ದೇಶಾದ್ಯಂತ ಸಂಭ್ರಮದಿಂದ ಆಚರಿಸುವ ಹಬ್ಬ ಗಣೇಶ ಚತುರ್ಥಿಗೆ ಸಂಭ್ರಮ ಸಡಗರ ಮನೆ ಮಾಡಿದೆ. ಗಣಪನನ್ನು ಸಂಭ್ರಮದಿಂದ ಮನೆಗೆ ಸ್ವಾಗತಿಸುವ ಸಮಯದಲ್ಲಿ ಮನೆಯ ಸಿದ್ಧತೆಯೊಂದಿಗೆ ಮನೆಯಲ್ಲಿರುವ ಹೆಂಗಳೆಯರೂ ಸಿದ್ಧತೆಯನ್ನು ಮಾಡಬೇಕಾಗುತ್ತದೆ. ಮನೆಗೆ ಬರುವ ನೆಂಟರಿಷ್ಟರು, ತರೇಹವಾರಿ ಅಡುಗೆಗಳ ಭರಾಟೆ ಹೀಗೆ ಮಹಿಳೆಯರು ಹಬ್ಬದ (Festival) ದಿನಗಳಲ್ಲಿ ತುಂಬಾ ಬ್ಯುಸಿಯಾಗುತ್ತಾರೆ. ಈ ಸಮಯದಲ್ಲಿ ಸೌಂದರ್ಯ ವಿಷಯಕ್ಕೂ ಆದ್ಯತೆ ನೀಡಲಾಗುತ್ತದೆ. ತ್ವಚೆಗೆ (Skin) ವಿಶೇಷ ಅಸ್ಥೆ ನೀಡಬೇಕಾಗುತ್ತದೆ. ತ್ವಚೆಯನ್ನು ಸುಕೋಮಲಗೊಳಿಸಬೇಕಾಗುತ್ತದೆ ಹಾಗೂ ತ್ವಚೆಯನ್ನು ಕಂಗೊಳಿಸುವಂತೆ ಮಾಡಲು ಸಾಕಷ್ಟು ತ್ವಚೆಯ ಆರೈಕೆಯನ್ನು ಮಾಡಬೇಕಾಗುತ್ತದೆ.
ಡಾ. ಹರೋರ್ಸ್ ವೆಲ್‌ನೆಸ್‌ನಲ್ಲಿ ಮುಖ್ಯ ಚರ್ಮರೋಗ ತಜ್ಞರು ಮತ್ತು ಸೌಂದರ್ಯವರ್ಧಕ ಮತ್ತು ಕೂದಲು ಕಸಿ ಶಸ್ತ್ರಚಿಕಿತ್ಸಕರಾದ ಡಾ. ನವನಿತ್ ಹರೋರ್ ಗಣೇಶ ಚತುರ್ಥಿ ಹಬ್ಬಕ್ಕೆ ಹೇಗೆ ಮಹಿಳೆಯರು ಸಿದ್ಧರಾಗಬಹುದು ಎಂಬ ಸಲಹೆಗಳನ್ನು ನೀಡಿದ್ದಾರೆ.
ಹೈಡ್ರೇಶನ್ ತುಂಬಾ ಮುಖ್ಯ
ತ್ವಚೆಗೆ ಯಾವುದೇ ರೀತಿಯ ಆರೈಕೆಗಳನ್ನು ನಿರ್ವಹಿಸಿ ಆದರೆ ನೀರನ್ನು ಸಾಕಷ್ಟು ಸೇವಿಸಿ ಹೈಡ್ರೇಶನ್ ಅನ್ನು ಕಾಯ್ದುಕೊಳ್ಳಬೇಕು ಎಂದು ನವನಿತ್ ಸಲಹೆ ನೀಡುತ್ತಾರೆ. ಸಾಕಷ್ಟು ನೀರು ಸೇವಿಸಿದರೆ ಚರ್ಮವು ಒಣಗುವುದಿಲ್ಲ ಹಾಗೂ ಆರೋಗ್ಯಕರವಾಗಿ ನಳನಳಿಸುತ್ತದೆ ಎಂದು ಅವರು ಸಲಹೆ ನೀಡುತ್ತಾರೆ.
