ಬೆಂಗಳೂರು : 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.ಬೆಳಗ್ಗೆ 11.45ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು, ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಫಲಿತಾಂಶ ಪರಿಶೀಲಿಸಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾ.21 ರಿಂದ ಏ.4 ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿತ್ತು. ರಾಜ್ಯದಲ್ಲಿ ಒಟ್ಟು 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಈ ಬಾರಿ ಒಟ್ಟು 66.14% ನಷ್ಟು ಫಲಿತಾಂಶ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದರೆ ಉಡುಪಿ ದ್ವಿತೀಯ ಸ್ಥಾನ ಮತ್ತು ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದುಕೊಂಡಿದೆ.ಈ ಬಾರಿಯೂ ಹೆಣ್ಣುಮಕ್ಕಳದ್ದೇ ಮೇಲುಗೈ ಸಾಧಿಸಿದ್ದು ಹೆಣ್ಣುಮಕ್ಕಳು-74.00% ಮತ್ತು ಗಂಡು ಮಕ್ಕಳು- -58.07% ತೇರ್ಗಡೆಯಾಗಿದ್ದಾರೆ.
ಟಾಪ್ 5 ವಿದ್ಯಾರ್ಥಿಗಳು :
ಅಖಿಲ್ ಅಹಮ್ಮದ್ ನದಾಫ್ – ವಿಜಯಪುರ – ಆಕ್ಸ್ ಫರ್ಡ್ ಹೈ ಸ್ಕೂಲ್ ನಗರಬೆಟ್ಟ, ಮುದ್ದೇಬಿಹಾಳ – 625
ಸಿ ಭಾವನ – ಬೆಂಗಳೂರು ಗ್ರಾಮಾಂತರ – ನೀಲಗಿರಿಶ್ವೇರ ವಿದ್ಯಾನಿಕೇತನ ಸ್ಕೂಲ್ ದೇವನಹಳ್ಳಿ – 626
ಧನಲಕ್ಷ್ಮಿ – ಬೆಂಗಳೂರು ಉತ್ತರ – ಸೈಂಟ್ ಯಾಶ್ ಪಬ್ಲಿಕ್ ಸ್ಕೂಲ್ ಕೆಂಪೇಗೌಡ ನಗರ ಮಾಗಡಿ ರಸ್ತೆ – 625
ಧನುಷ್ – ಮೈಸೂರು – ಮರಿಮಲ್ಲಪ್ಪ ಹೈ ಸ್ಕೂಲ್ ಮೈಸೂರು – 625
ಧೃತಿ ಜೆ – ಮಂಡ್ಯ – ಸಾಹುಕಾರ ಎಸ್ ಕೆ ಚಿಕ್ಕಣ್ಣಗೌಡ ಇಂಗ್ಲಿಷ್ ಹೈ ಸ್ಕೂಲ್ ಕೆಆರ್ ಪೇಟೆ – 625
22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ : 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು :
2024-25ನೇ ಸಾಲಿನ ಪರೀಕ್ಷೆಗೆ ಶಾಲಾ ವಿದ್ಯಾರ್ಥಿಗಳು(ಫ್ರೆಶರ್) 7.90 ಲಕ್ಷ ಮಂದಿ ಹಾಜರಾಗಿದ್ದರು. ಅವರಲ್ಲಿ 5.23 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.66.14ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಅಭ್ಯರ್ಥಿಗಳಲ್ಲಿ ಶೇ.8.15. ಪುನಾವರ್ತಿತ ಶಾಲಾ ಅಭ್ಯರ್ಥಿಗಳಲ್ಲಿ ಶೇ. 1.85 ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು ಶೇ.5ರಷ್ಟು, ಒಟ್ಟಾರೆ 8,42,173 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5.24,984 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.62.34ರಷ್ಟು ಫಲಿತಾಂಶ ಬಂದಿದೆ.
