ತುಮಕೂರು : ತುಮಕೂರು ಜಿಲ್ಲೆ ಚೇಳೂರು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಸಂಬಂಧ ಸಂತ್ರಸ್ತ ತಾಯಿ ಮಗಳಿಂದ ದೂರು ಸ್ವೀಕರಿಸದೆ ಠಾಣೆಯಲ್ಲಿ ನಿಂದಿಸಿದ ಆರೋಪದ ಮೇರೆಗೆ ಚೇಳೂರು ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಹರೀಶ್ ಅವರಿಗೆ ₹50.000 ದಂಡ ವಿಧಿಸಿದ್ದಲ್ಲದೆ ಶಿಸ್ತು ಕ್ರಮ ಜರುಗಿಸುವಂತೆ, ಸರ್ಕಾರಕ್ಕೆ ರಾಜ್ಯ ಮಾನವ ಹಕ್ಕುಗಳ ಶಿಫಾರಸು ಮಾಡಿದೆ,,
ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದೆ, ಎಂದು ಠಾಣೆಗೆ ದೂರು ಕೊಡಲು ತೆರಳಿದ ತಾಯಿ ಹಾಗೂ ಮಗಳ ಮೇಲೆ “ಪಿಎಸ್ಐ ಹರೀಶ್ ” ನಿವೃತ್ತ ಪಿಎಸ್ಐ ಪಾಪಣ್ಣ ಅವರು ದುರಹಂಕಾರದಿಂದ ನಡೆದುಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ,,
ಠಾಣೆಗೆ ದೂರು ಕೊಡಲು ಬಂದರೆ ನಿಮ್ಮನ್ನು ಒದ್ದು ಸಾಯಿಸುತ್ತೇನೆ ಎಂದು ಸಬ್ ಇನ್ಸ್ಪೆಕ್ಟರ್ ಹರೀಶ್,ತಾಯಿ ಮಗಳಿಗೆ ಬೆದರಿಸಿದ್ದರು ಈ ಬಗ್ಗೆ ನೊಂದ ತಾಯಿ ದೂರಿನ ಅನ್ವಯ ಠಾಣೆಯ ಸಿಸಿಟಿವಿ ಕ್ಯಾಮೆರಾ ಗಳನ್ನು ಪರಿಶೀಲಿಸಿದಾಗ ಸಂತ್ರಸ್ತರ ಮೇಲೆ ಪಿಎಸ್ಐ ಹರೀಶ್ ದರ್ಪ ತೋರಿಸುವುದು ಬೆಳಕಿಗೆ ಬಂದಿದೆ,,
ಈ ಮಾಹಿತಿ ಮೇರೆಗೆ ಆರೋಪಿತ ಪಿಎಸ್ಐ ಹರೀಶ್ ಹಾಗೂ ಈ ಹಿಂದೆ ಚೇಳೂರು ಠಾಣೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಪಾಪಣ್ಣ ಅವರಿಗೆ ₹50.000 ದಂಡ ಆಯೋಗ ವಿಧಿಸಿದೆ, ಅಲ್ಲದೆ ಈ ಇಬ್ಬರು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸಂತ್ರಸ್ತರಿಗೆ ಆರೋಪಿಗಳಿಂದ ವಸೂಲಿ ಮಾಡಿದ ಹಣವನ್ನು ಪರಿಹಾರ ರೂಪದಲ್ಲಿ ನೀಡುವಂತೆ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ, ತಮ್ಮ ಅತ್ತೆ ನಾರಾಯಣಮ್ಮ ಮಾವ ಪರಮಾತ್ಮ ಮೈದುನ ಹಾಗೂ ಮಧು ಅವರ ಮಾತು ಕೇಳಿ ಪಿಎಸ್ಐ ಹರೀಶ್ ದೂರು ಸ್ವೀಕರಿಸಲು ವಿಳಂಬ ಮಾಡಿದ್ದಾರೆ ಎನ್ನಲಾಗಿದೆ, ಈ ಘಟನೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಯಿತು, ಆದರೆ ಪೊಲೀಸ್ ಠಾಣೆಗೆ ಹೋದರೆ ಮನಬಂದಂತೆ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿ ಪಿಎಸ್ಐ ಕಳುಹಿಸಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ,,,
ವರದಿ : ನರಸಿಂಹರಾಜು ತುಮಕೂರು

