ಕುಣಿಗಲ್ : ಪಟ್ಟಣದ ನಕ್ಷತ್ರ ಪ್ಯಾಲೇಸ್ ನಲ್ಲಿ 2024 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 85ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಅಹಿಂದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದರ ಮೂಲಕ ಕಾರ್ಯಕ್ರಮ ನೆರವೇರಿಸಿದರು.
ಈ ಕಾರ್ಯಕ್ರಮದ ಬಗ್ಗೆ ಅಹಿಂದ ವರ್ಗಗಳ ಒಕ್ಕೂಟದ ತಾಲೂಕು ಅಧ್ಯಕ್ಷರಾದ ರಂಗಸ್ವಾಮಿ ಮಾತನಾಡಿ ಈ ತಾಲೂಕಿನಲ್ಲಿ ತಳ ಸಮುದಾಯದ ಮಕ್ಕಳಿಗೆ ನಮ್ಮ ಒಕ್ಕೂಟ 85%, 95% ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ಮಾಡಬೇಕು ಎಂಬ ನಿಟ್ಟಿನಲ್ಲಿ ಸರ್ವ ಸದಸ್ಯರ ಸಮ್ಮತದಿಂದ ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ, ಮುಂದಿನ ದಿನಗಳಲ್ಲಿ ಸ್ಥಳ ಸಮುದಾಯದವರಿಗೆ ಎಲ್ಲಿಯೂ ಸಹ ನ್ಯಾಯ ದೊರಕುತ್ತಿಲ್ಲ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ನಮ್ಮ ಒಕ್ಕೂಟ ನ್ಯಾಯ ಕೊಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ, ಎಂದು ಮಾತನಾಡಿದರು,
ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಜಯದೇವ ಹೃದ್ರೋಗ ತಜ್ಞರಾದ ನಟರಾಜ್ ಶೆಟ್ಟಿ ಅವರು ಆಗಮಿಸಿದ್ದು ತಂದೆ-ತಾಯಿಯ ಹೃದಯ ಸದಾ ತಮ್ಮ ಮಕ್ಕಳಿಗೋಸ್ಕರ ಮಿಡಿಯಬೇಕು, ಉತ್ತಮವಾದ ವಿದ್ಯಾಭ್ಯಾಸವನ್ನು ಕೊಡಿಸಿ ಸಮಾಜಕ್ಕೆ ಮಾದರಿಯಾಗುವಂತೆ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುವಂಥರಾಗಬೇಕು, ಮಕ್ಕಳ ವಿದ್ಯಾಭ್ಯಾಸ ಈಗಿನ ಕಾಲಕ್ಕೆ ಅತಿ ಪ್ರಾಮುಖ್ಯತೆಯಾಗಿದೆ,
ನಾವುಗಳು ಸಹ ವಿದ್ಯಾಭ್ಯಾಸಕ್ಕೆ ಪರದಾಡುವ ಪರಿಸ್ಥಿತಿ ಇತ್ತು ಸ್ಲೇಟ್ ಬಳಪದಲ್ಲಿ ವಿದ್ಯಾಭ್ಯಾಸ ಕಲಿತು ಇಂದು ಒಬ್ಬ ಉತ್ತಮ ವೈದ್ಯನಾಗಿ ಉಳಿದುಕೊಳ್ಳುತ್ತೇನೆ, ಆದ್ದರಿಂದ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು, ಇಲ್ಲಿ ಯಾರು ಮೇಲು ಕೇಳಲ್ಲ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಇಟ್ಟುಕೊಂಡು ಈ ಸಮಾಜದಲ್ಲಿ ಉತ್ತಮ ಸಮಾಜಸೇವೆಯಲ್ಲಿ ಸದಾ ತೊಡಗಬೇಕು ಎಂದು ಮಾತನಾಡಿದರು, ಪ್ರತಿಯೊಬ್ಬ ನಾಗರಿಕರಿಗೂ ಯಾವುದೇ ಆರೋಗ್ಯದ ಸಮಸ್ಯೆ ಇದ್ದರೆ ನನಗೆ ವೈಯಕ್ತಿಕವಾಗಿ ಫೋನ್ ಮಾಡಿ ತಿಳಿಸಿ ನಾನು ನಿಮ್ಮ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸುತ್ತೇನೆ,ಕರ್ತವ್ಯವೇ ನನ್ನ ಗುರಿ ಎಂದು ತಿಳಿಸಿದರು,,
