ಮಾಸ್ಕೋ: ರಷ್ಯಾದಲ್ಲಿ ಚರ್ಚ್ಗಳು ಹಾಗೂ ಯಹೂದಿಗಳ ಪ್ರಾರ್ಥನಾ ಸ್ಥಳಗಳ ಮೇಲೆ ಉಗ್ರರ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸ್ ಪೋಸ್ಟ್ ಮೇಲೂ ಸಹ ದಾಳಿ ನಡೆಸಿದ್ದು, ಘಟನೆಯಲ್ಲಿ 15 ಮಂದಿ ಪೊಲೀಸರು ಸೇರಿ ಹಲವು ಮಂದಿ ಉಸಿರು ಚೆಲ್ಲಿದ್ದಾರೆ ಜೊತೆಗೆ 13 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಲೀಸ್ ಪೋಸ್ಟ್ ಮೇಲೂ ದಾಳಿ ನಡೆಸಿದ್ದು ಘಟನೆಯಲ್ಲಿ 15 ಮಂದಿ ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ.
ನಾಲ್ಕು ತಿಂಗಳ ಅವಧಿಯಲ್ಲಿ ರಷ್ಯಾದಲ್ಲಿ ಸಾರ್ವಜನಿಕ ಸ್ಥಳದ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಇದು ಉಗ್ರರ ದಾಳಿಯೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಡರ್ಬೆಂಟ್ ಎಂಬ ನಗರದಲ್ಲಿ ಈ ದಾಳಿಗಳು ನಡೆದಿವೆ ಎಂದು ಕಾಕಸಸ್ ಪ್ರದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಈ ನಗರದಲ್ಲಿ ಯಹೂದಿಗಳ ಪ್ರಾಚೀನ ವಸಾಹತು ಇದೆ ಮತ್ತು ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: ಸೂರಜ್ ವಿರುದ್ಧ ದೂರು ನೀಡಿದ್ದ ದೂರುದಾರ ನಾಪತ್ತೆ!
ಮೊದಲು ಅಪರಿಚಿತರು ಧಾರ್ಮಿಕ ಸ್ಥಳಕ್ಕೆ ಆಗಮಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಸಮೀಪದ ಪೊಲೀಸ್ ಠಾಣೆ ಮೇಲೆಯೂ ಗುಂಡಿನ ದಾಳಿ ನಡೆಸಿದ್ದು, ನಂತರ ಪೊಲೀಸರು ಮತ್ತು ದಾಳಿಕೋರರ ನಡುವೆ ಗುಂಡಿನ ಚಕಮಕಿ ಆರಂಭವಾಯಿತು.ಮಾಹಿತಿ ಲಭಿಸಿದ ತಕ್ಷಣ ಆ ಪ್ರದೇಶದಲ್ಲಿದ್ದ ವಿಶೇಷ ಪಡೆ ತಂಡವೂ ಆಗಮಿಸಿ ದಾಳಿಕೋರರನ್ನು ಸುತ್ತುವರಿಯಲು ಆರಂಭಿಸಿತು. ದಾಳಿಯಲ್ಲಿ ಇಬ್ಬರು ದಾಳಿಕೋರರು ಹತರಾಗಿದ್ದಾರೆ.
ತಮ್ಮನ್ನು ಸುತ್ತುವರೆದಿರುವುದನ್ನು ನೋಡಿದ ದಾಳಿಕೋರರು ಬಿಳಿ ಫೋಕ್ಸ್‌ವ್ಯಾಗನ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಗುಂಡಿನ ದಾಳಿಯಿಂದಾಗಿ ಪ್ರಾರ್ಥನಾ ಮಂದಿರಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಇಂದು ಸೂರಜ್ ಪರ ಜಾಮೀನು ಅರ್ಜಿ ಸಲ್ಲಿಕೆ- ವಕೀಲ ನಿಖಿಲ್ ಕಾಮತ್

