ಬೆಂಗಳೂರು: ಜಾರಿಯಾದ ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ ಇನ್ನೂ ಕೆಲವು ಸರಿಯಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G. Parameshwar) ಹೇಳಿದ್ದಾರೆ.
ನಮ್ಮ ರಾಜ್ಯದಲ್ಲಿ ನಿನ್ನೆ ರಾತ್ರಿವರೆಗೂ ಸುಮಾರು 66 ಕೇಸ್ ಗಳು ಹೊಸ ಕೇಸ್ ಗಳು ದಾಖಲಾಗಿವೆ. ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 20 ಕೇಸ್ ಗಳು ದಾಖಲಾಗಿವೆ. ಹೊಸ ಕಾನೂನುಗಳಲ್ಲಿ ಕೆಲವು ಉತ್ತಮವಾಗಿವೆ, ಕೆಲವು ಸರಿಯಾಗಿಲ್ಲ. ಹಿಂದೆ ಕೆಲವು ಸಂದರ್ಭಗಳಲ್ಲಿ ಕೇಸ್‌ಗಳನ್ನು ದಾಖಲು ಮಾಡುವಂಥದ್ದಿತ್ತು.

ಈಗ ಹೊಸ ಕಾನೂನುಗಳಲ್ಲಿ ಅವುಗಳನ್ನು ದಾಖಲು ಮಾಡುವ ಹಾಗಿಲ್ಲ. ಹೀಗೆ ಕೆಲವು ಗೊಂದಲಗಳಿವೆ. ಈ ಹೊಸ ಕಾನೂನುಗಳು ಇಡೀ ದೇಶಕ್ಕೆ ಸಂಬಂಧ ಪಟ್ಟಿವೆ. ಲಕ್ಷಾಂತರ ಕೇಸ್ ಗಳು ಹೊಸ ಕಾನೂನಿನಡಿ ದಾಖಲಾಗುತ್ತವೆ. ಆದರೆ ಈ ಹೊಸ ಕಾನೂನುಗಳ ಬಗ್ಗೆ ಚರ್ಚೆ ಆಗಬೇಕಿದೆ. ಕೆಲವು ಉತ್ತಮವಾದ ಅಂಶಗಳಿವೆ, ಎಲ್ಲವನ್ನೂ ತೆಗೆದು ಹಾಕಲು ಆಗಲ್ಲ. ಆದರೆ ಕೆಲವೊಂದು ಅಂಶಗಳಲ್ಲಿ ಕಾನೂನಿನ ಬಳಕೆ ಅವಕಾಶ ಸರಿಯಿಲ್ಲ. ಈಗಲೇ ಅವುಗಳ ಬಗ್ಗೆ ಹೇಳಲು ಹೋಗಲ್ಲ. ನಾನು ಕೆಲವು ಕೇಸ್ ಗಳಲ್ಲಿ ದೂರು ದಾಖಲು ಮಾಡುವ ಅವಕಾಶ ಇಲ್ಲ. ಅಂಥದ್ದರ ಬಗ್ಗೆ ಚರ್ಚಿಸಿ ಕೇಂದ್ರದ ಗಮನಕ್ಕೆ ತರ್ತೇವೆ ಎಂದರು. ಇದನ್ನೂ ಓದಿ: ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ದರ್ಶನ್ ಅಭಿಮಾನಿ…!
ರಾಹುಲ್ ಗಾಂಧಿ ವಿವಾದಾತ್ಮಕ ಭಾಷಣ, ಬಿಜೆಪಿ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡ್ಕೊಂಡಿಲ್ಲ ಅಂತ ಸ್ಪಷ್ಟ ಆಯ್ತು. ಎಲ್ಲಿಯವರೆಗೆ ಬಿಜೆಪಿಯವರು ರಾಹುಲ್ ಅಚರ ಮಾತು, ಮನಸು ಅರ್ಥ ಮಾಡ್ಕೊಳ್ಳಲ್ವೋ ಅಲ್ಲೀವರೆಗೂ ಗೊಂದಲ ಇರುತ್ತೆ. ರಾಹುಲ್ ಗಾಂಧಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲರನ್ನೂ, ಎಲ್ಲ ವರ್ಗದವರನ್ನೂ ಸಮಾನವಾಗಿ ಕರೆದೊಯ್ಯಬೇಕು ಅನ್ನೋದು ಹಿಂದೂ ಧರ್ಮದ ಸಾರಾಂಶ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದೂಗಳಲ್ಲ ಅನ್ನೋದನ್ನು ಹೇಳಿದ್ದಾರೆ. ಇದು ಯಾರಿಗೆ ಅನ್ವಯ ಆಗಬೇಕೋ ಅವರಿಗೆ ಅನ್ವಯ ಆಗುತ್ತೆ. ಬಿಜೆಪಿಯವರಿಗೆ ಅನ್ವಯ ಆಗೋದಾದರೆ ಅವರಿಗೂ ಆಗುತ್ತೆ. ಆ ಅರ್ಥದಲ್ಲಿ ರಾಹುಲ್ ಗಾಂಧಿ ಮಾತಾಡಿದ್ದಾರೆ ಎಂದು ಹೇಳಿದರು.
