ಚಂಡೀಗಢ: ಇತ್ತಿಚೆಗೆ ಬಾಂಬ್ ಬೆದರಿಕೆಗಳು (Bomb Threat) ಹೆಚ್ಚಾಗಿದ್ದು, ಇದೀಗ ಚಂಡೀಗಢದ (Chandigarh) ಮಾನಸಿಕ ಆರೋಗ್ಯ (Mental Health) ಆಸ್ಪತ್ರೆಗೆ ದುಷ್ಕರ್ಮಿಗಳು ಬಾಂಬ್ ಬೆದರಿಕೆಯ ಇ-ಮೇಲ್ (E-Mail) ಕಳುಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಂಬ್ ಬೆದರಿಕೆ(Bomb Threat)ಗಳು ಹೆಚ್ಚಾಗುತ್ತಿವೆ, ಶಾಲೆ, ಆಸ್ಪತ್ರೆಗಳು, ವಿಮಾನಗಳಿಗೆ ಹೆಚ್ಚಿನ ಬೆದರಿಕೆಗಳು ಬಂದಿವೆ. ಇದೀಗ ಚಂಡೀಗಢದ ಮಾನಸಿಕ ಆಸ್ಪತ್ರೆ(ಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು, ಆತಂಕ ಸೃಷ್ಟಿ ಮಾಡಿದೆ. ಕೂಡಲೇ ರೋಗಿಗಳನ್ನು ಬೇರೆಡೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಅದೇ ಇಮೇಲ್ ಅನ್ನು ದೆಹಲಿ ಮತ್ತು ದಕ್ಷಿಣ ಭಾರತದ ಹಲವಾರು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಕುವೈತ್‌ನಲ್ಲಿ ಅಗ್ನಿ ಅವಘಡ- 4 ಭಾರತೀಯರು ಸೇರಿ 35 ಜನರ ಸಜೀವ ದಹನ
ಇ-ಮೇಲ್ ಮೂಲಕ ಬಂದ ಬಾಂಬ್ ಬೆದರಿಕೆಯ ಬಗ್ಗೆ ನಮಗೆ ಆಸ್ಪತ್ರೆಯಿಂದ ಮಾಹಿತಿ ಬಂದಿದೆ, ತಪಾಸಣೆ ವೇಳೆ ಏನೂ ದೊರೆತಿಲ್ಲ, ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದ ಬಳಿಕ ಆಸ್ಪತ್ರೆ ತೆರೆಯಲಾಗುವುದು ಎಂದು ಡಿಎಸ್ಪಿ ದಲ್ಬೀರ್ ಸಿಂಗ್ ತಿಳಿಸಿದ್ದಾರೆ. ಅದೇ ಇಮೇಲ್ ಅನ್ನು ದೆಹಲಿ ಮತ್ತು ದಕ್ಷಿಣ ಭಾರತದ ಹಲವಾರು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾದಲ್ಲಿ ದರ್ಶನ್ ಅನ್‍ಫಾಲೋ, ಡಿಪಿ ಡಿಲೀಟ್ ಮಾಡಿದ ಪತ್ನಿ ವಿಜಯಲಕ್ಷ್ಮಿ!
ಚಂಡೀಗಢದ ಸೆಕ್ಟರ್ 32 ನಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಯ ಉಪ ವೈದ್ಯಕೀಯ ಅಧೀಕ್ಷಕಿ ಡಾ ಅಪರಾಜಿತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆಗೆ ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳು, ವೈದ್ಯರು ಮತ್ತು ಇತರ ಉದ್ಯೋಗಿಗಳು ಸೇರಿದಂತೆ ಸುಮಾರು 100 ಜನರು ಇದ್ದರು ಎಂದು ಅವರು ಹೇಳಿದರು. ಇದನ್ನೂ ಓದಿ:ಜೂನ್ 24 ರಂದು 18ನೇ ಲೋಕಸಭೆಯ ಅಧಿವೇಶನ ಆರಂಭ