ನ್ಯೂಯಾರ್ಕ್: ಲಾಸ್ ವೇಗಾಸ್ನಲ್ಲಿರುವ (Las Vegas) ಅಪಾರ್ಟ್ ಮೆಂಟ್ಗಳ ಮೇಲೆ ನಡೆದ ಗುಂಡಿನ (Firing) ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, 13 ವರ್ಷದ ಬಾಲಕ ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಎರಿಕ್ ಆಡಮ್ಸ್ (47) ಗುಂಡಿನ ದಾಳಿ ನಡೆಸಿದ ಶಂಕಿತ. ಘಟನೆಯ ಬಳಿಕ ಈತನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಎರಿಕ್ ಆಡಮ್ಸ್ ಸೋಮವಾರ ತಡರಾತ್ರಿ ಅದೇ ಸಂಕೀರ್ಣದಲ್ಲಿರುವ ಎರಡು ನಾರ್ತ್ ಲಾಸ್ ವೇಗಾಸ್ ಅಪಾರ್ಟ್ಮೆಂಟ್ಗಳಲ್ಲಿ ನಾಲ್ವರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಭಾರತಕ್ಕೆ ಸಕಾರಾತ್ಮಕ ಸಂದೇಶ ಕಳುಹಿಸಿದ ಪಾಕ್
ಶಂಕಿತ ನ ಸುಳಿವಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಲು ತೆರಳಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಘಟನೆಯ ಹಿಂದಿರುವ ಉದ್ದೇಶ ಏನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗಣಿಗಾರಿಕೆ ಬಳಿಕ KRS ಅಣೆಕಟ್ಟೆಗೆ ಎದುರಾಯ್ತು ಮತ್ತೊಂದು ಕಂಟಕ- ಜಾಗ ಮೇಲೆ ಭೂಗಳ್ಳರ ಕಣ್ಣು