ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lokhasabha Election) ಮಹಿಳಾ (Women) ಮತದಾರರಿಗಾಗಿ ಸಖಿ ಮತಗಟ್ಟೆ, ಯುವ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಮತದಾನದ ಹಬ್ಬಕ್ಕೆ ಪಿಂಕ್ (Pink) ಮಾದರಿ ಮತಗಟ್ಟೆಗಳು ಸಜ್ಜಾಗಿವೆ. ಗುಲಾಬಿ ಬಣ್ಣದ ಪರದೆಗಳು, ಬ್ಯಾನರ್‌ಗಳಿಂದ ಪಿಂಕ್ ಮತಗಟ್ಟೆಗಳು ಸಿಂಗಾರಗೊಂಡಿವೆ.
ಏನಿದ್ದು ಪಿಂಕ್ ಬೂತ್?
ಮಹಿಳೆಯರ ಮತದಾನ ಪ್ರೋತ್ಸಾಹಿಸುವ ಸ್ಲೋಗನ್‌ಗಳನ್ನು ಒಳಗೊಂಡ ಬ್ಯಾನರ್‌ಗಳು ಮತ್ತು ಮಹಿಳೆಯರು ಹೆಚ್ಚಾಗಿರುವ ವಾರ್ಡ್ಗಳಲ್ಲಿ ಪಿಂಕ್ ಬೂತ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಮಹಿಳೆಯರ ಮತದಾನಕ್ಕೆ ಉತ್ತೇಜನ ನೀಡಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಂಕ್ ಬೂತ್ ಗಳ ನಿರ್ಮಾಣ ಮಾಡಲಾಗಿದೆ.

ಹಾಗಾದರೇ ಎಲ್ಲೆಲ್ಲಿ ಸಖಿ ಮತಗಟ್ಟೆ (ಪಿಂಕ್ ಬೂತ್ )ಸ್ಥಾಪನೆ ಮಾಡಲಾಗಿದೆ ನೋಡುವವುದಾದರೆ,
* ಮೌಂಟ್ ಕಾರ್ಮಲ್ ಇಂಗ್ಲಿಷ್ ಕಾಲೇಜ್ ವಸಂತ ನಗರ ರೂಮ್ ನಂಬರ್ – 05,
* ಯುನೈಟೆಡ್ ಟೆಕ್ನಾಲಜಿ ಕಾಲೇಜ್ ಮಿಲ್ಲರ್ಸ್ ರೋಡ್ ರೂಮ್ ನಂಬರ್ -01,
* ಆರ್ಚಿಡ್ ಇಂಟರ್ನ್ಯಾಷನಲ್ ಸ್ಕೂಲ್ ಚಿಕ್ಕಪೇಟೆ,
* ಬಿಬಿಎಂಪಿ ವಾರ್ಡ್ ಆಫೀಸ್ ರಾಜಾಜಿನಗರ,
* ಗೌರ್ಮೆಂಟ್ ಸೀನಿಯರ್ ಪ್ರೈಮರಿ ಸ್ಕೂಲ್ ರಾಜಾಜಿನಗರ,
* ಸರ್ವೋದಯ ವಿದ್ಯಾಲಯ ವಿಜಯನಗರ,
ಯುವ ಮತದಾರರಿಗೆ ಪ್ರತ್ಯೇಕ ಬೂತ್ ಸ್ಥಾಪನೆ,
* ಶಾರದಾ ನಗರ ಜಾಲಹಳ್ಳಿ ರೂಮ್ ನಂಬರ್-04,
* ಬಿಡಿಎ ಆಫೀಸ್ ಸ್ಯಾಂಕಿ ರೋಡ್ ರೂಮ್ – 01,
* ಗೋರ್ಮೆಂಟ್ ಕನ್ನಡ ತೆಲುಗು ತಮಿಳು ಪ್ರೈಮರಿ ಸ್ಕೂಲ್ ವಿವೇಕ್ ನಗರ ರೂಮ್ – 02,
ವಿಶೇಷಚೇತನರಿಗೆ ಪ್ರತ್ಯಕ್ಷ ಬೂತ್ ಸ್ಥಾಪನೆ,
* ಸೇಂಟ್ಕ್ಯಾತ್ರೆನ್ ಹೈ ಸ್ಕೂಲ್ ಕಾಟನ್ ಪೇಟೆ,
* ಗೋವರ್ನಮೆಂಟ್ ಕರ್ನಾಟಕ ಮಾಡೆಲ್ ಬಾಯ್ಸ್ ಅಂಡ್ ಗರ್ಲ್ಸ್ ಸ್ಕೂಲ್ ಚಾಮರಾಜಪೇಟೆ,
* ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜ್ ಬನಶಂಕರಿ.,

