ನವದೆಹಲಿ: ಕೇರಳದ (Kerala) ಕಾಸರಗೋಡಿನಲ್ಲಿ (Kasaragod) ನಡೆದ ಅಣಕು ಮತದಾನದಲ್ಲಿ ವಿದ್ಯನ್ಮಾನ ಮತಯಂತ್ರಗಳು ಬಿಜೆಪಿಗೆ ಹೆಚ್ಚುವರಿ ಮತವನ್ನು ದಾಖಲಿಸುತ್ತಿವೆ ಎಂಬ ವದರಿ ಸುಳ್ಳು ಎಂದು ಚುನಾವಣೆ ಆಯೋಗ ತಿಳಿಸಿದೆ.
ಒಂದು ಹೆ ಚಚುವರಿ ಮತವನ್ನು ಮತಯಂತ್ರಗಳನ್ನು ದಾಖಲಿಸುತ್ತಿವೆ ಎಂಬ ಸುದ್ದಿ ವರದಿಯನ್ನು ಭಾರತ ಚುನಾವಣಾ ಆಯೋಗ ಗುರುವಾರ ನಿರಾಕರಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಹಾಜರಿದ್ದ ಚುನಾವಣಾ ಆಯೋಗದ ಅಧಿಕಾರಿ ವರದಿ ಮಾಡಿರುವ ಮತ್ತು ಉಲ್ಲೇಖಿಸಿದ ಸುದ್ದಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದ್ಯ ನೀತಿ ಹಗರಣ: ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ
ಹೆಚ್ಚುವರಿ ಮತ ಬಿದ್ದ ಸುದ್ದಿಗಳು ಸುಳ್ಳು. ನಾವು ಜಿಲ್ಲಾಧಿಕಾರಿಯವರ ಆರೋಪವನ್ನು ಪರಿಶೀಲಿಸಿದ್ದೇವೆ ಮತ್ತು ಅವು ಸುಳ್ಳು ಎಂದು ತೋರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ವಿವರವಾದ ವರದಿಯನ್ನು ಸಲ್ಲಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠಕ್ಕೆ ಹಿರಿಯ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರು ತಿಳಿಸಿದರು. ಇದನ್ನೂ ಓದಿ: ಸ್ಮೋಕ್ ಬಿಸ್ಕೆಟ್ ತಿಂದು ಬಾಲಕ ಅಸ್ವಸ್ಥ