ಬೆಂಗಳೂರು : ಸಿನಿಮಾ ಶೈಲಿಯಲ್ಲಿ ನಟೋರಿಯಸ್ ರೌಡಿಯನ್ನು ಪೊಲೀಸ್ ಪೇದೆ ಹಿಡಿದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದಿದೆ. ಪ್ರಾಣವನ್ನೇ ಪಣಕ್ಕಿಟ್ಟು ಖತರ್ನಾಕ್ ರೌಡಿಯನ್ನ ಪೇದೆಯು ವಶಕ್ಕೆ ಪಡೆದಿದ್ದಾರೆ. ನಟೋರಿಯಸ್ ರೌಡಿಯ ಚೇಸಿಂಗ್ ಮಾಡಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊರಟಗೆರೆ ಪೊಲೀಸರಿಂದ ನಟೋರಿಯಸ್ ರೌಡಿಯ ಬಂಧನವಾಗಿದೆ. ಸಿಗ್ನಲ್‌ನಲ್ಲಿ ಬೈಕ್‌ನಲ್ಲಿ ಬರುವ ವೇಳೆ ಸಿನಿಮಿಯ ಶೈಲಿಯಲ್ಲಿ ಪೇದೆ ರೌಡಿಯನ್ನ ಬಂಧಿಸಿದ್ದಾರೆ.
ಬರೋಬ್ಬರಿ 40 ಕೇಸ್ಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಹೊಟ್ಟೆ ಮಂಜು ಕೊನೆಗೂ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಈತನ ಬಂಧನದ ಬಗ್ಗೆ ತಲೆಕೆಡಿಸಿಕೊಂಡಿದ್ದ ಜಿಲ್ಲೆಯ ಬಹುತೇಕ ಪೊಲೀಸರು ಕೊನೆಗೂ ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಜಂಕ್ಷನ್ ಬಳಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧನದ ವೇಳೆ ಪೇದೆಯ ಮೇಲೆಯೇ ಹೊಟ್ಟೆ ಮಂಜ ಬೈಕ್ ಹತ್ತಿಸಲು ಮುಂದಾಗಿದ್ದಾನೆ. ಸಂಚಾರಿ ಠಾಣೆಯ ಮಹಿಳಾ ಎಸ್ಐ ಮೇಲೆಯೂ ಹೊಟ್ಟೆ ಮಂಜನಿಂದ ಹಲ್ಲೆಯಾಗಿದ್ದು, ಈ ಎಲ್ಲಾ ದೃಶ್ಯಗಳು ಸಿಗ್ನಲ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊಬೈಲ್ ಟವರ್ ಲೋಕೇಷನ್ ಆಧರಿಸಿ ಬೇಟೆಗೆ ಇಳಿದಿದ್ದ ದೊಡ್ಡಲಿಂಗಯ್ಯ, ಮತ್ತಿಕೆರೆ ಕಡೆಯಿಂದ ಸದಾಶಿವನಗರ ಠಾಣೆ ಸಿಗ್ನಲ್ ಕಡೆ ಬರ್ತಿದ್ದ ಬಿಳಿ ಬಣ್ಣದ ಆಕ್ಟಿವ್ ಹೊಂಡಾ ತಡೆದಿದ್ರು. ತಪ್ಪಿಸಿಕೊಳ್ಳಲು ಯತ್ನಿಸಿದ ಮಂಜು ಕಾಲನ್ನ ಗಟ್ಟಿಯಾಗಿ ಹಿಡಿದು ನೆಲಕ್ಕೆ ಬೀಳಿಸಿದ್ರು. ಆ ಬಳಿಕ ಪೊಲೀಸರು ಮತ್ತು ಸಾರ್ವಜನಿಕರು ಹಿಡಿದು ಧರ್ಮದೇಟು ಕೊಟ್ಟಿದ್ರು. ಒಟ್ಟಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳನನ್ನ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸೆರೆಹಿಡಿದ ಕಾನ್ಸ್ಟೇಬಲ್ ದೊಡ್ಡಲಿಂಗಯ್ಯನ ಕರ್ತವ್ಯಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.