ಉಪೇಂದ್ರ ಅವರ ಬಹುನಿರೀಕ್ಷೆಯ ‘ಯುಐ’ ಸಿನಿಮಾದ ರಿಲೀಸ್ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಈಗ ವಾರ್ನರ್ ಹೆಸರಲ್ಲಿ ಟ್ರೈಲರ್ ಕೂಡ ಬಿಡುಗಡೆ ಮಾಡಿದೆ. ಸಿನಿಮಾದ ಝಲಕ್ ತೋರಿಸಲಾಗಿದೆ.
ವಿಶ್ವದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಸಮಸ್ಯೆಗಳ ಪೈಕಿ ಕೆಲವು ಪ್ರಮುಖ ವಿಚಾರಗಳನ್ನು ‘ಯುಐ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಈ ಪೈಕಿ, ಜಾಗತಿಕ ತಾಪಮಾನ ಏರಿಕೆ, ಕೊವಿಡ್ 19, ಹಣದುಬ್ಬರ, ಎಐ, ನಿರುದ್ಯೋಗ ಹಾಗೂ ಯುದ್ಧಗಳ ಬಗ್ಗೆ ಸಿನಿಮಾದಲ್ಲಿ ಹೇಳುವ ಕೆಲಸ ಆಗಲಿದೆ. ಈಗ ರಿಲೀಸ್ ಆಗಿರುವ ವಿಡಿಯೋದಲ್ಲಿ ಈ ಸಿನಿಮಾದ ಕಥೆ 2040ರಲ್ಲಿ ಆರಂಭ ಆಗುವ ರೀತಿಯಲ್ಲಿ ತೋರಿಸಲಾಗಿದೆ.
ಈ ಟ್ರೈಲರ್ ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ನಟ ಉಪೇಂದ್ರ ಅವರು 2040 ರಲ್ಲಿ ಭಾರತ ಸೇರಿದಂತೆ ವಿಶ್ವ ಹೇಗಿರಲಿದೆ? ಎಂಬುದನ್ನು ಕಟ್ಟಿಕೊಟ್ಟಿದ್ದಾರೆ.
ಯುಐ’ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ ಎಂದು ತಂಡ ಹೇಳಿತ್ತು. ಆದರೆ, ಅದಾದ ಕೆಲವೇ ದಿನಕ್ಕೆ ‘ಮ್ಯಾಕ್ಸ್’ ಸಿನಿಮಾ ಬರುತ್ತಿರುವುದರಿಂದ ಈ ಚಿತ್ರದ ರಿಲೀಸ್ ವಿಳಂಬ ಆಗಲಿದೆಯೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಆದರೆ, ಹಾಗಾಗುತ್ತಿಲ್ಲ. ‘ಯುಐ’ ಅಂದುಕೊಂಡಂತೆ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ.
‘ಯುಐ’ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ರೀಶ್ಮಾ ನಾಣಯ್ಯ, ಇಂದ್ರಜಿತ್ ಲಂಕೇಶ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಜಿ.ಮನೋಹರನ್, ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.