ಆರ್ಮುಗ ರವಿಶಂಕರ್ ಅವರ ಮಗ ಅದ್ವೈ ‘ಸುಬ್ರಹ್ಮಣ್ಯ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈ ಚಿತ್ರದ ಪ್ರೀ-ಲುಕ್ ಈಗಾಗಲೇ ಗಮನ ಸೆಳೆದಿದ್ದು, ಇದೀಗ ಚಿತ್ರತಂಡ ‘ಸುಬ್ರಹ್ಮಣ್ಯ’ನ ಫಸ್ಟ್ ಗ್ಲಿಂಪ್ಸ್ ನ್ನು ಅನಾವರಣ ಮಾಡಿದೆ. ಯೂಟ್ಯೂಬ್ ನಲ್ಲಿ ಬಿಡುಗಡೆಗೂ ಮೊದಲೇ ದುಬೈನಲ್ಲಿ ನಡೆದ ಸೈಮಾದಲ್ಲಿ ‘ಸುಬ್ರಹ್ಮಣ್ಯ’ನ ಮೊದಲ ತುಣುಕನ್ನು ರಿಲೀಸ್ ಮಾಡಲಾಯಿತು.
ಇಂದು ಎಸ್ ಜಿ ಮೂವೀಸ್ ಯೂಟ್ಯೂಬ್ ನಲ್ಲಿ ಸುಬ್ರಹ್ಮಣ ಗ್ಲಿಂಪ್ಸ್ ಬಿಡುಗಡೆಯಾಗಿದೆ. 3 ನಿಮಿಷ 14 ಸೆಕೆಂಡ್ ಇರುವ ಝಲಕ್ ಮೈನವಿರೇಳಿಸುವಂತಿದೆ. ಸುಬ್ರಹ್ಮಣ ಗ್ಲಿಂಪ್ಸ್ ಅರವತ್ತಕ್ಕೂ ಹೆಚ್ಚು VFX ತಂತ್ರಜ್ಞನರು ಕಳೆದ ನಾಲ್ಕು ತಿಂಗಳಿನಿಂದ ದುಡಿದಿದ್ದಾರೆ. ‘ಸುಬ್ರಹ್ಮಣ್ಯ’ದ ಕ್ರಿಯೇಟಿವ್ ನಿರ್ಮಾಪಕ ಮತ್ತು ವಿಎಫ್‌ಎಕ್ಸ್ ಮೇಲ್ವಿಚಾರಕ ನಿಖಿಲ್ ಕೋಡೂರು ನೇತೃತ್ವದಲ್ಲಿ, ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಪ್ರಸಿದ್ಧ ಸ್ಟುಡಿಯೋಗಳಲ್ಲಿ VFX ಕೆಲಸ ನಡೆದಿದೆ. ‘ಸುಬ್ರಹ್ಮಣ್ಯ’ ಸಿನಿಮಾ ಸೋಶಿಯೋ-ಫ್ಯಾಂಟಸಿ ಶೈಲಿಯ ಸಿನಿಮಾ ಆಗಿದೆ. ಜೊತೆ ಅಡ್ವೆಂಚರ್ ಎಲಿಮೆಂಟ್ಸ್ ಕೂಡ ಈ ಸಿನಿಮಾದಲ್ಲಿದೆ.
‘ಎಸ್.ಜಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ‘ಕೆಜಿಎಫ್’ ಹಾಗೂ ‘ಸಲಾರ್’ ಸಿನಿಮಾಗೆ ಸಂಗೀತ ನೀಡಿರುವ ರವಿ ಬಸ್ರೂರು ಈ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆ.
ವಿಘ್ನೇಶ್ ರಾಜ್ ಕ್ಯಾಮರಾ ವರ್ಕ್ ಇದ್ದರೆ, ವಿಜಯ್ ಎಂ. ಕುಮಾರ್ ಎಡಿಟಿಂಗ್ ಮಾಡುತ್ತಿದ್ದಾರೆ. ಮಗನಿಗಾಗಿ ಎರಡು ದಶಕಗಳ ಬಳಿಕ ಡೈರೆಕ್ಟರ್ಕ್ಯಾಪ್ಧರಿಸಿರೋ ರವಿಶಂಕರ್ ಚಿತ್ರರಂಗಕ್ಕೆ ಹೀರೋ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಕೊಡುತ್ತಿದ್ದಾರೆ.

