ಬೆಂಗಳೂರು: ಸುಬ್ರಹ್ಮಣ್ಯ ಪುರ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿ (Student) ಪ್ರಬುದ್ಧ ಕೊಲೆ (Prabudhya Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಸಹೋದರನ ಸ್ನೇಹಿತ 14 ವರ್ಷದ ಅಪ್ರಾಪ್ತನನ್ನು ಪೊಲೀಸರು (Police) ಬಂಧಿಸಿದ್ದಾರೆ.
ಮೇ 15 ರಂದು ಸಂಜೆ ಬೃಂದಾವನ ಲೇಟೌಟ್ ನಿವಾಸಿ ಪ್ರಬುದ್ಧ (20) ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಳು. ಮೊದಲಿಗೆ ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದರು. ನಂತರ ಪ್ರಬುದ್ಧಾಳ ತಾಯಿ ನೀಡಿದ ದೂರು ಆಧರಿಸಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದರು. ಇದೀಗ ಶಾಕಿಂಗ್ ಆಂಶವೊಂದು ಪತ್ತೆಯಾಗಿದ್ದು, ಪ್ರಬುದ್ಧಳಾದು ಆತ್ಮಹತ್ಯೆ ಅಲ್ಲ ಕೊಲೆ ಎಂಬುದು ಸಾಬೀತಾಗಿದೆ. ಇದನ್ನೂ ಓದಿ: ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

ತನ್ನ ತಾಯಿ ಹಾಗೋ ಸಹೋದರನ ಜೊತೆ ವಿದ್ಯಾರ್ಥಿನಿ ಪ್ರಬುದ್ಧ ನೆಲೆಸಿದ್ದಳು. ಮನೆಗೆ ಬರುತ್ತಿದ್ದ ತನ್ನ ಸ್ನೇಹಿತರಿಗೆ ಪರಿಚಯವಾಗಿದ್ದಳು. ಈ ಗೆಳೆತನದಲ್ಲಿ ಸ್ನೇಹಿತರು ಆಗಾಗ ಮನೆಗೆ ಬರುತ್ತಿದ್ದರು. ಕೆಲ ದಿನಗಳ ಹಿಂದೆ ಸೋದರನ ಗೆಳೆಯರು ಆಟವಾಡುವಾಗ ಒಬ್ಬಾತನ ಕನ್ನಡಕ ಮುರಿದಿತ್ತು. ಕನ್ನಡಕ ಮುರಿದಿದ್ದರಿಂದ ಆರೋಪಿ ಬಾಲಕನಿಗೆ ರಿಪೇರಿ ಮಾಡಿಸಿ ಕೊಡುವಂತೆ ಮತ್ತೊಬ್ಬ ಸ್ನೇಹಿತ ಹಠ ಹಿಡಿದಿದ್ದ. ಇದಕ್ಕೆ ವೆಚ್ಚವಾಗುವ 2 ಸಾವಿರವನ್ನ ಪ್ರಬುದ್ಧಳ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಇದನ್ನೂ ಓದಿ: ಇಂದು ಭಾರೀ ಮಳೆ ಸಾಧ್ಯತೆ- ಕೇರಳದಲ್ಲಿ 11 ಮಂದಿ ಸಾವು
ಈ ಕಳ್ಳತನ ಸಂಗತಿ ತಿಳಿದ ಪ್ರಬುದ್ಧ, ಹಣ ಮರಳಿಸುವಂತೆ ಬಾಲಕನಿಗೆ ತಾಕೀತು ಮಾಡಿದ್ದಳು. ಮೇ 15ರಂದು ಮಧ್ಯಾಹ್ನ ರಸ್ತೆಯಲ್ಲಿನ ಸಿಸಿಟಿವಿಗಳಲ್ಲಿ ಕಾಣದಂತೆ ಅಕ್ಕಪಕ್ಕದ ಮನೆಯ ಟೆರೇಸ್ ಮೇಲಿಂದ ಆರೋಪಿ ಮನೆಗೆ ಹಿಂದಿನ ಬಾಗಿಲಿನ ಮೂಲಕ ಬಂದು ಪ್ರಬುದ್ಧ ಬಳಿ ತಾನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡು ಕ್ಷಮೆ ಕೋರಿದ್ದಾನೆ. ಈ ಮಾತಿಗೆ ಪ್ರಬುದ್ಧ ಒಪ್ಪದೆ ಇದ್ದಾಗ ಆಕೆಯ ಕಾಲು ಹಿಡಿಯಲು ಆತ ಮುಂದಾಗಿದ್ದಾನೆ. ಈ ವೇಳೆ ತಳ್ಳಾಟದಲ್ಲಿ ಪ್ರಬುದ್ಧ ಕೆಳಗೆ ಬಿದ್ದು ಪ್ರಜ್ಞಾಹೀನಾಳಾಗಿದ್ದಾಳೆ. ಈ ಅವಕಾಶವನ್ನು ಬಳಸಿಕೊಂಡ ಆತ, ಪ್ರಬುದ್ಧಳ ಕುತ್ತಿಗೆ ಹಾಗೂ ಕೈಯನ್ನು ಚಾಕುವಿನಿಂದ ಕುಯ್ದು ಮನೆಯಿಂದ ಓಡಿ ಹೋಗಿದ್ದಾನೆ. ಇದನ್ನೂ ಓದಿ: ಇಂದು ಆರನೇ ಹಂತದ ಚುನಾವಣೆ- 58 ಕ್ಷೇತ್ರಗಳಿಗೆ ಮತದಾನ

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಈ ಹಿಂದೆ ಮೂರು ಬಾರಿ ಚಾಕುವಿನಿಂದ ಕೈ ಕುಯ್ದುಕೊಂಡು ಪ್ರಬುದ್ಧ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಸಂಗತಿಯನ್ನು ತನ್ನ ಗೆಳೆಯನಮುಂದೆ ಆಕೆಯ ಸೋದರ ಹೇಳಿಕೊಂಡಿದ್ದ. ಹೀಗಾಗಿಯೇ ಪ್ರಬುದ್ಧಳಿಗೆ ಕೈ ಮತ್ತು ಕುತ್ತಿಗೆ ಚಾಕುವಿನಿಂದ ಇರಿದು ಆತ್ಮಹತ್ಯೆ ಎಂದು ಬಿಂಬಿಸಲು ಆತ ಯತ್ನಿಸಿದ್ದ. ಅಂತೆಯೇ ಸಂಚು ರೂಪಿಸಿ ಆತ ಕಾರ್ಯಗತಗೊಳಿಸಿದ್ದ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್
ಸದ್ಯ ಈ ಕುರಿತು ಸುಬ್ರಹ್ಮಣ್ಯ ಪೊಲೀಸರು ವಿಚಾರಣೇ ನಡೆಸುತ್ತಿದ್ದಾರೆ.

