ಬೆಳಗಾವಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಹಾರೂಗೇರಿ, ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಹಿಡಕಲ್ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪರಮಪೂಜ್ಯ ಡಾ. ವೀರೇಂದ್ರ ಹೆಗಡೆ ಹಾಗೂ ಮಾತುಶ್ರೀ ಹೇಮಾವತಿ ವಿ ಹೆಗಡೆಯವರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ಬಸವೇಶ್ವರ ಮಂಟಪದಲ್ಲಿ ಜರುಗಿದ ಧಾರ್ಮಿಕ ಸಮಾವೇಶದಲ್ಲಿ ನಮ್ಮ ಸಂಸ್ಥೆ ಕೇವಲ ಸಾಲ ಕೊಡುವದು ವಸೂಲಿ ಮಾಡುವದು ಮಾತ್ರವಲ್ಲ ಶಿಕ್ಷಣ ಕ್ಷೆತ್ರ, ಸಾಮಾಜಿಕ, ಹೈನುಗಾರಿಕೆ, ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ನೆರವು, ವ್ಯಾಪಾರ ಉದ್ದಿಮೆ ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನದೇ ಆದಂತಹ ಅಪಾರ ಕೊಡೆಗೆಯನ್ನು ನೀಡಿದೆ, ಮನುಸ್ಸು ನಿಗ್ರಹವಾಗಬೇಕಾದರೆ ಆದ್ಯಾತ್ಮ ಅವಶ್ಯಕತೆ ಇದೆ ಎಂದು ಕ್ಷೇತ್ರ ಯೋಜನಾಧಿಕಾರಿಗಳಾದ
ಮೋಹನ ಕೆ ತಿಳಿಸಿದರು
ಸಮಾಜದ ಪ್ರತಿಯೊಂದು ಕುಟುಂಬದ ಶ್ರೇಯೋಬಿವೃದ್ಧಿಗೆ ಸಂಸ್ಥೆ ಹಗಲಿರುಳು ಸೇವೆ ಸಲ್ಲಿಸುತ್ತಿದೆ, ಭಾರತೀಯರಿಗೆ ಸಂಸ್ಕಾರವೇ ಭೂಷಣ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಬಿ ಎಲ್ ಘಂಟಿ ತಿಳಿಸಿದರು
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಶ್ರೀ ಮಾರುತಿ ಶರಣರು ಕಂಕನವಾಡಿ ಮಾತನಾಡಿ ಮನುಷ್ಯನಾಗಿ ಹುಟ್ಟಿದ ಪ್ರತಿ ಮನುಷ್ಯ ಸುಖ ದುಃಖವಿದ್ದರೂ ಸತ್ಯದ ಮಾರ್ಗದಲ್ಲಿ ನಡೆಯಬೇಕು “ದಾಬಾ ಬಂದು ಗಂಡಮಕ್ಳು ಕೆಟ್ಟರಂತೆ ಧಾರಾವಾಹಿ ಬಂದು ಹೆಣ್ಣಮಕ್ಳು ಕೆಟ್ಟರಂತೆ “
“ಬಡವರಿಗೆ ಮಕ್ಕಳು ಬಹಳ ಶ್ರೀಮಂತರಿಗೆ ರೊಕ್ಕ ಬಹಳ ” ಎಂದು ತಮ್ಮ ಹಾಸ್ಯ ಚಟಾಕೆಯ ಮೂಲಕ ಆದ್ಯಾತ್ಮ ಜಾಗೃತಿ ಮೂಡಿಸಿ ಆಶೀರ್ವಾಚನ ನೀಡಿದರು, ಕುಮಾರಿ ಮದುಶ್ರೀಯವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ಕಲ್ಲಪ್ಪ ಮಾಳಿ, ರಾಘವೇಂದ್ರ ಸಿಂಪಿ, ಸಚಿನ್ ಗಂಟಿ, ಸುಧಾ ದವಳೇಶ್ವರ ಸಂಸ್ಥೆಯ ಪ್ರತಿನಿದಿಗಳು ಉಪಸ್ಥಿತರಿದ್ದರು
ವರದಿ : ಎಂ. ಕೆ. ಸಪ್ತಸಾಗರ