ಕ್ಲೆನ್ಸಿಂಗ್ ಅತಿಮುಖ್ಯ
ಕ್ಲೆನ್ಸಿಂಗ್ ಚರ್ಮದಲ್ಲಿರುವ ಕೊಳೆ, ಬೆವರು, ಮೇಕಪ್ ಅನ್ನು ನಿವಾರಿಸಿ ತ್ವಚೆಯು ಸಲೀಸಾಗಿ ಶುಭ್ರವಾಗುವಂತೆ ಮಾಡುತ್ತದೆ. ಶುಷ್ಕ, ಎಣ್ಣೆಯುಕ್ತ ಅಥವಾ ಸೂಕ್ಷ್ಮವಾಗಿರಲಿ ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತ ಕ್ಲೆನ್ಸಿಂಗ್ ಅನುಸರಿಸಿ.
ಎಕ್ಸ್‌ಫೋಲಿಯೇಟ್ ಅನುಸರಿಸಿ
ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಎಕ್ಸ್‌ಫೋಲಿಯೇಟ್ ಮುಖ್ಯವಾಗುತ್ತದೆ. ಅಂತೆಯೇ ತ್ವಚೆಯನ್ನು ಕಾಂತಿಯುಕ್ತವಾಗಿಸಲು ಎಕ್ಸ್‌ಫೋಲಿಯೇಟ್ ಸಹಕಾರಿಯಾಗಿದೆ.
ಆದರೆ ಹೆಚ್ಚು ಎಕ್ಸ್‌ಫೋಲಿಯೇಟ್ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡುವ ನವನಿತ್ ಇದು ಚರ್ಮದ ಮೇಲೆ ಕಿರಿಕಿರಿಗೆ ಕಾರಣವಾಗುತ್ತದೆ ಎಂದು ತಿಳಿಸುತ್ತಾರೆ. ಮೃದುವಾಗಿ ಎಕ್ಸ್‌ಫೋಲಿಯೇಟ್ ಮಾಡಿಸಿಕೊಳ್ಳಿ ಎಂದವರು ಸಲಹೆ ನೀಡುತ್ತಾರೆ.
ಇದನ್ನೂ ಓದಿ:
ಕೂದಲು, ಉಗುರು, ಚರ್ಮ ಆರೋಗ್ಯವಾಗಿರಬೇಕೇ? ಹಾಗಾದರೆ ಈ ಪದಾರ್ಥಗಳನ್ನು ಸೇವಿಸಿ!
ಮನೆಯಲ್ಲೇ ಫೇಸ್ ಮಾಸ್ಕ್ ತಯಾರಿಸಿ
ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಫೇಸ್ ಮಾಸ್ಕ್‌ಗಳನ್ನು ಬಳಸಿ. ಅರಶಿನ ಹಾಗೂ ಮೊಸರು ಬಳಸಿ ಮಾಡುವ ಫೇಸ್ ಮಾಸ್ಕ್ ಮುಖಕ್ಕೆ ತುಂಬಾ ಒಳ್ಳೆಯದು ಎಂದವರು ಸಲಹೆ ನೀಡುತ್ತಾರೆ.
ಜೇನು ಹಾಗೂ ಓಟ್‌ಮೀಲ್ ಫೇಸ್ ಮಾಸ್ಕ್ ಕೂಡ ಪರಿಣಾಮಕಾರಿಯಾಗಿರುತ್ತದೆ ಎಂಬುದು ಅವರ ಸಲಹೆಯಾಗಿದೆ. ನಿಮ್ಮ ತ್ವಚೆಗೆ ಯಾವುದು ಸೂಕ್ತವೋ ಆ ಫೇಸ್ ಮಾಸ್ಕ್‌ಗಳನ್ನು ಬಳಸಿ ಎಂಬುದು ಅವರ ಸಲಹೆಯಾಗಿದೆ.
ಸನ್‌ಸ್ಕ್ರೀನ್ ಬಳಕೆ
ಮನೆಯೊಳಗಿದ್ದರೂ ತ್ವಚೆಯ ಆರೋಗ್ಯಕ್ಕೆ ಸನ್‌ಸ್ಕ್ರೀನ್ ಬಳಸುವುದು ಅತಿಮುಖ್ಯ ಎಂಬುದು ನವನಿತ್ ಹೇಳಿಕೆಯಾಗಿದೆ. ಯುವಿ ಕಿರಣಗಳು ಕಿಟಕಿಗಳಿಂದ ಹಾದು ತ್ವಚೆಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.
ಎಸ್‌ಪಿಎಫ್ 30 ಇರುವ ಸನ್‌ಸ್ಕ್ರೀನ್ ಬಳಸಿ ಹಾಗೂ ಕಿಟಿಕಿಯ ಬಳಿ ಇಲ್ಲವೇ ಬಾಲ್ಕನಿಯಲ್ಲಿ ನಿಮಗೆ ಹೆಚ್ಚಿನ ಕೆಲಸವಿರುತ್ತದೆ ಎಂದಾದರೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.