ಹೆಣ್ಣು ಮಕ್ಕಳು ಮೇಲುಗೈ :
ಎಂದಿನಂತೆ ಈ ಬಾರಿಯೂ ಹೆಣ್ಣು ಮಕ್ಕಳು ಹಾಗೂ ನಗರದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ನಾಲ್ಕು ಲಕ್ಷ 5 79 ಹೆಣ್ಣುಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 2,96,438 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.74ರಷ್ಟು ಫಲಿತಾಂಶ ಬಂದಿದೆ. 3,90,311 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದು, 2,26,637 ಮಂದಿ ಪಾಸಾಗಿ ಶೇ.58.07ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಗರದ ಪ್ರದೇಶದಲ್ಲಿ 3,35,446 ವಿದ್ಯಾರ್ಥಿಗಳು ಪರೀಕ್ಷೆ ಬರೆದು 2,24,900 ಮಂದಿ ಪಾಸಾಗಿ ಶೇ.67.05 ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದಲ್ಲಿ 4,55,444 ಮಂದಿ ಪರೀಕ್ಷೆಗೆ ಹಾಜರಾಗಿ ಮಂದಿ ಉತ್ತೀರ್ಣರಾಗಿದ್ದಾರೆ. ಶೇ.65.47ರಷ್ಟು ಫಲಿತಾಂಶ ಬಂದಿದೆ.
ಮುಂಚೂಣಿಯಲ್ಲಿ ಅನುದಾನ ರಹಿತ ಶಾಲೆಗಳು
2,98,175 ಅನುದಾನ ರಹಿತ ಶಾಲಾ ಕಾಲೇಜುಗಳ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ಶೇ.62.07, ಅನುದಾನಿತ ಶಾಲೆಗಳಲ್ಲಿ ಶೇ.58.97, ಅನುದಾನ ರಹಿತ ಶಾಲೆಗಳಲ್ಲಿ ಶೇ.75.59ರಷ್ಟು ಫಲಿತಾಂಶ ಬಂದಿದೆ. ಆರು ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ವರದಿಯಾಗಿದ್ದು, ಅನುದಾನಿತ 30, ಅನುದಾನ ರಹಿತ 108 ಶಾಲೆಗಳನ್ನು ಒಳಗೊಂಡಂತೆ 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ವರದಿಯಾಗಿದೆ.
ಸಾಮಾಜಿಕ ಗುಂಪುವಾರು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.78.78ರಷ್ಟು, 3ಎ ವಿದ್ಯಾರ್ಥಿಗಳು ಶೇ.78.97, 3ಬಿ ವಿದ್ಯಾರ್ಥಿಗಳು ಶೇ.73.39. ಪ್ರವರ್ಗ 1ರಲ್ಲಿ ಶೇ.63.1ರಷ್ಟು, 2ಎನಲ್ಲಿ ಶೇ.70.86. ಎಸ್ಸಿಗಳಲ್ಲಿ ಶೇ.59.11, ಎಸ್ಟಿ ಶೇ.58.4ರಷ್ಟು, 2ಬಿನಲ್ಲಿ ಶೇ.57.27ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಎಷ್ಟು?
625 ಅಂಕಗಳನ್ನು ಪಡೆದ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿಗಳು – 22
624 ಅಂಕಗಳನ್ನು ಪಡೆದ ಸೆಕೆಂಡ್ ರ‍್ಯಾಂಕ್ ವಿದ್ಯಾರ್ಥಿಗಳು – 65
623 ಅಂಕಗಳನ್ನು ಪಡೆದ ಮೂರನೇ ರ‍್ಯಾಂಕ್ ವಿದ್ಯಾರ್ಥಿಗಳು – 108
622 ಅಂಕಗಳನ್ನು ಪಡೆದ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿಗಳು – 189
621 ಅಂಕಗಳನ್ನು ಪಡೆದ ಐದನೇ ಸ್ಥಾನ ಪಡೆದ ವಿದ್ಯಾರ್ಥಿಗಳು – 289



