ಕೀ ಸಮೇತ ಸ್ಕೂಟರ್‌ ಕದ್ದು ಪರಾರಿಯಾದ ಕಿಲಾಡಿ

ಬೆಂಗಳೂರು: ಬೆಂಗಳೂರಿನ ಹೆಬ್ಬಾಳದ ಚೋಳನಹಳ್ಳಿ ಮಿನಿ ಮಾರ್ಟ್ ಮುಂಭಾಗ ಮಹಿಳೆಯೊಬ್ಬರು ಕೀ ಸಮೇತ ಸ್ಕೂಟರ್ ನಿಲ್ಲಿಸಿದ್ದರು. ತರಕಾರಿ ಖರೀದಿಸಿ ವಾಪಸ್ ಬರುವುದರೊಳಗೆ ಸ್ಕೂಟರ್‌ ಮಾಯವಾಗಿತ್ತು. ಕೀ ಸಮೇತ ಸ್ಕೂಟರ್ ನಿಲ್ಲಿಸಿದ್ದನ್ನು ಗಮನಿಸಿದ ವ್ಯಕ್ತಿ ಕ್ಷಣಾರ್ಧದಲ್ಲೇ ಸ್ಕೂಟರ್‌ ಏರಿ ಎಸ್ಕೇಪ್ ಆಗಿದ್ದಾನೆ. ಸ್ಕೂಟರ್ ಕದಿಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.