ಉತ್ಕರ್ಷಣ ನಿರೋಧಕಗಳೊಂದಿಗೆ ಚರ್ಮದ ಪೋಷಣೆ ನಡೆಸಿ
ನಿಮ್ಮ ಆಹಾರದಲ್ಲಿ ಉತ್ಕರ್ಷಣ ನಿರೋಧಕ ಆಹಾರಗಳಾದ ಹಣ್ಣು, ಪಾಲಕ್ ಸೊಪ್ಪು, ಬೀಜಗಳನ್ನು ಸಾಕಷ್ಟು ಬಳಸಿ ಎಂದು ನವನಿತ್ ಸಲಹೆ ನೀಡುತ್ತಾರೆ. ಇದು ಒತ್ತಡ ನಿವಾರಿಸಿ ಚರ್ಮ ಯವ್ವೌನದಿಂದ ಕಂಗೊಳಿಸುವಂತೆ ಮಾಡುತ್ತದೆ.
ನಿದ್ರೆ ಅತ್ಯಂತ ಮುಖ್ಯ
ಹಬ್ಬದ ಸಿದ್ಧತೆ ಎಂದು ತಡರಾತ್ರಿಯವರೆಗೆ ಕೆಲಸ ಮಾಡುತ್ತಲೇ ಇರಬೇಡಿ. ಉತ್ತಮ ನಿದ್ರೆ ಕೂಡ ಚರ್ಮವನ್ನು ನಳನಳಿಸುವಂತೆ ಮಾಡುತ್ತದೆ ನಿಮಗೆ ತಾಜಾತನವನ್ನುಂಟು ಮಾಡುತ್ತದೆ.
ಕೂದಲಿಗೆ ಹಾಗೂ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ
ನಿಮ್ಮ ಕೂದಲು ಹಾಗೂ ದೇಹಕ್ಕೆ ಎಣ್ಣೆ ಮಸಾಜ್ ಮಾಡಿಕೊಳ್ಳಿ. ಕೊಂಚ ಬಿಸಿಯಾದ ತೆಂಗಿನೆಣ್ಣೆ ಹಾಗೂ ಬಾದಾಮಿ ಎಣ್ಣೆ ಬಳಸಿಕೊಂಡು ಕೂದಲು ಹಾಗೂ ದೇಹಕ್ಕೆ ಮಸಾಜ್ ಮಾಡಿಕೊಳ್ಳಿ. ಮಸಾಜ್ ರಕ್ತಪ್ರಸರಣವನ್ನು ಚೆನ್ನಾಗಿ ಮಾಡುತ್ತದೆ.
ಮೇಕಪ್ ರಿಮೂವಲ್ ಬಳಸಿ ಮೇಕಪ್ ತೆಗೆಯಿರಿ
ಹಬ್ಬದ ಸಂಭ್ರಮ ಮುಗಿದ ನಂತರ ಮೇಕಪ್ ತೆಗೆಯಲು ಮರೆಯದಿರಿ. ರಾತ್ರಿ ಪೂರ್ತಿ ಮೇಕಪ್ ತೆಗೆಯದೇ ಹಾಗೆಯೇ ಮಲಗುವುದಿಂದ ತ್ವಚೆ ಬೇಗನೇ ಹಾಳಾಗುತ್ತದೆ. ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಮೇಕಪ್ ರಿಮೂವರ್ ಬಳಸಿ ಹಾಗೂ ಕ್ಲೆನ್ಸರ್ ಬಳಸಿ.
ಸೋಂಪು ತಿನ್ನಿ ಈ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಿರಿ!
ಒತ್ತಡ ನಿವಾರಿಸಿಕೊಳ್ಳಿ
ಎಷ್ಟೇ ಸೌಂದರ್ಯ ಪರಿಕರಗಳಿದ್ದರೂ ಒತ್ತಡದಿಂದ ಕೂಡಿದ್ದರೆ ಅದು ಸೌಂದರ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ನೀವು ಒತ್ತಡಕೊಳ್ಳಗಾಗಿದ್ದರೆ ಅದರ ಪ್ರಭಾವ ಮುಖದಲ್ಲಿ ಚೆನ್ನಾಗಿ ಕಂಡುಬರುತ್ತದೆ. ಹಾಗಾಗಿ ಒತ್ತಡ ನಿವಾರಣೆಗೆ ಧ್ಯಾನ, ಪ್ರಾಣಾಯಾಮ, ಯೋಗವನ್ನು ಅಭ್ಯಾಸ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