ಬೆಂಗಳೂರು: ಬಾಡಿಗೆ (Rent) ಮನೆ ಹುಡುಕ್ತಿದ್ದವರನ್ನು ಅದೇ ಮನೇಲಿ ಕೂಡಿಟ್ಟು ಹಲ್ಲೆ ಮಾಡಿರುವ ಘಟನೆ ಯಾಲಾಂಕ್ (Yelhanaka) ನ್ಯೂ ಟೌನ್‌ನಲ್ಲಿ ನಡೆದಿತ್ತು ಇದೀಗ ಆರೋಪಿಗಳು ಪೊಲೀಸರ (Police) ಬಲ್ಲೆಗೆ ಬಿದಿದ್ದಾರೆ.
ವಿವೇಕ್, ಅನಮಿತ್ರ, ಯುವರಾಜ್, ಅರಿತ್ರೀಜಿತ್, ಪ್ರಜೀತ್, ಅಲೆನ್ ಕರನ್ ಬಂಧಿತ ವಿಧ್ಯಾರ್ಥಿಗಳು. ಈ ಏಳೂ ಜನ ಕೂಡ ಉತ್ತರ ಭಾರತ ಮೂಲದವರು. ರಾಜನಕುಂಟೆಯ ಖಾಸಗಿ ಕಾಲೇಜ್ ನಲ್ಲಿ ಓದ್ತಿದ್ದವ್ರು . ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಕೃಷ್ಣ ಮತ್ತು ಯುವರಾಜ್ ಎಂಬ ಇಬ್ಬರನ್ನ ಕೂಡಿಹಾಕಿ ಹಲ್ಲೆ ಮಾಡಿದ್ದವರು. ಕಾಲೇಜ್‌ನಲ್ಲಿ ಶುರುವಾಗಿದ್ದ ಕಾಲೇಜು ಹುಡುಗರ ಗಲಾಟೆ ಕಿಡ್ನಾಪ್ ಲೆವೆಲ್‌ಗೂ ಬಂದು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇಬ್ಬರನ್ನ ಕೂಡಿ ಹಾಕಿ ರಾಡ್‌ನಿಂದ ಹಲ್ಲೆ ಮಾಡಿದ್ದ ಆರೋಪಿಗಳನ್ನ ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಾಡಿಗೆ ಮನೆ ನೋಡಲು ಹೋಗಿದ್ದ ವಿದ್ಯಾಥಿಗಳನ್ನು ಮೇಲೆ ಹಲ್ಲೆ
ಈ ಎರಡೂ ಗ್ಯಾಂಗ್‌ಗಳಿಗೆ ಕಾಲೇಜಿನಲ್ಲೇ ಜಗಳ ಆಗ್ತಿತ್ತು. ಕಳೆದ ಹದಿನೈದು ದಿನಗಳ ಹಿಂದಷ್ಟೇ ಎರಡೂ ಗ್ಯಾಂಗ್‌ಗಳ ಮಧ್ಯೆ ಜಗಳವಾಗಿತ್ತು. ಮೊನ್ನೆ ಯಲಹಂಕ ಠಾಣಾ ವ್ಯಾಪ್ತಿಯ ಅನಂತಪುರ ಏರಿಯಾದಲ್ಲಿ ಕೃಷ್ಣ ಮತ್ತು ಅಜಯ್ ಇಬ್ಬರೂ ಬಾಡಿಗೆ ಮನೆ ಹುಡುಲ್ಲೆಂದು ಹೋಗಿದ್ದರು. ಇವ್ರಿಬ್ಬರ ಮೇಲೂ ಕಣ್ಣಿಟ್ಟಿದ್ದ ಏಳೂ ಜನರ ಗ್ಯಾಂಗ್ ಅವತ್ತು ಇಬ್ಬರನ್ನೂ ಫಾಲೋ ಮಾಡಿ ಕೃಷ್ಣ ಮತ್ತು ಯುವರಾಜ್ ಬಾಡಿಗೆಗೆ ಮನೆಯೊಂದರಲ್ಲಿ ನೋಡೋಕೆ ಒಳ ಹೊಕ್ಕಿದ್ದ ವೇಳೆ ಇಬ್ಬರನ್ನೂ ಫಾಲೋ ಮಾಡಿದ್ದ ಗ್ಯಾಂಗ್ ಅದೇ ಮನೆಯಲ್ಲಿ ಇಬ್ಬರನ್ನೂ ಕೂಡಿ ಹಾಕಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಕೃಷ್ಣ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಂತರ ಆತನನ್ನ ಬೆತ್ತಲೆಗೊಳಿಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಿನ ಉಷ್ಣಾಂಶ – 5 ದಿನ ಆರೆಂಜ್ ಅಲರ್ಟ್
ಈ ಬಗ್ಗೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಡಿಸಿಪಿ ಅವರು ಮಾತನಾಡಿ, ಫಾಲೋ ಮಾಡಿ ಕೂಡಿ ಹಾಕಿ ಹಲ್ಲೆ ಮಾಡಿದ್ದ ಆರೋಪಿಗಳು ನಂತರ ಅವರ ಬಳಿಯ ಹಣದ ಮೇಲೂ ಕಣ್ಣಾಕಿದ್ದರು. ಅವರ ಅಕೌಂಟ್‌ನಲ್ಲಿದ್ದ 50 ಸಾವಿರ ಹಣ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರಂತೆ. ಇದಲ್ಲದೇ ಐವತ್ತು ಲಕ್ಷ ಹಣಕ್ಕೆ ಬೇಡಿಕೆಯೂ ಇಟ್ಟಿದ್ದರು. ಇಷ್ಟೆಲ್ಲಾ ಮಾಡಿ ಎಸ್ಕೇಪ್ ಆಗಿದ್ದ ಏಳೂ ಜನರ ಬಗ್ಗೆ ತನಿಖೆ ಕೈಗೊಂಡಿದ್ದ ಯಲಹಂಕ ನ್ಯೂ ಟೌನ್ ಪೊಲೀಸರು ಎಲ್ಲರನ್ನೂ ಅರೆಸ್ಟ್ ಮಾಡಿದ್ದು, ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಜೈಲಿಗೆ ಕಳಿಸಲಾಗಿದೆ.. ಓದಿಕೊಳ್ಳೋ ವಿದ್ಯಾರ್ಥಿಗಳು ಇಂತಹ ಕೃತ್ಯಕ್ಕೆ ಮುಂದಾಗಿದ್ದು ಬೇಸರ ಸಂಗತಿ ಎಂದಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024: 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ; ಕ್ಷೇತ್ರಗಳ ವಿವಿರ

