ಮೈಸೂರು : ಅಂಬೇಡ್ಕರ್ ಅವರ ವಿರುದ್ಧ ಹೇಳಿಕೆ ನೀಡಿದ ಹಿನ್ನಲೆ ಮೈಸೂರು ವಕೀಲ ಸಂಘ ಬೆಂಬಲ ನೀಡಿ ಮೈಸೂರು ಟೌನ್ ಹಾಲ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಆಮಿತ್ ಶಾ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಅಮಿತ್ ಷ ಅವರಿಗೆ ಅಂಬೇಡ್ಕರ್ ಅವ್ರು ಗೊತ್ತಿಲ್ಲ , ಸಂವಿಧಾನ ಗೊತ್ತಿಲ್ಲ ದೇಶದ ಕಾನೂನು ಗೊತ್ತಿಲ್ಲ ಅಂತಹ ವ್ಯಕ್ತಿ ದೇಶದಲ್ಲಿ ಯಾವ ರೀತಿಯ ಆಡಳಿತ ನಡೆಸುತ್ತಿದ್ದಾರೆ ಅನ್ನೋದನ್ನು ನಾವು ಯೋಚನೆ ಮಾಡಬೇಕಾಗುತ್ತದೆ. ಗೃಹ ಸಚಿವ ಅನ್ನೋದು ಅತ್ಯಂತ ಮಹತ್ವದ ಖಾತೆ ಜನಗಳನ್ನು ರಕ್ಷಣೆ ಮಾಡುವಂತ ದು ಹಾಗೇನೇ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವ ಅಂತದು ಗೃಹ ಸಚಿವರ ಕರ್ತವ್ಯ. ಅಂತದರಲ್ಲಿ ಅವರೇ ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದರು.