ಬೆಂಗಳೂರು: ಮಾಜಿ ಸಚಿವ ಹೆಚ್.ಡಿ. ರೇವಣ್ಣ (HD.Revanna) ವಿರುದ್ಧ ದಾಖಲಾಗಿರುವ ಮಹಿಳೆ ಅಪಹರಣ ಪ್ರಕರಣದಲ್ಲಿ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ವಿರುದ್ಧ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸರ್ಕಾರ SIT ಗೆ ಸೂಚಿಸಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಭವಾನಿ ಅವರು ಎಸ್‌ಐಟಿ (SIT) ನೀಡಿದ ಮೂರು ಬಾರಿ ನೋಟಿಸ್‌ಗೂ ಆರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗದೇ ಗೈರಾಗಿದ್ದಾರೆ. ಸದ್ಯ ಈಗ ರೇವಣ್ಣ ಅವರ ಬಂಧನ ರಾಜಕೀಐ ತಿರುವು ಪಡೆದುಕೊಂಡಿದ್ದು, ಇವರ ವಿಚಾರದಲ್ಲು ಅದೇ ರೀತಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಲೆಕ್ಕಾಚಾರ ಹಾಕಿದ್ದು, ಇದೇ ಕಾರಣಕ್ಕೆ ಭವಾನಿ ರೇವಣ್ಣ ಅವರ ವಿಚಾರದಲ್ಲಿ ಎಸ್‌ಐಟಿ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿಗೆ ಹೆದರಿಸಲು ಹೋಗಿ ಜಿಮ್ ಟ್ರೈನರ್ ಸಾವು
ರೇವಣ್ಣ ಅವರ ವಿರುದ್ಧ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರವಾಗಿ ಸಂತ್ರಸ್ತೆ ಮಗ ನೀಡಿದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿತ್ತು. ಆದರೆ ಇದು ರಾಜಕೀಐ ಷಡ್ಯಂತ್ರ ಎಂದೇಳೆ ಅವರ ಬೆಂಬಲಿಗರು ಆರೋಪಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ಇದನ್ನೂ ಓದಿ: ಹಸುಗೂಸನ್ನು ರಸ್ತೆ ಬದಿಗೆ ಎಸೆದ ಅನಾಮಿಕರು

