ಇತ್ತೀಚೆಗಷ್ಟೇ ಬಿಡುಗಡೆಯಾಗು ಗಮನಸೆಳೆದಿದ್ದ ‘ಕಂಗುವ’ ಚಿತ್ರದ ಬೆನ್ನಲ್ಲೇ ನಟ ಸೂರ್ಯ ಅಭಿನಯದ ಮತ್ತೊಂದು ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ.
‘ಸೂರ್ಯ 44’ ಸಿನಿಮಾಗೆ ‘ರೆಟ್ರೋ’ ಎಂದು ಟೈಟಲ್ ಇಡಲಾಗಿದೆ. ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸೋ ಸೂರ್ಯ ಅದು ಹೇಗೆ ತಮ್ಮನ್ನು ತಾವು ಬದಲಾಗಿಸಿಕೊಳ್ತಾರೆ ಎಂಬುದನ್ನು ಟೀಸರ್‌ನಲ್ಲಿ ಸುಳಿವು ನೀಡಲಾಗಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿನ ಸೂರ್ಯ ಮತ್ತು ಪೂಜಾ ಕೆಮಿಸ್ಟ್ರಿ ವರ್ಕೌಟ್ ಆಗಿದೆ.
ಈ ಚಿತ್ರವು 2025ರಲ್ಲಿ ತೆರೆಗೆ ಬರಲಿದ್ದು, ಕಾರ್ತಿಕ್ ಸುಬ್ಬರಾಜ್ನಿ ರ್ದೇಶನ ಮಾಡಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಒಟ್ನಲ್ಲಿ ‘ರೆಟ್ರೋ’ ಮೂಲಕ ವಿಭಿನ್ನವಾಗಿರೋ ಕಥೆಯನ್ನೇ ಹೇಳಲು ಹೊರಟಿದ್ದಾರೆ.

