮ ಹಿಡುವಳಿ ಜಮೀನು ಆಗಿದ್ದು ಇಲ್ಲಿ ರಸ್ತೆ ಕಾಮಗಾರಿಯನ್ನು ಮಾಡುವುದನ್ನು ಈ ಕೂಡಲೇ ಸ್ಥಗಿತಗೊಳ್ಳಿಸಬೇಕು ಗ್ರಾಮಕ್ಕೆ ವರವಾಗಬೇಕಾದ ಉದ್ಯೋಗ ಖಾತ್ರಿ ಯೋಜನೆ 8 ಲಕ್ಷ ಮೌಲ್ಯದ ಕಾಮಗಾರಿ ಇಂದು ಯಾರಿಗೂ ಉಪಯೋಗಕ್ಕೆ ಬಾರದೆ ಕಾಟಾಚಾರಕ್ಕೆ ಹಿಡುವಳಿ ಜಮೀನಿನ ಮೇಲೆ ಮಾಡಿ ತೋಪ್ಪೆ ಸಾರಿಸಲಾಗುತ್ತಿದೆ ಈ ಕಾಮಗಾರಿಯನ್ನು ಈ ಕೂಡಲೇ ಸ್ಥಗಿತ ಗೊಳಿಸಿ ಜನರ ತೆರಿಗೆ ಹಣ ಪೋಲಾಗದಂತೆ ತಡಿಹಿಡಿಯಬೇಕೆಂದು ಮಾದ್ಯಮದ ಮೂಲಕ ಒತ್ತಾಯ ಮಾಡಿದರು.
ಈಗಾಗಲೇ ಐಕನಹಳ್ಳಿ ಗ್ರಾಮ ಪಂಚಾಯತಿಗೆ ಕಾಮಗಾರಿಯನ್ನು ಸ್ಥಗಿತಗೊಳ್ಳಿಸುವಂತೆ ದೂರು ನೀಡಲಾಗಿದ್ದು ಈ ಕಾಮಗಾರಿ ಯಾವುದೇ ಮನೆಗಳಿಗೆ ಅನುಕೂಲ ಇರುವುದಿಲ್ಲ ಇದೇ ಕಾಮಗಾರಿಯನ್ನು ಗ್ರಾಮದಲ್ಲಿ ಇರುವ ಅಭಿವೃದ್ದಿ ಕಾಣದ ರಸ್ತೆಗಳ ಅಭಿವೃದ್ಧಿ ಮಾಡಲಿ ಎಂದರು…
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸ್ಧಳಿಯ ಕೂಲಿಕಾರರಿಗೆ ನೆರವಾಗಬೇಕಾದ ಸರ್ಕಾರದ ಮಹತ್ವ ಕಾಂಷೆಯೋಜನೆ ಇಂದು ಜೆಸಿಬಿ ಯಂತ್ರವನ್ನು ಬಳಸಿಕೊಂಡು ಕಾಮಗಾರಿಮಾಡಿ ಬಡಕೂಲಿಕಾರರಿಗೆ ಉದ್ಯೋಗವೇ ಇಲ್ಲ ದಂತೆ ಮಾಡುತ್ತಿದ್ದಾರೆ ಸ್ಥಳಿಯ ಗ್ರಾಮ ಪಂಚಾಯತಿಯ ಯಾವ ಅಧಿಕಾರಿಗಳೂ ಕೇಳುವ ಗೋಜಿಗೇ ಹೋಗುತ್ತಿಲ್ಲ ಇದೆಲ್ಲ ನೋಡಿದರೆ ಗ್ರಾಮ ಪಂಚಾಯಿತಿ ಅದಿಕಾರಿ ವರ್ಗ ಕಂಟ್ರಾಕ್ಟರ್ ಮುಲಾಜಿ ಒಳಗಾಗಿರುವ ಎಲ್ಲಾ ಲಕ್ಷಣಗಳು ಮೇಲು ನೋಟಕ್ಕೆ ಗೂಚರಿಸುತ್ತಿದೆ ಎಂದರು ಇದಕ್ಕೆ ಪೋರಕವಾದ ಎಂದು ಆರೋಪಿಸಿದ್ರು..

