ಲಕ್ನೋ: ದುಷ್ಕರ್ಮಿಗಳು ಒಂದೇ ಕುಟುಂಬದ ಮೂವರನ್ನ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಪುರದಲ್ಲಿ ನಡೆದಿದೆ.
ಖಿಲ್ವಾ ಗ್ರಾಮದ ನಿವಾಸಿ ಮುನ್ಶಿ ಬಿಂದ್ (45) ಮತ್ತು ಅವರ ಪತ್ನಿ ದೇವಂತಿ (40) ಮನೆಯ ಹೊರಗಡೆ ಮಲಗಿದ್ದರು. ಹಿರಿಯ ಮಗ ರಮಶಿಶ್ (20) ಮನೆಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಬಂದು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕಿರಿಯ ಮಗ ಆಶಿಶ್ ಗ್ರಾಮಕ್ಕೆ ಬಂದಿದ್ದ ಆರ್ಕೆಸ್ಟ್ರಾ ನೋಡಲು ಹೋಗಿದ್ದ. ರಾತ್ರಿ 2 ಗಂಟೆಗೆ ಆಶಿಶ್ ಮನೆಗೆ ಬಂದು ನೋಡಿದಾಗ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಗಾಬಾರಿಗೊಂಡಿದ್ದಾನೆ. ಇದನ್ನೂ ಓದಿ: ಉಕ್ರೇನ್ ಯುದ್ಧ ನಂತರ ಮೊದಲ ಬಾರಿಗೆ ಪುಟಿನ್ ಭೇಟಿ- ರಷ್ಯಾಗೆ ತೆರಳಿದ ಪ್ರಧಾನಿ
ಈ ವಿಷಯವನ್ನ ಸಹೋದರನಿಗೆ ತಿಳಿಸಲು ಹೋದಾಗ ಆತನೂ ಮೃತಪಟ್ಟಿರುವುದು ತಿಳಿದಿದೆ. ಆತ ಕಿರುಚಲು ಶುರು ಮಾಡಿದ್ದಾನೆ. ಕಿರುಚಾಟ ಕೇಳಿ ಅಕ್ಕಪಕ್ಕದ ಜನರು ಸ್ಥಳಕ್ಕೆ ಆಗಮಿಸಿ ರಕ್ತದಲ್ಲಿ ಮಡುವಿನಲ್ಲಿ ಬಿದಿದ್ದ ಶವಗಳನ್ನು ಕಂಡು ಜನರು ಬೆಚ್ಚಿಬಿದ್ದಾರೆ. ಇದನ್ನೂ ಓದಿ: ಚಿರತೆ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗೆ ಖಂಡ್ರೆ ಖಡಕ್ ಸೂಚನೆ
ಘಟನೆಯಿಂದ ಜನರು ಭಯ ಭೀತರಾಗಿದ್ದು, ಮನೆಯಿಂದ ಹೊರಗೆ ಕಾಲಿಡಲೂ ಹಿಂದೇಟು ಹಾಕುತ್ತಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

