ತುಮಕೂರು : ತಿಪಟೂರು ತಾಲೂಕಿನ ದಸರಿಘಟ್ಟ ಗ್ರಾಮದ ಚಿಕ್ಕೇಗೌಡ ಹಾಗೂ ತಾಯಿ ಅನುಸೂಯಮ್ಮ ಅವರ ಮಗನಾದ ಮನೋಜ್ ಎಂಬ ವ್ಯಕ್ತಿ ಅಪ್ಪ ಅಮ್ಮನ ಜೊತೆ ರಜೆ ಕಳೆಯಲು ಬಂದ ಮಗ ತಂದೆ ತಾಯಿ ಎದುರಲ್ಲೇ ನೀರಿನಲ್ಲಿ ಮುಳುಗಿ ಧಾರುಣ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದ್ದು,ಮನೋಜ್ ಎಂಬ ಇಂಜಿನಿಯರಿಂಗ್ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ ಗ್ರಾಮದಲ್ಲಿ ಶ್ಲೋಕ ಮಡುಗಟ್ಟಿದ್ದು ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ,,
ತಂದೆ ತಾಯಿ ಎದುರೇ ಪ್ರಾಣಬಿಟ್ಟ ಸಾಫ್ಟ್ವೇರ್ ಎಂಜಿನಿಯರ್ ಹಸುವಿನ ಮೈ ತೊಳೆಯಲು ಹೋಗಿದ್ದ (26 )ವರ್ಷದ ಮನೋಜ್, ಹಸು ಮೈಕಳೆಯುವ ಸಂದರ್ಭದಲ್ಲಿ ಅಚಾನಕವಾಗಿ ಕಾಲು ಜಾರಿ 40 ಅಡಿ ಆಳದ ಕೆರೆಗೆ ಬಿದ್ದಿದ್ದ ಎನ್ನಲಾಗಿದೆ, ಮಗ ಬಿದ್ದಿದ್ದನ್ನು ನೋಡಿ ಗಾಬರಿಯಿಂದ ಮಗನನ್ನು ಕಾಪಾಡುವ ಸಲುವಾಗಿ ಈಜು ಬಾರದೆ ಇದ್ದರೂ ಕೆರೆಗೆ ಹಾರಿದ ತಂದೆ ತಾಯಿ, ಎಂದು ತಿಳಿದು ಬಂದಿದೆ,,
ಈಜಲು ಬರದೇ ಇದ್ರೂ ಸಹ ನೀರಿಗೆ ಹಾರಿ ಮಗನ ಪ್ರಾಣವನ್ನು ಉಳಿಸಲು ಪ್ರಾಣ ಪಣಕ್ಕಿಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ, ತಂದೆ ತಾಯಿ ಇಬ್ಬರನ್ನು ನೀರಿಗೆ ಬಿದ್ದ ತಕ್ಷಣ ಅಲ್ಲಿನ ಗ್ರಾಮಸ್ಥರು ಅವರನ್ನು ಕಾಪಾಡಿದ್ದಾರೆ, ಮನೋಜ್ ಕಾಪಾಡಲು ತಂದೆ ತಾಯಿ ಯತ್ನಿಸಿದ್ದರು ಸಹ ಮನೋಜ್ ಸಿಕ್ಕಿರಲಿಲ್ಲ, ನಿನ್ನೆಯಿಂದ ಈವರೆಗೂ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಯವರು ಅರಸಹಸ ಪಡುತ್ತಿದ್ದಾರೆ, ಆದರು ಸಹ ಇನ್ನೂ ಮೃತ ದೇಹ ಪತ್ತೆಯಾಗಿಲ್ಲ ಎನ್ನಲಾಗಿದೆ,,
ಸಂಜೆಯ ವೇಳೆಗೆ ಮಲ್ಪೆಯಿಂದ ಈಜು ತಜ್ಞರು ಈಶ್ವರ ಅವರು ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಂದೆ ತಾಯಿ ಕುಟುಂಬದವರು, ಪೊಲೀಸರ ಬಳಿ ನಿಂತು ಕಣ್ಣೀರಿಡುತ್ತಿರುವುದನ್ನು ನೋಡಿದ ಪೊಲೀಸ್ ಇಲಾಖೆಯವರು ಕುಟುಂಬದವರನ್ನು ಸಮಾಧಾನಪಡಿಸಿ ಧೈರ್ಯ ತುಂಬಿದ್ದಾರೆ,ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ ಎನ್ನಲಾಗಿದೆ,,
ವರದಿ : ನರಸಿಂಹರಾಜು