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜನಪ್ರಿಯ ಶಾಸಕರಾದ ಹೆಚ್ ಡಿ ರಂಗನಾಥ್ ಅವರು ವಿದ್ಯೆ ಯೇ ಪ್ರಮುಖ ಬಾಗಿಲು ಮಕ್ಕಳಿಗೆ,ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ವಿದ್ಯಾಭ್ಯಾಸ ಎಂಬ ಹೋರಾಟದಲ್ಲಿ ತೊಡಗಬೇಕು, ವಿದ್ಯಾರ್ಥಿಗಳ ಅಸಂ ಮುಖ ಹಾಗೂ ನಗುಮುಖ ನೋಡುವುದಕ್ಕೆ ನನಗೆ ಶಾಸಕನಾಗಿ ಬಹಳ ಹೆಮ್ಮೆ ಎನಿಸುತ್ತದೆ, ವಿದ್ಯಾರ್ಥಿಗಳಿಗೆ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಕೈಗೆಟಕುವ ರೀತಿಯಲ್ಲಿ ನನ್ನ ಕೈಲಾದ ಸಹಾಯ ಮಾಡುತ್ತೇನೆ, ಜಾತಿಯತೆಯನ್ನು ಮರೆತು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಇಡೀ ತಾಲೂಕಿಗೆ ಸಂತಸ ತಂದಿದೆ, ನಮ್ಮ ತಾಲೂಕಿನ ಮಕ್ಕಳು ಇನ್ನೂ ಹೆಚ್ಚಿನ ಅಂಕಗಳನ್ನು ಪಡೆದು ತಂದೆ ತಾಯಿಗೆ ಹೆಚ್ಚಿನ ಗೌರವವನ್ನು ಕೊಡುವುದರ ಮೂಲಕ ಅವರಿಗೆ ಉತ್ತಮ ಮಕ್ಕಳಾಗಿ, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮಾತನಾಡಿದರು,,
ನಮ್ಮ ಸಂಘಟನಾ ಅಧ್ಯಕ್ಷರಾದ ಸ್ವಾಮಿಯವರ ನಿರ್ಧಾರದ ಮೇರೆಗೆ ನಾವುಗಳು ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಬಹಳ ವಿಶೇಷವಾಗಿದೆ, ಬೇರೆ ಬೇರೆ ಸಮುದಾಯಗಳಲ್ಲಿ ಆಯಾ ಸಮುದಾಯಗಳನ್ನು ಮಾತ್ರ ಗುರುತಿಸುತ್ತಾರೆ, ಆದರೆ ಅಹಿಂದ ವರ್ಗಗಳ ಒಕ್ಕೂಟದ ಸಂಘಟನೆಯು ಜಾತೀಯತೆಯನ್ನು ಸಹ ಮರೆತು ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ತಳ ಸಮುದಾಯದವರನ್ನು ಸಹ ಒಗ್ಗೂಡಿಸಬೇಕೆಂದು, ಆ ಪ್ರತಿಭೆಗಳಿಗೆ ಉತ್ತಮ ಬೆಲೆ ಸಿಗಬೇಕು, ಎಂಬುದು ನಮ್ಮೆಲ್ಲರ ಆಶಯ ಎಂದು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಎಸ್ ಆರ್ ಚಿಕ್ಕಣ್ಣನವರು ಮಾತನಾಡಿದರು,
ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳ ತಂದೆ ತಾಯಂದಿರು ಆಗಮಿಸಿದ್ದು ಅವರ ಮುಖದಲ್ಲಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಂದಹಾಸ ತುಂಬಿತ್ತು, ಹಲವು ವಿದ್ಯಾರ್ಥಿಗಳ ಪೋಷಕರು ಕಣ್ಣೀರಿಟ್ಟು ನಮ್ಮ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಡಿಸುವುದು ನಮ್ಮೆಲ್ಲರ ಕರ್ತವ್ಯ ಇಂದು ನಮ್ಮ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಎಲ್ಲಿಲ್ಲದ ಖುಷಿ ತಂದಿದೆ ಅವರಿಗೆ ತುಂಬು ಹೃದಯದ ಅಭಿನಂದನೆಯನ್ನು ಸಲ್ಲಿಸಿತ್ತೇನೆ ಎಂದು ತಿಳಿಸಿದರು,,
ಇನ್ನು ಈ ಕಾರ್ಯಕ್ರಮದಲ್ಲಿ ಜಯದೇವ ಆಸ್ಪತ್ರೆ ಹೃದ್ರೋಗ ತಜ್ಞರು ನಟರಾಜ್ ಶೆಟ್ಟಿ, ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ, ಶಾಸಕ ಎಚ್ ಡಿ ರಂಗನಾಥ್, ಗೌರವಾಧ್ಯಕ್ಷರು ಅಹಿಂದ ವರ್ಗಗಳ ಒಕ್ಕೂಟ ವೈ ಹೆಚ್ ಹುಚ್ಚಯ್ಯ, ಅಧ್ಯಕ್ಷರಾದ ರಂಗಸ್ವಾಮಿ,ತೆರಿಗೆದಾರರ ಸಂಘ ರಾಜ್ಯಾಧ್ಯಕ್ಷರು ನಂಜುಂಡ ಪ್ರಸಾದ್, ಎಸ್ ಆರ್ ಚಿಕ್ಕಣ್ಣ, ದಲಿತ್ ನಾರಾಯಣ್, ಆರ್ ಎನ್ ಹಟ್ಟಿ ರಂಗಯ್ಯ, ರೆಹಮಾನ್ ಶರೀಫ್, ನಗುತಾ ರಂಗನಾಥ್, ಕೆ ವಿ ನಾರಾಯಣ್, ರತ್ನಮ್ಮ, ಶೆಟ್ಟಿಗೆಹಳ್ಳಿ ಸಿದ್ದರಾಜು, ಹಾಗೂ ಕುಣಿಗಲ್ ತಾಲೂಕಿನ ಹಿಂದ ಒಕ್ಕೂಟದ ಎಲ್ಲಾ ಮುಖಂಡರು, ಸೇರಿದಂತೆ ಎಲ್ಲಾ ಸಮುದಾಯದ ನಾಗರಿಕರು ಕಾರ್ಯಕ್ರಮದಲ್ಲಿ ಹಾಜರಿದ್ದರು,,
ವರದಿ : ನರಸಿಂಹರಾಜು

