ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕಳೆದ ವರ್ಷ ಮೈಸೂರಿಗೆ (Mysuru) ಬಂದಿದ್ದ ಸಂದರ್ಭದಲ್ಲಿ ವಾಸ್ತವ್ಯ ಹೂಡಿದ್ದ ಹೋಟೆಲ್ (Hotel) ಕೊಠಡಿಯ ಬಿಲ್ ಪಾವತಿಸದ ಅರಣ್ಯ ಇಲಾಖೆ (Forest Department) ವಿರುದ್ಧ ಇದೀಗ ಹೋಟೆಲ್ ವ್ಯವಸ್ಥಾಪಕರು ರೊಚ್ಚಿಗೆದ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ವೇಳೆ ಮೈಸೂರಿನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಕಾರ್ಯಕ್ರಮದ ಒಟ್ಟು ವೆಚ್ಚ 6 ಕೋಟಿ ರೂ. ಆಗಿತ್ತು. ಆದರೆ ಇದುವರೆಗೆ 3 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಆಗಿದೆ. ಇದನ್ನೂ ಓದಿ: ಮಳೆಯಿಂದಾಗಿ ರಾಜಕಾಲುವೆಗೆ ಉರುಳಿದ ಆಟೋ – ಚಾಲಕ ಸಾವು
ಜೂನ್ 1ರ ಒಳಗೆ 80 ಲಕ್ಷ ಬಿಲ್ ಕಟ್ಟದಿದ್ದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆಯನ್ನು ನೀಡಿದ್ದರೆ. ಮೆ.21 ರಂದು ಅರಣ್ಯ ಇಲಾಖೆ ಅಧಿಕಾರಿಗೆ ಹೋಟೆಲ್ ವ್ಯವಸ್ಥಾಪಕರು ಪತ್ರ ಬರೆದಿರುವ ಅವರು, 18% ಬಡ್ಡಿ ಸಮೇತ 80 ಲಕ್ಷ ಪಾವತಿಸಿ ಎಂದು ತಿಳಿಸಿದ್ದಾರೆ. ಅಲ್ಲದೇ ಜೂನ್ 1ರ ಒಳಗೆ ಬಿಲ್ ಕಟ್ಟದಿದ್ದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯಗೆ ಪರಿಷತ್ ಸ್ಥಾನಕ್ಕಾಗಿ ಒಪ್ಪಂದ ಆಗಿತ್ತು: ಸತೀಶ್ ಜಾರಕಿಹೊಳಿ
ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ಬಾಕಿ ಹಣ ಬರಬೇಕಿದೆ. ಹಣ ತುರ್ತಾಗಿ ಬಿಡುಗಡೆ ಮಾಡಿ ಎಂದು ರಾಜ್ಯ ಅರಣ್ಯ ಇಲಾಖೆಯಿಂದ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ರವಾನೆಯಾಗಿದೆ. ಆದರೆ ವರ್ಷ ಕಳೆದರೂ ಹೋಟೆಲ್ ಬಿಲ್ ಪಾವತಿಸಿಲ್ಲ.ಇದನ್ನೂ ಓದಿ: ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿಷೇಧ

