ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಇರುವ ಎಂ ಎಸ್ ಪಾಳ್ಯದಲ್ಲಿರುವ ಎಕೆ ಎಂಟರ್ ಪ್ರೈಸ್ ಶಾಪ್ ನಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ರಾಬರಿ ನಡೆದಿದೆ. ಹೌದು ನೋಡಿ ದುಡ್ಡು ನೋಡಿದಾಕ್ಷಣ ಕೆಲವೊಬ್ಬರಿಗೆ ಏನು ಆಗತ್ತೆ ಅನ್ನೋದೇ ಗೊತ್ತಾಗಲ್ಲ ನೋಡಿ .. ದುಡ್ಡು ನೋಡಿದ್ರೆ ಹೆಣನೂ ಬಾಯಿ ಬಿಡತ್ತೆ ಅಂತಾರೆ ಅದೂ ಕೂಡ ನಿಜ ಅನ್ಸತ್ತೆ.
ಇಲ್ಲಿ ಕೆಂಗೇರಿಯ ಶ್ರೀಹರ್ಷ ಎನ್ನುವವರು ತಮ್ಮ ಹೊಸ ಕಂಪನಿಗೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಅವರ ಬಳಿ ಇದ್ದ ಕ್ರಿಪ್ಟೋಕರೆನ್ಸಿ 2 ಕೋಟಿ ಹಣವನ್ನು ಕನ್ವರ್ಟ್ ಮಾಡಿಸಲು ಮುಂದಾಗಿದ್ದರು ..ಹಾಗೇನೇ ಈ ಸಂದರ್ಭದಲ್ಲಿ ಆತನ ಸ್ನೇಹಿತರಾದ ಬೆಂಜಮಿನ್ ಮತ್ತು ಇನ್ನುಳಿದವರು 2 ಕೋಟಿ ಹಣ ಎಣಿಕೆ ಮಾಡುತ್ತಿದ್ದರು .
ಇದೆ ಸಮಯದಲ್ಲಿ ಎಂಟ್ರಿ ಕೊಟ್ಟ 6-7 ಜನ ಕಳ್ಳರು ಶ್ರೀಹರ್ಷ ಕತ್ತಿಗೆ ಚಾಕು ಇಟ್ಟು, ಬೆಂಜಮಿನ್ ಮತ್ತು ಸ್ನೇಹಿತರನ್ನ ಕೂಡಿ ಹಾಕಿ 2 ಕೋಟಿ ಹಣ ಚೀಲಕ್ಕೆ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ ಎನ್ನುವ ಅಮಾಹಿತಿ ಲಭ್ಯವಾಗಿದೆ. ಸದ್ಯ ಈ ಘಟನೆ ಸಂಬಂಧ ಶ್ರೀಹರ್ಷ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದು ಬೆಂಜಮಿನ್ ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ.
ಸದ್ಯ ಬೆಂಜಮಿನ್ ಹರ್ಷ ಮತ್ತು ಸ್ನೇಹಿತರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನು ಅಂತ ಹೇಳಿದ್ರೆ ದುಡ್ಡು ಎಣಿಕೆ ಮಾಡುವ ಸಮಯದಲ್ಲೇ ದರೋಡೆಕೋರರು ಎಂಟ್ರಿ ಕೊಟ್ಟಿದ್ದಾರೆ ಅಂದ್ರೆ ಅಲ್ಲಿ ಇರುವವರೇ ಪ್ಲಾನ್ ಮಾಡಿ ಕಳ್ಳತನಕ್ಕೆ ಕಿಂಗ್ ಪ್ಲಾನ್ ಮಾಡಿದ್ರಾ ಅನ್ನೋದನ್ನು ಕಾದುನೋಡಬೇಕು