ಸಿಎಂ, ಡಿಸಿಎಂ ಕುರಿತು ಚರ್ಚೆ ಮಾಡುವವರಿಗೆ ಡಿಕೆಶಿ ವಾರ್ನಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಕೆಪಿಸಿಸಿ ಅಧ್ಯಕ್ಷರಿಗೆ ಸಂಬಂಧಿಸಿದ ವಿಚಾರ. ನೊಟೀಸ್ ಕೊಡೋದು ಅಧ್ಯಕ್ಷರು ಮಾಡುವ ಕೆಲಸ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿ ಅಂತ ಅಧ್ಯಕ್ಷರು ಯಾರಿಗೇ ಆದರೂ ಹೇಳಬೇಕಾಗುತ್ತದೆ. ಈಗಲೂ ಅದೇ ರೀತಿ ಅದ್ಯಕ್ಷರು ಹೇಳಿದ್ದಾರೆ ಅನ್ಸತ್ತೆ. ಅಧ್ಯಕ್ಷರು ಏನೇ ತೀರ್ಮಾನ ತಗೊಂಡ್ರೂ, ಏನೇ ಹೇಳಿದರೂ ಕೇಳ್ತೇವೆ. ಯಾರಿಂದ ಯಾವ ಶಿಸ್ತು ಉಲ್ಲಂಘನೆ ಆಗಿದೆ ಅಂತ ಆ ವ್ಯಕ್ತಿಯನ್ನು ಕರೆದು ಸ್ಪಷ್ಟವಾಗಿ ಹೇಳಬೇಕು. ಆನಂತರ ಮುಂದಿನ ಬೆಳವಣಿಗೆ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ: ಕರಾವಳಿ, ಮಧ್ಯ ಕರ್ನಾಟಕ: ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಮುಡಾದಲ್ಲಿ ಗೋಲ್ ಮಾಲ್ ವಿಚಾರ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ವರ್ಗಾವಣೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರನ್ನು ಅಲ್ಲಿಂದ ಸ್ಥಳಾಂತರ ಮಾಡಿದ್ದು, ಅಲ್ಲೇ ಇದ್ದರೆ ಸಾಕ್ಷ್ಯ ನಾಶ ಆಗಬಹುದು ಎಂದು. ಮುಂದೆ ಯಾವ ತನಿಖೆ ನಡೆಸಬೇಕು ಅಂತ ತೀರ್ಮಾನ ಆಗುತ್ತದೆ. ಪ್ರಕರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರ ಇದೆ ಎಂಬ ಆರೋಪ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರು ಹೇಳಿದ್ದನ್ನು ಒಪ್ಪಿಕೊಳ್ಳಲು ಆಗಲ್ಲ. ಮುಂದೆ ತನಿಖೆ ಆಗುತ್ತೆ, ಅದರಿಂದ ಗೊತ್ತಾಗುತ್ತೆ ಎಂದು ತಿಳಿಸಿದರು.

ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಕೊಡ್ತಿರುವ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ದರ್ಶನ್ ಗೆ ಜೈಲಿನಲ್ಲಿ ಯಾವುದೇ ವಿಶೇಷ ಸತ್ಕಾರ ಕೊಡ್ತಿಲ್ಲ. ಇದರ ಬಗ್ಗೆ ಆವತ್ತೇ ಹೇಳಿದೀನಿ ನಾನು. ಬಿರಿಯಾನಿ ಅವೆಲ್ಲ ಏನೂ ಕೊಡ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡ್ತಿಲ್ಲ. ಬೇಕಾದರೆ ಬನ್ನಿ ನನ್ನ ಜತೆ, ಕರೆದುಕೊಂಡು ಹೋಗಿ ತೋರಿಸ್ತೇನೆ ಎಂದು ಸ್ಪಷ್ಟನೇ ನೀಡಿದರು. ಇದನ್ನೂ ಓದಿ: ಸಿಎಂ-ಡಿಸಿಎಂ ಗದ್ದುಗೆಗಾಗಿ ಗುದ್ದಾಟ – ಹೈಕಮಾಂಡ್ ಗೆ ಡಿಕೆಶಿ ಮನವಿ ಸಲ್ಲಿಕೆ