ಬೆಂಗಳೂರು : ವೆಸ್ಟ್ ಆಫ್ ಕಾರ್ಡ್ ರೋಡ್ ಶಿವನಹಳ್ಳಿ ಪ್ಲೈ ಓವರ್ ಮೇಲೆ ಟೆಂಪೋ ಪಲ್ಟಿಯಾಗಿದೆ. ಪ್ಲಾಸ್ಟಿಕ್ ಐಟೆಮ್ ತುಂಬಿಕೊಂಡು ಯಶವಂತಪುರದಿಂದ ಸಿಟಿ ಮಾರ್ಕೆಟ್ ಕಡೆ ತೆರಳುತ್ತಿದ್ದ ಟೆಂಫೋ ಟೈರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣ ಅಪಾಯ ಆಗಿಲ್ಲ, ಪ್ಲೈ ಓವರ್ ಮೇಲೆ ಕೊಂಚ ಮಟ್ಟಿಗೆ ಟ್ರಾಫಿಕ್ ಉಂಟಾಗಿತ್ತು. ಸ್ಥಳಕ್ಕೆ ಬಂದ ವಿಜಯ ನಗರ ಟ್ರಾಫಿಕ್ ಪೋಲಿಸ್ ಟ್ರಾಫಿಕ್ ಕ್ಲಿಯರ್ ಮಾಡಿ ತಾತ್ಕಾಲಿಕವಾಗಿ ಪ್ಲೈ ಓವರ್ ಬಂದ್ ಮಾಡಿದ್ದಾರೆ.
ಪಲ್ಟಿಯಾದ ಟಂಪೋದಲ್ಲಿ ಬ್ಯಾನ್ ಆದ ಪ್ಲಾಸ್ಟಿಕ್ ಕಳ್ಳ ಸಾಗಾಟ ಮಾಡುತ್ತಿದ್ದ ವಿಚಾರ ಬಯಲಾಗಿ. ಪಲ್ಟಿ ಹೊಡೆದ ಟೆಂಪೋದಲ್ಲಿ ಪ್ಲಾಸ್ಟಿಕ್ ಕವರ್ ಮೂಟೆ ಪತ್ತೆಯಾಗಿದ್ದು ಬಿಬಿಎಂಪಿ ಮಾರ್ಷಲ್ಗಳು ಪ್ಲಾಸ್ಟಿಕ್ ಕವರ್ ಮೂಟೆಗಳನ್ನ ವಶ ಪಡಿಸಿಕೊಳ್ಳಲು ಸ್ಥಳಕ್ಕೆ ಆಗಮಿಸಿದ್ದರು.

