ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್ (Darshan) ಜೈಲು ಪಾಲಾಗಿದ್ದಾರೆ. ಈಗ ದರ್ಶನ್ ಪ್ರಕರಣದ ಬಗ್ಗೆ ತಾರಕ್ ನಟಿ ಶಾನ್ವಿ (Shanvi Srivastava) ರಿಯಾಕ್ಟ್ ಮಾಡಿದ್ದಾರೆ. ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು ಎಂದು ನಟಿ ಮಾತನಾಡಿದ್ದಾರೆ.

ಶಾನ್ವಿ ಅವರು ದರ್ಶನ್ ಜೊತೆ ತಾರಕ್ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಜೊತೆ ಸಿನಿಮಾದಲ್ಲಿ ಅಭಿನಯಿಸಿದ ಅನುಭವ ಚೆನ್ನಾಗಿತ್ತು. ಅಷ್ಟು ದೊಡ್ಡ ಸ್ಟಾರ್ ಅವರ ಜೊತೆ ನಟಿಸಿದ್ದು, ಖುಷಿಯಿದೆ. ನನಗೆ ತುಂಬಾ ಗೌರವ ಕೊಡ್ತಾ ಇದ್ದರು. ಅದು ಬಿಟ್ಟು ವೈಯಕ್ತಿಕ ವಿಚಾರ ನನಗೆ ಗೊತ್ತಿಲ್ಲ. ದರ್ಶನ್ ಈ ಘಟನೆ ಕೇಳಿ ಶಾಕ್ ಆಯ್ತು. ಈ ಪ್ರಕರಣದ ಕುರಿತು ನಾನು ಕಾಮೆಂಟ್ ಮಾಡೋದು ಸರಿಯಲ್ಲ. ನನಗೆ ಸಂಬಂಧಿಸಿಲ್ಲದ ಪ್ರಕರಣದ ಮಾತನಾಡಲ್ಲ ಎಂದು ನಟಿ ಹೇಳಿದ್ದಾರೆ.

ನಾನು ಸೋಶಿಯಲ್ ಮೀಡಿಯಾ ಯೂಸ್ ಮಾಡೋವಾಗ ಕೆಟ್ಟ ಕಾಮೆಂಟ್ ಒಳ್ಳೆಯ ಕಾಮೆಂಟ್ ಬರುತ್ತದೆ. ಆದರೆ ಒಳ್ಳೆಯ ಕಾಮೆಂಟ್ ಜಾಸ್ತಿ ಇರುತ್ತಲ್ಲ ಅದರ ಬಗ್ಗೆ ಗಮನ ಕೊಡ್ತೀನಿ. ಕೆಟ್ಟ ಕಾಮೆಂಟ್‌ಗಳಿಗೆ ಜಾಸ್ತಿ ತಲೆ ಕೆಡಿಸಿಕೊಂಡರೆ ಸಮಯ ವ್ಯರ್ಥವಾಗುತ್ತದೆ. ದರ್ಶನ್ ಅವರು ಆದಷ್ಟು ಬೇಗ ಈ ಪ್ರಕರಣದಿಂದ ಹೊರ ಬರಲಿ ಅಂತ ಆಶಿಸುತ್ತೇನೆ ಎಂದು ಶಾನ್ವಿ ಮಾತನಾಡಿದ್ದಾರೆ.

ಅಂದಹಾಗೆ, 2017ರಲ್ಲಿ ದರ್ಶನ್ ನಟನೆಯ ‘ತಾರಕ್’ ಸಿನಿಮಾದಲ್ಲಿ ಶಾನ್ವಿ ನಾಯಕಿಯಾಗಿ ನಟಿಸಿದ್ದರು. ಇಬ್ಬರ ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿತ್ತು.